ನವದೆಹಲಿ: ಚಲಿಸುತ್ತಿದ್ದ ರೈಲಿನಲ್ಲಿ ಪೂಜೆ ಮಾಡುತ್ತಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಭಾರತೀಯ ರೈಲ್ವೆ (Indian Railways) ಸ್ಪಷ್ಟನೆ ನೀಡಿದೆ. 3 ಲಕ್ಷ ರೂ.ಗೂ ಹೆಚ್ಚಿನ ಹಣ ನೀಡಿ ಖಾಸಗಿ ಕೋಚ್‌ನ್ನು ಬುಕ್ ಮಾಡಿಕೊಂಡಿದ್ದರು ಎಂದು ತಿಳಿಸಿದೆ.
ಈ ಕುರಿತು ಭಾರತೀಯ ರೈಲ್ವೆ ಉತ್ತರ ವಿಭಾಗ (Northern Railway) ಮಾಹಿತಿ ಹಂಚಿಕೊಂಡಿದೆ. ಪೂಜೆ ನಡೆದಿರುವುದು ರೈಲಿನ ಸಾಮಾನ್ಯ ಬೋಗಿಯಲ್ಲಲ್ಲ. ಬದಲಿಗೆ ವ್ಯಕ್ತಿಯೊಬ್ಬರು 3 ಲಕ್ಷ ರೂ.ಗೂ ಅಧಿಕ ಹಣ ನೀಡಿ ಐಆರ್‌ಸಿಟಿಸಿ ವೆಬ್‌ಸೈಟ್‌ನ ವಾಣಿಜ್ಯ ಬುಕ್ಕಿಂಗ್ ವ್ಯವಸ್ಥೆಯ ಮೂಲಕ ಐಷಾರಾಮಿ ಕೋಚ್‌ನ್ನು (Saloon Coah) ಬುಕ್ ಮಾಡಿದ್ದರು. ಅದರಂತೆ ಆ ಬೋಗಿಯನ್ನು ರೈಲಿಗೆ ಜೋಡಿಸಿದ್ದರು. ಹಾಗಾಗಿ ಆ ಬೋಗಿಯಲ್ಲಿ ಕಾರ್ಯಕ್ರಮ ನಡೆಸಿರುವುದು ಕಾನೂನುಬದ್ಧ ಎಂದು ತಿಳಿಸಿದೆ. ಇದನ್ನೂ ಓದಿ: ಗಿನ್ನೀಸ್ ದಾಖಲೆಗಾಗಿ 6 ವರ್ಷದ ಮೊಮ್ಮಗಳಿಗೆ ಕಾರು ಚಲಾಯಿಸಲು ಕೊಟ್ಟ ತಾತ – ಸಬ್ ಇನ್ಸ್‌ಪೆಕ್ಟರ್ ವಿರುದ್ಧ FIR
ಜುಲೈ 8ರಂದು ಐಆರ್‌ಸಿಟಿಸಿ (IRCTC) ಮೂಲಕ ಐಷಾರಾಮಿ ಕೋಚ್‌ನ್ನು ಬುಕ್ ಮಾಡಲಾಗಿದೆ. ಅಲ್ಲದೇ ಬುಕ್ ಮಾಡಿದವರು 3,08,580 ರೂ. ಮುಂಗಡ ಪಾವತಿ ಮಾಡಿದ್ದಾರೆ. ಹೀಗಾಗಿ ಜುಲೈ 10ರಂದು ನವದೆಹಲಿಯಿಂದ ಮುಂಬೈಗೆ ಏಕಮುಖ ಪ್ರಯಾಣಕ್ಕಾಗಿ ರೈಲು ಸಂಖ್ಯೆ 12926 ಪಶ್ಚಿಮ್ ಎಕ್ಸ್ಪ್ರೆಸ್‌ಗೆ ಈ ಐಷಾರಾಮಿ ಕೋಚ್ ಜೋಡಿಸಲಾಗಿತ್ತು. ಇದರಿಂದ ಸುರಕ್ಷತೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದಿದೆ.
👉🏻 The Saloon Car was booked by IRCTC on 08.07.26.The party made an advance payment of Rs 3,08,580
as commercial booking. The Saloon Car was to be attached in Train No. 12926 Paschim Express on one way journey from New Delhi (NDLS) to Mumbai (BDTS) on 10.07.2026.👉🏻NR issued…
— Northern Railway (@RailwayNorthern) July 12, 2026
ಸಲೂನ್ ಕೋಚ್ ಎಂದರೇನು?
ಈ ಬೋಗಿಯು ಸಾಮಾನ್ಯ ರೈಲಿನ ಬೋಗಿಗಳಿಗಿಂತ ಸಂಪೂರ್ಣ ಭಿನ್ನವಾಗಿರುತ್ತದೆ. ಇದರಲ್ಲಿ ಸುಸಜ್ಜಿತವಾದ ಲಿವಿಂಗ್ ರೂಮ್, ಎರಡು ಬೆಡ್‌ರೂಮ್‌ಗಳು, ಬಾತ್‌ರೂಮ್‌ಗಳು, ಅಡುಗೆ ಕೋಣೆ ಮತ್ತು ಡೈನಿಂಗ್ ಟೇಬಲ್ ಇರುತ್ತವೆ. ಇದು ಹೋಟೆಲ್ ರೂಮ್ ಅಥವಾ ಒಂದು ಚಿಕ್ಕ ಮನೆಯಂತೆ ಇದ್ದು, ವಿಶೇಷ ಬಳಕೆಗಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಹೆಚ್ಚಿನ ಸೌಕರ್ಯವನ್ನು ನೀಡುತ್ತದೆ.ಇದನ್ನೂ ಓದಿ: ಮುಖ್ಯ ಕೋಚ್ ಹುದ್ದೆಯಿಂದ ಫ್ಲೆಮಿಂಗ್ ಔಟ್ – ಸಿಎಸ್‌ಕೆಗೆ ಬದಾನಿ ಎಂಟ್ರಿ?
New Delhi Indian Railways has issued a detailed clarification regarding the viral video of a pooja being performed in a saloon coach, stating that none got injured in the incident. In its official statement, the Railways said:”The Saloon Car was booked by IRCTC on July 8, 2026.… pic.twitter.com/2JKJkKo0UL
— NextMinute News (@nextminutenews7) July 13, 2026
ಬ್ರಿಟಿಷರ ಕಾಲದಲ್ಲಿ ಮತ್ತು ಸ್ವಾತಂತ್ರ‍್ಯದ ನಂತರ ಇವುಗಳನ್ನು ಕೇವಲ ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳು ಮತ್ತು ರೈಲ್ವೆಯ ಉನ್ನತ ಅಧಿಕಾರಿಗಳ ಅಧಿಕೃತ ಪ್ರಯಾಣಕ್ಕಾಗಿ ಮಾತ್ರ ಬಳಸಲಾಗುತ್ತಿತ್ತು. ಈಗ ಭಾರತೀಯ ರೈಲ್ವೆ ಸಾಮಾನ್ಯ ಜನರಿಗೂ ಇದನ್ನು ಬಾಡಿಗೆಗೆ ನೀಡುತ್ತಿದೆ. ಮದುವೆ, ಪ್ರವಾಸ ಅಥವಾ ವಿಶೇಷ ಸಮಾರಂಭಗಳಿಗಾಗಿ ಶ್ರೀಮಂತರು ಅಥವಾ ಖಾಸಗಿ ವ್ಯಕ್ತಿಗಳು ಹಣ ಪಾವತಿಸಿ ಇಡೀ ಬೋಗಿಯನ್ನೇ ಬಾಡಿಗೆಗೆ ಪಡೆಯಬಹುದು.
ವೈರಲ್ ಆದ ವಿಡಿಯೋದಲ್ಲಿ ಏನಿದೆ?
ಚಲಿಸುವ ರೈಲಿನೊಳಗೆ ಒಬ್ಬ ಪಾದ್ರಿ ಮತ್ತು ಭಕ್ತರ ಗುಂಪು ಪೂಜೆ ಮಾಡುತ್ತಿದ್ದರು. ಅವರು ಬಿಳಿ ಬಟ್ಟೆ ಧರಿಸಿ ಕೋಚ್ ಒಳಗೆ ಪೂಜೆಯನ್ನು ನಡೆಸುತ್ತಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಜನರು, ರೈಲಿನಲ್ಲಿ ಈ ಕಾರ್ಯಕ್ರಮ ಮಾಡಲು ಪರ್ಮಿಷನ್ ಕೊಟ್ಟಿದ್ದು ಯಾರು? ಈ ರೀತಿ ಧಾರ್ಮಿಕ ಕಾರ್ಯಕ್ರಮಕ್ಕೆ ಅವಕಾಶವಿದ್ಯಾ ಎಂದು ಪ್ರಶ್ನಿಸಿದ್ದರು.ಇದನ್ನೂ ಓದಿ: 2 ದಿನಗಳ ಕಂಬಳಕ್ಕೆ ಕೆರೆಯೂ ಬಲಿ – ಮೈಸೂರಲ್ಲಿ 150ಕ್ಕೂ ಹೆಚ್ಚು ಮರಗಳಿಗೆ ಕತ್ತರಿ!
