ನವದೆಹಲಿ: ಆಫೀಸ್ಗೆ ಹೋಗುವ ಸಮಯಗಳಲ್ಲಿ ಮೆಟ್ರೋದಲ್ಲಿ ಸೀಟ್ ಹಿಡಿದುಕೊಳ್ಳುವುದು ದೊಡ್ಡ ಕೆಲಸವಾಗಿ ಹೋಗಿದೆ. ಯಾವಾಗಲೂ ಕಡಿಮೆ ಜನ ಇರುವ ಹಾಗೂ ಕುಳಿತುಕೊಳ್ಳಲು ಸೀಟ್ ಖಾಲಿ ಇರುವ ಸ್ಥಳಗಳನ್ನೇ ಜನರು ಹೆಚ್ಚಾಗಿ ಹುಡುಕುತ್ತಾರೆ. ಒಂದು ಸೀಟು ಸಿಕ್ಕರೆ ಅದನ್ನು ಮತ್ತೊಬ್ಬರಿಗೆ ಬಿಟ್ಟುಕೊಡಲು ಕಷ್ಟಪಡುತ್ತಾರೆ.
ಸದ್ಯ ಇತ್ತೀಚೆಗಷ್ಟೇ ದೆಹಲಿ ಮೆಟ್ರೋದಲ್ಲಿ ಮಹಿಳೆಯರಿಬ್ಬರು ಪ್ರಯಾಣಿಸುವ ವೇಳೆ ಸೀಟಿಗಾಗಿ ಕಿತ್ತಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋವನ್ನು ಪ್ರಯಾಣಿಕರೊಬ್ಬರು ತಮ್ಮ ಫೋನ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಇದನ್ನೂ ಓದಿ: ಈ ಬಾರಿ ಗಣಪನ ಜೊತೆ ಸಾವರ್ಕರ್ ಫೋಟೋ- ಹಿಂದೂ ಸಂಘಟನೆಗಳಿಂದ ಹೊಸ ಪ್ಲ್ಯಾನ್
ಪ್ರತಿಭಾ ಶರ್ಮಾ ಎಂಬವರು ಈ ವೀಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದು, ಸೀರೆಯುಟ್ಟ ಮಹಿಳೆಯೊಬ್ಬರು ಮೆಟ್ರೋದಲ್ಲಿ ಖಾಲಿ ಸೀಟಿನಲ್ಲಿ ಇಟ್ಟಿದ ತಮ್ಮ ಬ್ಯಾಗ್ ಅನ್ನು ಪಕ್ಕಕ್ಕೆ ಸರಿಸಲು ನಿರಾಕರಿಸಿರುವುದನ್ನು ಕಾಣಬಹುದಾಗಿದೆ. ಸೀಟಿಗಾಗಿ ಸೀರೆಯುಟ್ಟ ಮಹಿಳೆಗೆ, ಮತ್ತೋರ್ವ ಮಹಿಳೆ ತಾನು ಕುಳಿತುಕೊಳ್ಳಲು ಜಾಗ ನೀಡಬಹುದಲ್ಲವೇ ಎಂದು ಕೇಳುತ್ತಾರೆ. ಇನ್ನೋರ್ವ ಮಹಿಳೆ ಕೂಡ ಸೀರೆಯುಟ್ಟ ಮಹಿಳೆಗೆ ತಮ್ಮ ಬ್ಯಾಗ್ ಅನ್ನು ಪಕ್ಕಕ್ಕೆ ಸರಿಸುವಂತೆ ಒತ್ತಾಯಿಸುತ್ತಿರುತ್ತಾರೆ. ಆದರೂ ಬ್ಯಾಗ್ ಎತ್ತಿಕೊಳ್ಳಲು ಮಹಿಳೆ ನಿರಾಕರಿದ್ದು, ಕೊನೆಗೆ ರೊಚ್ಚಿಗೆದ್ದ ಮತ್ತೋರ್ವ ಮಹಿಳೆ ಜಗ್ಗದೇ ಸಿಕ್ಕ ಜಾಗದಲ್ಲಿಯೇ ತುರುಕಿಕೊಂಡು ಕುಳಿತುಕೊಳ್ಳುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
View this post on Instagram
ವೀಡಿಯೋ ಜೊತೆಗೆ ಈ ಮಹಿಳೆಗೆ ಮೆಟ್ರೋದಲ್ಲಿ ಬ್ಯಾಗ್ ಇರಿಸಿಕೊಳ್ಳಲು ಸಹ ಸೀಟ್ ಬೇಕಂತೆ ಎಂದು ಕ್ಯಾಪ್ಷನ್ನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಈ ವೀಡಿಯೋಗೆ ವೈರಲ್ ಆಗುತ್ತಿದ್ದು, ನೆಟ್ಟಿಗರು ಕಾಮೆಂಟ್ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಅನೈತಿಕ ಸಂಬಂಧ ಶಂಕೆ – ಪತಿಯ ಗುಪ್ತಾಂಗಕ್ಕೆ ಬಿಸಿ ನೀರು ಎರಚಿದ್ಲು