Bengaluru City
ಗಮನಿಸಿ, ಮತದಾನದ ಅವಧಿ 1 ಗಂಟೆ ವಿಸ್ತರಣೆ

ಬೆಂಗಳೂರು: ಮೇ 12 ರಂದು ನಡೆಯುವ ವಿಧಾನಸಭಾ ಚುನಾವಣೆಗೆ ಸಂಜೆ 6 ಘಂಟೆವರೆಗೂ ಮತದಾನಕ್ಕೆ ಅವಕಾಶ ಇರಲಿದೆ ಎಂದು ಸುದ್ದಿಗೋಷ್ಠಿ ನಡೆಸಿದ ರಾಜ್ಯ ಚುನಾವಣಾ ಆಯುಕ್ತ ಸಂಜೀವ್‍ಕುಮಾರ್ ಹೇಳಿದ್ದಾರೆ.
ಬೆಳಗ್ಗೆ 7 ಘಂಟೆಯಿಂದ ಸಂಜೆ 6 ಘಂಟೆವರೆಗೂ ಮತದಾನಕ್ಕೆ ಅವಕಾಶ ಇರಲಿದೆ. ಈ ಹಿಂದಿನ ಚುನಾವಣೆಗಳಲ್ಲಿ ಸಂಜೆ 5 ಘಂಟೆಗೆ ಮತದಾನ ಪ್ರಕ್ರಿಯೆ ಮುಕ್ತಾಯವಾಗುತಿತ್ತು ಎಂದು ತಿಳಿಸಿದರು.
ಮತದಾನದ ಜಾಗೃತಿಗೆ ಸಾಹಿತಿ ಚಂದ್ರಶೇಖರ ಕಂಬಾರ, ನಟ ಪುನೀತ್, ನಟಿ ಪ್ರಣಿತ ಅವರನ್ನ ಚುನಾವಣಾ ರಾಯಭಾರಿಯಾಗಿ ಆಯ್ಕೆ ಮಾಡಿರೋದಾಗಿ ತಿಳಿಸಿದರು.
ಇದುವರೆಗೆ 155 ನಾಮಪತ್ರ ಸಲ್ಲಿಕೆಯಾಗಿದೆ. ರಾಜ್ಯದ ವಿವಿಧೆಡೆ 34 ಕೋಟಿ ರೂ. ಹಣವನ್ನು ಸೀಜ್ ಮಾಡಲಾಗಿದೆ. ಇವತ್ತು ದೇವನಹಳ್ಳಿಯಲ್ಲಿ 52 ಲಕ್ಷ, ಹೂವಿನಹಡಗಲಿ ಬಳಿ 10 ಲಕ್ಷ ಮೌಲ್ಯದ ಬಂಗಾರ ಹಾಗೂ 1.58 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ ಎಂದು ವಿವರಿಸಿದ್ದಾರೆ.
