– ರೈತರ ಪಾಲಿಗೆ ಸರ್ಕಾರ ಬದುಕಿದ್ದು ಸತ್ತಂತಾಗಿದೆ: ವಿಜಯೇಂದ್ರ ಆಕ್ರೋಶ
ರಾಯಚೂರು: ʻಬಳ್ಳಾರಿ ಚಲೋʼ ಪಾದಯಾತ್ರೆ ವೇಳೆ ಮಸ್ಕಿ ತಾಲೂಕಿನ ಬೇಡರಕಾರಲಕುಂಟಿ ಗ್ರಾಮದ ಜಮೀನಿನಲ್ಲಿ (BJP) ಬಿಜೆಪಿ ರಾಜಾಧ್ಯಕ್ಷ ಬಿ.ವೈ ವಿಜಯೇಂದ್ರ (B.Y. Vijayendra) ಬೆಳೆ ಹಾನಿ ವೀಕ್ಷಣೆ ಮಾಡಿದರು.
ರೈತ ದುರ್ಗೇಶ್, ತಿಮ್ಮಣ್ಣ ಬೆಳೆದ ಸಜ್ಜೆ ಬೆಳೆ ಹಾಳಾಗಿರುವುದನ್ನ ಪರಿಶೀಲಿಸಿದರು. ಬಳಿಕ ಮಾತಮಾಡಿ, ರೈತ ದುರ್ಗೇಶ ಎರಡು ಬಾರಿ ಸಜ್ಜೆ ಬಿತ್ತನೆ ಮಾಡಿದ್ದು ಬೆಳೆ ಬಂದಿಲ್ಲಾ. ಮಳೆಯಿಲ್ಲದೆ ಬೆಳೆ ನಾಶವಾಗಿದೆ. ಆದರೆ ಈ ಭಾಗದ ಶಾಸಕರು, ಅಧಿಕಾರಿಗಳು ರೈತರನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಬರಗಾಲ ಪರಸ್ಥಿತಿಯನ್ನ ತೋರಿಸಲು ಲಂಚ ಕೊಡುವ ಪರಸ್ಥಿತಿ ಬಂದಿದೆ. ರೈತರ ಕಷ್ಟ ಕೇಳದಿದ್ದರೆ ರೈತರ ಪಾಲಿಗೆ ಈ ಸರ್ಕಾರ ಬದುಕಿದ್ದು ಸತ್ತಂತ್ತಾಗಿದೆ ಅಂತ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಮುಂದಿನ 10 ವರ್ಷಗಳಲ್ಲಿ ದೇಶದಲ್ಲಿ 100 ಹೊಸ ವಿಮಾನ ನಿಲ್ದಾಣ: 30,000 ಕೋಟಿ ಹೂಡಿಕೆ

ಈಗ ಸ್ವತಃ ಉತ್ತರ ಕರ್ನಾಟಕ ಭಾಗದಲ್ಲಿ ಸಿಎಂ ಬರ ಪರಿಶೀಲನೆ ನಡೆಸಿರುವುದು ನಮಗೆ ಸಿಕ್ಕ ಎರಡನೇ ವಿಜಯವಾಗಿದೆ. ನಾಗೇಂದ್ರ ರಾಜಿನಾಮೆ ಮೊದಲನೆ ಜಯ. ನಮ್ಮ ಪಾದಯಾತ್ರೆ ಎರಡನೇ ದಿನಕ್ಕೆ ಕಾಲಿಟ್ಟಾಗಲೇ ಎರಡನೇ ಜಯ ಸಿಕ್ಕಿದೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ರಾಹುಲ್ ಗಾಂಧಿಯನ್ನ ರಾಜಕೀಯವಾಗಿ ಮುಗಿಸುವ ಸಂಚು ನಡೆದಿದೆ: ಕೇಂದ್ರದ ವಿರುದ್ಧ ಸಿಡಿದ ಸಿದ್ರಾಮಯ್ಯ
