ಬೆಂಗಳೂರು: ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇದೆ. ಈಗಲೇ ಏನೂ ಮಾತನಾಡೋಕೆ ಹೋಗುವುದಿಲ್ಲ ಎಂದು ಶಾಸಕ ವಿನಯ್ ಕುಲಕರ್ಣಿ (Vinay Kulkarni) ಪ್ರತಿಕ್ರಿಯಿಸಿದರು.
ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದ ತೀರ್ಪು ಇಂದು ಹೊರಬೀಳಲಿದೆ. ಈ ಕುರಿತು ವಿನಯ್ ಕುಲಕರ್ಣಿ ಮಾತನಾಡಿದ್ದಾರೆ. ನ್ಯಾಯಾಲಯದ ತೀರ್ಪು ಬರುವ ಈ ಸಂದರ್ಭದಲ್ಲಿ ಬೇರೆ ಯಾವ ವಿಚಾರವನ್ನು ನಾನು ಮಾತನಾಡಲ್ಲ ಎಂದು ಇಬ್ಬರು ಪುತ್ರಿಯರ ಜೊತೆ ಕೋರ್ಟ್ಗೆ ಶಾಸಕ ಕುಲಕರ್ಣಿ ತೆರಳಿದರು. ಇದನ್ನೂ ಓದಿ: ಯೋಗೀಶ್ ಗೌಡ ಕೊಲೆ ಕೇಸ್; 10 ವರ್ಷಗಳ ಬಳಿಕ ಬುಧವಾರ ಕೋರ್ಟ್ ತೀರ್ಪು – ವಿನಯ್ ಕುಲಕರ್ಣಿಗೆ ಟೆನ್ಷನ್
ಸತತ 10 ವರ್ಷಗಳ ನಂತರ ವಿಚಾರಣೆ ಬಳಿಕ ಇಂದು ಕೊಲೆ ಕೇಸ್‌ನ ತೀರ್ಪು ಪ್ರಕಟವಾಗಲಿದೆ. ಹೀಗಾಗಿ, ಕುಲಕರ್ಣಿಗೆ ಶಿಕ್ಷೆಯೋ? ಖುಲಾಸೆಯೋ? ಎಂಬ ಆತಂಕ ಹೆಚ್ಚಾಗಿದೆ. ಧಾರವಾಡದಲ್ಲಿ 2016 ಜೂನ್‌ನಲ್ಲಿ ಯೋಗಿಶ್ ಗೌಡ ಕೊಲೆಯಾಗಿತ್ತು. ಶಾಸಕ ವಿನಯ್ ಕುಲಕರ್ಣಿ ಮೇಲೆ ಕೊಲೆಗೆ ಒಳಸಂಚು ಆರೋಪ ಕೇಳಿಬಂದಿತ್ತು. ತನಿಖೆ ನಡೆಸಿದ ಪೊಲೀಸರ ಮುಂದೆ ಆರು ಜನ ಆರೋಪಿಗಳು ಶರಣಾಗಿದ್ದರು. ಯೋಗಿಶ್ ಗೌಡ ಕುಟುಂಬಸ್ಥರ ಮನವಿ ಮೇರೆಗೆ ಸಿಬಿಐಗೆ ನೀಡಲಾಗಿತ್ತು. 2019ರಲ್ಲಿ ಸಿಬಿಐ ಗೆ ನೀಡಿ ರಾಜ್ಯ ಸರ್ಕಾರ ಆದೇಶ ನೀಡಿತ್ತು. ತನಿಖೆ ನಡಸಿದ್ದ ಸಿಬಿಐ ಅಧಿಕಾರಿಗಳು ಶಾಸಕ ವಿನಯ್ ಕುಲಕರ್ಣಿಯನ್ನು ಬಂಧಿಸಿದ್ದರು.
ಸದ್ಯ ವಿನಯ್ ಕುಲಕರ್ಣಿ, ಇಬ್ಬರು ಪೊಲೀಸರು ಸೇರಿದಂತೆ 21 ಜನ ಆರೋಪಿಗಳಿದ್ದಾರೆ. ಆರೋಪಿಗಳ ವಕೀಲರು ಮತ್ತು ಸರ್ಕಾರಿ ವಕೀಲರು ಸಲ್ಲಿಸಿದ್ದ ಲಿಖಿತ ರೂಪದ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದ ಕಾರಣ ಏಪ್ರಿಲ್ 9ರಂದು ಕೋರ್ಟ್ ತನ್ನ ಆದೇಶವನ್ನು ಏಪ್ರಿಲ್ 15ಕ್ಕೆ ಮುಂದೂಡಿತ್ತು.

