Connect with us

Column

ಶಾಸಕಿಯರ ಪ್ರತ್ಯೇಕ ‘ಟಾಯ್ಲೆಟ್’ ಫೈಟ್, ಬೇಡಿಕೆ

Published

on

– ಪವಿತ್ರ ಕಡ್ತಲ
ಮಂ
ಗಳೂರು ಗಲಭೆ, ಸಿಎಎ, ರೈತರ ಸಾಲಮನ್ನಾ ಅಂತಾ ಟಗರು, ಕುಮಾರಣ್ಣ, ಯಡಿಯೂರಪ್ಪ ಎಲ್ಲಾ ಸದನದೊಳಗೆ ಸುಸ್ತು ಮರೆತು ಫೈಟಿಂಗ್‍ಗೆ ಇಳಿದಿದ್ರು. ಆದ್ರೆ ನಮ್ ಮಹಿಳಾ ಶಾಸಕಿಯರು ಇದೆಲ್ಲ ಪ್ರಾಬ್ಲಂ ಅಲ್ಲ, ನಮ್ದು ಅಸಲಿ ಪ್ರಾಬ್ಲಂ ಅಂತಾ ಲಂಚ್ ಬ್ರೇಕ್ ಟೀ ಬ್ರೇಕ್ ಟೈಂನಲ್ಲಿ ಹೆವಿ ಕಿತ್ತಾಡ್ತವ್ರಂತೆ.!

ಏನ್ ನಮ್ಗೆ ಸೆಷನ್‍ನಲ್ಲಿ ಸಿದ್ರಾಮಣ್ಣ, ಕುಮಾರಣ್ಣ, ಬಿಎಸ್‍ವೈ ಮಾತಾನಾಡೋಕೆ ಅವಕಾಶ ಕೊಡಲ್ಲ ಅಂತಾ ಮ್ಯಾಟ್ರಿಗಲ್ಲ ಅಥ್ವಾ ಊರಿಗೆ ಅನುದಾನ ಬಂದಿಲ್ಲ ಅಂತಾನೂ ಅಲ್ಲ ಸ್ವಾಮಿ..! ಬದಲಾಗಿ ಟಾಯ್ಲೆಟ್ ಮ್ಯಾಟ್ರಿಗಂತೆ.! ಮೊದ್ಲೇ ಮಹಿಳಾ ಶಾಸಕಿಯರು ಕಡಿಮೆ ಇದ್ದಾರೆ. ಹಂಗಾಗಿ ಮ್ಯಾನೇಜ್ ಆಗುತ್ತೆ ಅಂತಾ ಒಂದೇ ಟಾಯ್ಲೆಟ್ ಅಧಿವೇಶನದ ಕೊಠಡಿಯ ಪಕ್ಕ ಇದೆ.

ಇಷ್ಟ್ ವರ್ಷ ಹೆಂಗೋ ಅಧಿವೇಶನದ ಒಳಗೆ ಕಿತ್ತಾಡಿಕೊಂಡ್ರೂ ಒಂದೇ ಶೌಚಾಲಯ ಬಳಸುತ್ತಿದ್ದ ಮಹಿಳಾ ಶಾಸಕರಿಗೆ ಈಗ ಇದ್ ದೊಡ್ಡ ಪ್ರಾಬ್ಲಂ ಆಗಿದೆಯಂತೆ. ಪಕ್ಷದ ಲೆಕ್ಕದಲ್ಲಿ ಟಾಯ್ಲೆಟ್ ಕಟ್ಕೊಡಿ ಅಂತಾ ಕಾರ್ಯದರ್ಶಿಗೆ ಡಿಮ್ಯಾಂಡ್ ಇಟ್ಟಿದ್ದಾರಂತೆ. ಕಾಂಗ್ರೆಸ್‍ನವರು ಹೋಗೋ ರೆಸ್ಟ್ ರೂಂಗೆ ನಾವ್ ಹೋಗಲ್ಲ ಅಂತಾ ಬಿಜೆಪಿಯವರು, ಬಿಜೆಪಿಯವರು ಹೋಗೋ ರೆಸ್ಟ್ ರೂಂಗೆ ನಾವ್ ಹೋಗಲ್ಲ ಕಾಂಗ್ರೆಸ್‍ನ ಮಹಿಳಾಮಣಿಗಳು ಕ್ಯಾತೆ ತೆಗೆದಿದ್ದಾರಂತೆ.

ಏನೋ ಹೆಣ್ಣು ಮನಸು ಕಷ್ಟ ಅರ್ಥ ಆಯ್ತದೆ, ನಮ್ ಪ್ರಾಬ್ಲಂನ ಹೋಗಿ ಸದನದಲ್ಲಿ ಡಿಸ್ಕಸ್ ಮಾಡ್ತಾರೆ ಅಂತಾ ವೋಟು ಹಾಕಿದ್ದೀವಿ, ಇವ್ರು ಟಾಯ್ಲೆಟ್‍ಗೆ ಕಿತ್ತಾಡ್ತಾವ್ರ ಗುರು ಅಂತಾ ಜನ ಕನ್‍ಫ್ಯೂಸ್ ಮಾಡ್ಕೊಂಡ್ರೆ, ಮೋಟಮ್ಮನೋರು ಮಾತ್ರ, `ಶೋಭಾ ನೋಡು ಈಗ ಹಿಂಗಾಗದೇ ಸೆಷೆನ್‍ವೊಳಗೆ, ನಮ್ ಟೈಂನಲ್ಲಿ ಪಕ್ಷ ಭೇದ ಎಲ್ಲಾ ಇರ್ಲಿಲ್ಲಪ್ಪ ಅಂತಾ ಡೆಲ್ಲಿಲ್ಲಿದ್ದ ಶೋಭಕ್ಕಂಗೆ ಇಮ್ಮಿಡಿಯೆಟ್ ಮ್ಯಾಟ್ರು ತಿಳಿಸಿದ್ರಂತೆ.!

ಲಾಸ್ಟ್ ಕಿಕ್ – ಗುಸು ಗುಸು ಮಾತು ಟಾಯ್ಲೆಟ್‍ನಲ್ಲಿ ಮಾತುಗಳು ಶುರುವಾಗಿ ಗಾಸಿಪ್ ಆಗಿಬಿಟ್ಟಿದೆ ಅದ್ಕೆ ನಮ್ ಹೆಣ್ಣುಮಕ್ಳು ಬ್ಯಾಸರ ಮಾಡ್ಕೊಂಡಿದ್ದಾರೆ ಬಿಡಿ ಅಂತಾ ಸಿಎಂ ಇಬ್ರಾಹಿಂ ಕಾರಿಡಾರಿನಲ್ಲಿ ಹೇಳ್ಕೊಂಡು ಓಡಾಡ್ತವ್ರಂತೆ.!

ಅಧಿವೇಶನದಲ್ಲಷ್ಟೇ `ಮಾತು(ಧು)ಸ್ವಾಮಿ’..!
ಒಂಚೂರು ನಗದೆ, ಮಾತೆತ್ತಿದ್ರೇ ತೋಳೇರಿಸಿಕೊಂಡು ಜಗಳಕ್ಕೆ ಬೀಳುವ, ಹೇ ಕುತ್ಕೊಳ್ರೀ ನಾನು ಕಂಡಿದ್ದೀನಿ ಅಂತಾ ವಿಪಕ್ಷಗಳ ಬಾಯಿಮುಚ್ಚಿಸುವ ಸೆಷನ್ ಸೆನ್ಸೇಷನಲ್ ಸ್ಟಾರ್ ಸಚಿವ ಮಾಧುಸ್ವಾಮಿಗೆ ಅಧಿವೇಶನ ಟೈಂನಲ್ಲಷ್ಟೇ ಬಿಜೆಪಿ ಮಾತಾನಾಡೋಕೆ ಪರ್ಮಿಶನ್ ಕೊಟ್ಟಿದ್ಯಂತೆ.! ಬೇರೆ ಟೈಂನಲ್ಲಿ ಮಾತಾನಾಡೋ ಹಂಗಿಲ್ಲ, ಮಾಧ್ಯಮದ ಮುಂದೆ ಕಾಣಿಸೋಹಂಗಿಲ್ಲ ಅಂತಾ ಫರ್ಮಾನು ಹೊರಡಿಸಿದೆಯಂತೆ.!

ಮೊದ ಮೊದಲು ಬಿಜೆಪಿ ಪಾಲಿಗೆ ಆಪ್ತರಕ್ಷಕ, ಸದನದಲ್ಲಿ ಸಂಕಟವಾದಗೆಲ್ಲ ಕಾಪಾಡುವ ಶಕ್ತಿಮಾನ್‍ನಂತೆ ಕಾಣಿಸುತ್ತಿದ್ದ ಮಾಧುಸ್ವಾಮಿ ರಫ್ ಆಂಡ್ ಟಫ್ ಪರ್ಸನಾಲಿಟಿ ಅಧಿವೇಶನ ಬಿಟ್ಟು ಹೊರಗಡೆ ವರ್ಕೌಟ್ ಆಗಲ್ವಂತೆ. ಈಗಾಗಲೇ ಥೇಟು ಅಧಿವೇಶನದಲ್ಲಿ ಮುಗಿಬಿದ್ದ ಹಾಗೆ ಸ್ವಾಮೀಜಿ ಮೇಲೆ, ಜನ್ರ ಮೇಲೆ ಮುಗಿಬಿದ್ದು ಮಾಧುಸ್ವಾಮಿ ಬಿಎಸ್‍ವೈ ಪಾಲಿಗೆ ಬಿಸಿ ಕಡುಬು ಥರ ಆಗಿದ್ದಾರೆ.

ಹಾಗಾಗಿ ಬೇರೆ ದಿನಗಳಲ್ಲಿ ಸೈಲೆಂಟ್ ಆಗಿರಿ, ನೀವು ಪಕ್ಷದ ಚಟುವಟಿಕೆಯಿಂದಲೂ ಸ್ವಲ್ಪ ಅಂತರ ಕಾಯ್ದುಕೊಳ್ಳಿ, ಸೆಷನ್‍ನಲ್ಲಿ ಎಷ್ಟು ಬೇಕೋ ಅಷ್ಟು ಒಬ್ರೇ ಮಾತಾನಾಡಿ ಅಂತಾ ಬಿಎಸ್‍ವೈ ಹೇಳಿದ್ದಾರಂತೆ. ಹೀಗಾಗಿ ಅಷ್ಟು ದಿನ ಸೈಲೆಂಟ್ ಆಗಿದ್ದು ಹಾರ್ಟಿನೊಳಗೆ ಅದುಮಿಟ್ಟ ಮಾತು, ಸಿಟ್ಟು, ಕಿಚ್ಚು ರೋಷಾವೇಷ ಎಲ್ಲಾ ಸೇರ್ಕೊಂಡು ಸೆಷನ್‍ನಲ್ಲಿ ವಿಪಕ್ಷಗಳಿಗೆ ಬೈದು ಚಚ್ಚಿ ಬಿಸಾಕಿ ರಿಲ್ಯಾಕ್ಸ್ ಆಗ್ತಾರಂತೆ ಮಾಧುಸ್ವಾಮಿ.

ಲಾಸ್ಟ್ ಕಿಕ್- ಮಾಧುಸ್ವಾಮಿ ಇಡೋ ಕೆಲವು ಟಾಂಗ್, ಖಡಕ್ ಮಾತು ನಮ್ಗಾ, ವಿಪಕ್ಷದವರಿಗಾ ಅಂತಾ ಸಿಎಂ ಕನ್‍ಫ್ಯೂಸ್ ಆಗಿ ಪದೇ ಪದೇ ಮಾಧುಸ್ವಾಮಿ ಮಾತಾನಾಡೋವಾಗ ಹಿಂದಿಂದೆ ತಿರುಗಿ ನೋಡ್ತಾರಂತೆ.

[ಸದಾ ಸೀರಿಯಸ್ ಆಗಿರುವ ಸುದ್ದಿಗಳನ್ನು ಓದಿ, ಓದಿ ನಿಮಗೂ ಬೇಜಾರಾಗಿರುತ್ತೆ. ಸೀರಿಯಸ್ ಓದಿನ ನಡುವೆಯೂ ಸ್ವಲ್ಪ ನವಿರಾದ ಹಾಸ್ಯವೂ ಇರಲಿ ಎಂಬ ಕಾರಣಕ್ಕೆ `ಈ ನ್ಯೂಸ್ ಓದ್ಲೇಬೇಡಿ. ಇದು ತಮಾಷೆಗಾಗಿ..!’ ಅಂಕಣ.]