ರಾಯಚೂರು: ಹತಾಶೆಯಿಂದ ನಾವು ಪಾದಯಾತ್ರೆ ಮಾಡುತ್ತಿಲ್ಲ. ಜನ ಸುಮ್ಮನೆ ಇಲ್ಲ, ಎಲ್ಲಾ ನಾಟಕ ನೋಡುತ್ತಿದ್ದಾರೆ. ಸೂಟ್‌ಕೇಸ್ ಹಿಡಿದುಕೊಂಡು ಸಚಿವ ಸ್ಥಾನಕ್ಕೆ ಓಡಾಡುತ್ತಿರುವುದು ಎಲ್ಲರಿಗೂ ಗೊತ್ತಿದೆ. ಪಾದಯಾತ್ರೆ ಬಳ್ಳಾರಿಗೆ ಹೋಗುವುದರೊಳಗೆ ಎಲ್ಲರ ಬಂಡವಾಳ ಬಯಲು ಮಾಡುತ್ತೇವೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು (B Sriramulu) ಹೇಳಿದ್ದಾರೆ.
ಬಳ್ಳಾರಿ ಚಲೋ (Ballari Chalo) ಪಾದಯಾತ್ರೆ ವೇಳೆ ಮಸ್ಕಿಯ ಸಂತೆಕೆಲ್ಲೂರಿನಿಂದ ಪಾದಯಾತ್ರೆ ಆರಂಭಿಸಿದ ವೇಳೆ ಮಾತನಾಡಿದ ಶ್ರೀರಾಮುಲು, ಭ್ರಷ್ಟರಿಗೆ ತಕ್ಕ ಪಾಠ ಕಲಿಸುತ್ತೇವೆ, ಬಹಳಷ್ಟು ಇಲಾಖೆಯಲ್ಲಿ ಭ್ರಷ್ಟಾಚಾರ (Corruption) ಆಗಿದೆ ಎಂದರು. ಇದನ್ನೂ ಓದಿ: ಬಳ್ಳಾರಿ ಚಲೋ ಪಾದಯಾತ್ರೆ ವೇಳೆ ವಿಜಯೇಂದ್ರ ಬರ ಪರಿಶೀಲನೆ
ದಲಿತ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ನಾವು ಪಾದಯಾತ್ರೆ ಮಾಡುತ್ತಿದ್ದೇವೆ. ನಾವು ಎರಡನೆ ದಿನದ ಪಾದಯಾತ್ರೆ ಆರಂಭಿಸಿದಾಗಲೇ ಕಾಂಗ್ರೆಸ್ ಶಕ್ತಿ ಕಳೆದುಕೊಳ್ಳುವ ಕೆಲಸ ಆಗಿದೆ. 2028ಕ್ಕೆ ನಮ್ಮದೇ ಸರ್ಕಾರ ಅಂತ ಡಿಕೆಶಿ ಬಾಯಿ ಬಡಿದುಕೊಳ್ಳುತ್ತಿದ್ದಾರೆ, ಇವತ್ತು ಅವರ ಶಕ್ತಿ ಕುಗ್ಗಿದೆ ಎಂದು ಹೇಳಿದರು. ಇದನ್ನೂ ಓದಿ: ರಾಹುಲ್ ಗಾಂಧಿಯನ್ನ ರಾಜಕೀಯವಾಗಿ ಮುಗಿಸುವ ಸಂಚು ನಡೆದಿದೆ: ಕೇಂದ್ರದ ವಿರುದ್ಧ ಸಿಡಿದ ಸಿದ್ರಾಮಯ್ಯ
ರಾಜಣ್ಣನವರ ರಾಜೀನಾಮೆ ಪಡೆದು ಕಾಂಗ್ರೆಸ್ ದಲಿತರಿಗೆ ದ್ರೋಹ ಮಾಡಿದೆ. ಎಸ್‌ಐಆರ್ ವಿಚಾರದಲ್ಲಿ ರಾಹುಲ್ ಗಾಂಧಿ ಬಗ್ಗೆ ಮಾತನಾಡಿದಾರೆ ಅಂತ ಅವರ ವಿರುದ್ಧ ಕ್ರಮ ತೆಗೆದುಕೊಂಡಿದ್ದಾರೆ. ಈಗ ದಲಿತರ ಬಗ್ಗೆ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ.ರಾಜಣ್ಣನವರನ್ನ ವಾಪಸ್ ಪಡೆಯಬೇಕು. ದಲಿತ ವಿರೋಧಿ ಬಿಜೆಪಿ ಅಲ್ಲಾ, ಅದು ಕಾಂಗ್ರೆಸ್ ಸರ್ಕಾರ. ಕಾಂಗ್ರೆಸ್ ಸರ್ಕಾರ ಸೂಟ್‌ಕೇಸ್ ಸರ್ಕಾರ. ಸೂಟ್ ಕೇಸ್ ಕೊಟ್ಟವರಿಗೆ ಮಾತ್ರ ಬೆಲೆಯಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಭೂ ಮಂಜೂರಾತಿಗಾಗಿ ಮಾಜಿ ಯೋಧ ಆತ್ಮಹತ್ಯೆಗೆ ಯತ್ನ
ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ವಿರುದ್ಧ ನಾಗೇಂದ್ರ ಹರಿಹಾಯ್ದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾಗೇಂದ್ರ ಹೇಳಿಕೆಗಳಿಗೆ ನಾನು ಉತ್ತರ ಕೊಡಲ್ಲ. ಅವರ ಮಾತನ್ನ ಸಿರೀಯಸ್ ಆಗಿ ತೆಗೆದುಕೊಳ್ಳಲ್ಲ. 2028ರ ಚುನಾವಣೆಯಲ್ಲಿ ಜನ ಎಲ್ಲಾ ತೀರ್ಮಾನ ಮಾಡುತ್ತಾರೆ. ಚಲಾವಣೆಯಲ್ಲಿರುವ ನಾಣ್ಯಗಳು ಯಾವುವು ಅಂತ ಚುನಾವಣೆ ವೇಳೆ ಗೊತ್ತಾಗುತ್ತದೆ ಎಂದರು. ಇದನ್ನೂ ಓದಿ: ಮುಂದಿನ 10 ವರ್ಷಗಳಲ್ಲಿ ದೇಶದಲ್ಲಿ 100 ಹೊಸ ವಿಮಾನ ನಿಲ್ದಾಣ: 30,000 ಕೋಟಿ ಹೂಡಿಕೆ
