Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ವಿರೋಧಿ ಬಣಕ್ಕೆ ತೊಡೆ ತಟ್ಟಿದ ವರ್ತೂರು ಸಂತೋಷ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ವಿರೋಧಿ ಬಣಕ್ಕೆ ತೊಡೆ ತಟ್ಟಿದ ವರ್ತೂರು ಸಂತೋಷ್

Cinema

ವಿರೋಧಿ ಬಣಕ್ಕೆ ತೊಡೆ ತಟ್ಟಿದ ವರ್ತೂರು ಸಂತೋಷ್

Public TV
Last updated: February 10, 2024 12:40 pm
Public TV
Share
3 Min Read
varthur santhosh 1 2
SHARE

ವರ್ತೂರ್ ಸಂತೋಷ್ (Varthur Santhosh) ಕೆಂಡ ಕಾರುತ್ತಿದ್ದಾರೆ. ಇದುವರೆಗೆ ಬಿಗ್‌ಬಾಸ್ (Bigg Boss) ಮನೆಯಲ್ಲಿದ್ದರು. ಆಗ ಹೊರಗಿನ ವಿಷಯ ಗೊತ್ತಾಗುತ್ತಿರಲಿಲ್ಲ. ಅಂದರೆ ಊರಿನ ಜನರು ಏನು ಮಾತಾಡುತ್ತಿದ್ದಾರೆ? ವೈಯಕ್ತಿಕ ವಿಷಯಗಳನ್ನು ಹೇಗೆ ಕೆಣಕುತ್ತಿದ್ದಾರೆ? ಯಾವ ರೀತಿ ಗೇಲಿ ಮಾಡುತ್ತಿದ್ದಾರೆ? ಇದೆಲ್ಲವನ್ನೂ ಅವರಿಗೆ ಗೊತ್ತಿರಲಿಲ್ಲ. ಈಗ ಒಂದೊಂದೇ ವಿಷಯ ಹೊರ ಬೀಳುತ್ತಿವೆ. ಅದಕ್ಕಾಗಿಯೇ ಅವರು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಏನಂದರು ಹಳ್ಳಿಕಾರ್ ಹುಡುಗ? ಯಾರಿಗೆ ಎಚ್ಚರಿಕೆ ನೀಡಿದರು ? ಅದರ ಮಾಹಿತಿ ಇಲ್ಲಿದೆ.

varthur santhosh 1 3

ವರ್ತೂರ್ ಸಂತೋಷ್ ಬಿಗ್ ಬಾಸ್ ಮನೆಗೆ ಹೋಗೋವರೆಗೂ ಇವರು ಯಾರಿಗೂ ಹೆಚ್ಚು ಪರಿಚಯ ಇರಲಿಲ್ಲ. ಹಳ್ಳಿಕಾರ್ ಹೋರಿಗಳನ್ನು ಬೆಳೆಸುತ್ತಾ, ಅದರ ಬಗ್ಗೆ ಜನರಿಗೆ ಪ್ರೀತಿ ಹುಟ್ಟಿಸುತ್ತಾ, ನಿಯತ್ತನ್ನು ಬೆಳೆಸುತ್ತಾ ಇದ್ದರು. ಆದರೆ ಯಾವಾಗ ಬಿಗ್ ಬಾಸ್ ಮನೆ ಒಳಗೆ ಕಾಲಿಟ್ಟರೊ ಅಲ್ಲಿಂದ ಇವರು ಕರುನಾಡಿನಲ್ಲಿ ಮೆರವಣಿಗೆ ಹೊರಟರು. ಅದು ಅಂತಿಂಥ ಮೆರವಣಿಗೆ ಅಲ್ಲ. ಎಲ್ಲರೂ ಇವರನ್ನು ಹಳ್ಳಿಕಾರ್ ಹೈದ ಎನ್ನುವ ಬಿರುದನ್ನು ಕೊಟ್ಟರು. ಅದನ್ನೂ ಕೆಲವರಿಗೆ ಸಹಿಸಲು ಆಗಲಿಲ್ಲ. ಆದರೇನಂತೆ ಈಗ ವರ್ತೂರ್ ಸಂತೋಷ್ ಕೂಡ ಸೆಲೆಬ್ರಿಟಿ ಆಗಿದ್ದಾರೆ. ಅದಕ್ಕಾಗಿಯೇ ಹಳ್ಳಿಕಾರ್ ಹೋರಿಗಳ ಜಾತ್ರೆ ಮಾಡುತ್ತಿದ್ದಾರೆ.

varthur santhosh 4

ಹಳ್ಳಿಕಾರ್ ಜಾತ್ರೆ ಮಾಡುವುದಾಗಿ ಮೊದಲೇ ಘೋಷಣೆ ಮಾಡಿದ್ದರು. ಅದಕ್ಕಾಗಿ ಸಕಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈಗ ನೋಡಿದರೆ ಕೆಲವರು ಇವರ ವೈಯಕ್ತಿಕ ಬದುಕನ್ನು ಇಟ್ಟುಕೊಂಡು ಗೇಲಿ ಮಾಡುತ್ತಿದ್ದಾರೆ. ಇವರಿಗೆ ಮದುವೆ ಆಗಿದ್ದನ್ನು ಮುಚ್ಚಿಡಲಿಲ್ಲ. ಮದುವೆಯಾಗಿ ಕೆಲವೇ ದಿನಗಳಲ್ಲಿ ಪತ್ನಿಯಿಂದ ದೂರವಾಗಿದ್ದನ್ನು ಮುಚ್ಚಿಡಲಿಲ್ಲ. ಆದರೆ ಅದ್ಯಾಕೊ ಇವರ ಮೇಲೆ ಕೋಪ ಹುಟ್ಟಿಕೊಂಡಿತು. ಅದು ಹೆಣ್ಣು ಕೊಟ್ಟ ಮಾವನಿಗೆ. ಹೀಗಾಗಿಯೇ ಆ ಮಾವ ಸಂತೋಷ್ ಬಗ್ಗೆ ಪ್ರೆಸ್ ಮೀಟ್ ಮಾಡಿದರು. ಇವರ ಮೇಲೆ ಏನೇನೊ ಆರೋಪ ಹೊರಿಸಿದರು. ಈಗ ಅದೇ ಕಾರಣಕ್ಕೆ ಸಂತೋಷ್ ಕೆಂಡ ಕೆಂಡವಾಗಿದ್ದಾರೆ.

Varthuru Santhosh 1 2

ವರ್ತೂರ್ ಸಂತೋಷ್ ಹಾಗೂ ಬೆಂಕಿ ತನಿಷಾ ಈ ಇಬ್ಬರ ನಡುವೆ ಏನೊ ನಡೆದಿದೆ. ಎನ್ನುವ ಮಾತು ಬಿಗ್‌ಬಾಸ್ ಮನೆ ಒಳಗೆ ಇದ್ದಾಗಲೇ ಕೇಳಿಬಂದಿತ್ತು. ಹಾಗಂತ ಇಬ್ಬರೂ ಅಗತ್ಯಕ್ಕಿಂತ ಹೆಚ್ಚಾಗಿ ಹತ್ತಿರ ಆಗಿರಲಿಲ್ಲ. ಹಾಗಂತ ದೂರವೂ ಇರಲಿಲ್ಲ. ಒಂದು ಗಂಡು ಹೆಣ್ಣು ಹತ್ತಿರ ಇದ್ದಾಗ ಆಕರ್ಷಣೆ ಬೆಳೆಯುವುದು ಸಹಜ. ಅದನ್ನೇ ಹೊರಗಿದ್ದವರು ತಪ್ಪಾಗಿ ತಿಳಿದುಕೊಂಡರು. ಅದನ್ನೇ ಏನೋ ಇದೆ ಎನ್ನುವ ಅರ್ಥದಲ್ಲಿ ಮಾತಾಡಿದರು. ಅದಕ್ಕೆ ತನಿಷಾ ಹಾಗೂ ಸಂತೋಷ್ ಇಬ್ಬರೂ ಸ್ಪಷ್ಟ ಉತ್ತರ ಕೊಡಲಿಲ್ಲ. ಈಗ ಅದೇ ದೊಡ್ಡದಾಗಿದೆ.

Varthur Santhosh 1

ಸಂತೋಷ್ ಮೊದಲೇ ಹಳ್ಳಿ ಹುಡುಗ. ಅವರಿಗೂ ಕೋಪ ತಾಪ ಇರುತ್ತದೆ. ಹೀಗಾಗಿಯೇ ಅದನ್ನು ಅವರು ಬಾಯಿ ಬಿಟ್ಟು ಹೇಳಿದ್ದಾರೆ. ಕಟ್ಟಿಕೊಂಡ ಪತ್ನಿ ಈಗಲೂ ನನ್ನ ಮಾತು ಕೇಳಿ…ಬಂದರೆ ರಾಣಿ ಥರ ನೋಡಿಕೊಳ್ಳುತ್ತೇನೆ ಎಂದಿದ್ದರು. ಅದಕ್ಕೆ ಈಗಲೂ ಅವರು ಬದ್ದರಾಗಿದ್ದಾರೆ. ಆದರೆ ಇದನ್ನು ಸಹಿಸದ ಅಥವಾ ಒಪ್ಪದ ಅಥವಾ ಇನ್ನೊಂದು ಉದ್ದೇಶಕ್ಕಾಗಿಯೇ ಇವರ ಬದುಕಿನಲ್ಲಿ ಹುಳಿ ಹಿಂಡಲು ಸಜ್ಜಾಗಿದ್ಧಾರೆ ಕೆಲವರು. ಅವರಿಗೆ ಸಂತೋಷ್ ಹಾಗಿಗೇ ಮಾತಾಡಿಲ್ಲ. ಅಂತಿಂಥ ರೀತಿ ವಾರ್ನಿಂಗ್ ಕೊಟ್ಟಿಲ್ಲ. ನೋಡೋಣ ನಾನಾ ನೀವಾ ಎಂದು ತೊಡೆ ತಟ್ಟಿದ್ದಾರೆ. ಇಲ್ಲಿಂದಲೇ ಎದ್ದಿದೆ ಬಿರುಗಾಳಿ, ಸುಂಟರಗಾಳಿ.

varthur santhosh

ಸಂತೋಷ್ ಪಕ್ಕಾ ಗ್ರಾಮೀಣ ಪ್ರತಿಭೆ. ಇರುವಷ್ಟು ಜಾಗದಲ್ಲಿ, ಇರುವಷ್ಟು ಬದುಕಿನಲ್ಲಿ ಏನು ಮಾಡಬೇಕು ಅದನ್ನು ಮಾಡುತ್ತಿದ್ದಾರೆ. ಇನ್ನೊಬ್ಬರಿಗೆ ಕೆಟ್ಟದ್ದನ್ನು ಮಾಡುವ ಮನಸೂ ಇಲ್ಲ. ಅಂಥ ಉದ್ದೇಶ ಕೂಡ ಇಲ್ಲ. ಹೀಗಾಗಿಯೇ ಹುಲಿ ಉಗುರಿನ ಸತ್ಯವನ್ನು ಬಿಚ್ಚಿಟ್ಟು ಜೈಲು ಸೇರಬೇಕಾಯಿತು. ಒಬ್ಬ ಸಂತೋಷ್ ಮಾತ್ರ ಸತ್ಯ ಹೇಳಿ ಹದಿನೈದು ದಿನ ಕಣ್ಣೀರಿನಲ್ಲಿ ಕೈ ತೊಳೆದರು. ಅದನ್ನೆಲ್ಲ ಮರೆತು ಸಿನಿಮಾ ಮಾಡಲು ನಿರ್ಧರಿಸಿದ್ದಾರೆ. ಅದಕ್ಕೆ ಕಾಸು ಹಾಕಲು ತಯಾರಾಗಿದ್ಧಾರೆ. ಇದು ಗಟ್ಸ್ ಅಂದರೆ.

ಏನಾದರಾಗಲಿ, ಸಂತೋಷ್ ಈಗ ಹೊರ ಬಂದಿದ್ದಾರೆ. ಹಳ್ಳಿಕಾರ್ ಹೋರಿಗಳ ಜಾತ್ರೆ ಮಾಡಲು ಸಜ್ಜಾಗಿದ್ದಾರೆ. ಅದಕ್ಕಾಗಿ ಎಲ್ಲರನ್ನೂ ಒಂದು ಕಡೆ ಸೇರಿಸುತ್ತಿದ್ದಾರೆ. ಸುದೀಪ್ ಹಾಗೂ ಧ್ರು ಸರ್ಜಾ ಕೂಡ ಇದಕ್ಕೆ ಹಾಜರಿ ಹಾಕುವುದಾಗಿ ಹೇಳಿದ್ದಾರೆ. ಸಾವಿರಾರು ಜನರು ಸೇರಲಿದ್ದಾರೆ. ಇದರಿಂದ ಸಂತೋಷ್‌ಗೆ ಏನೇನೂ ಲಾಭ ಇಲ್ಲ. ಆದರೆ ಅದರಿಂದ ಜನರಿಗೆ ಲಾಭ ಆಗಲಿದೆ. ಮುಂದೊಂದು ದಿನ ಹಳ್ಳಿಕಾರ್ ಹೋರಿಗಳು ಇವರಿಂದ ಇನ್ನಷ್ಟು ಜನಪ್ರಿಯ ಆಗಲಿವೆ. ಅದನ್ನೇ ಇವರು ಬದುಕು ಮಾಡಿಕೊಂಡಿದ್ದಾರೆ. ಅದಕ್ಕೂ ಅಡ್ಡಗಾಲು ಹಾಕುವ ಜನರಿದ್ದರೆ ಅವರನ್ನು ಏನಂತ ಕರೆಯಬೇಕು ? ದೇವರೇ ಉತ್ತರ ಕೊಡುತ್ತಾನೆ ಬಿಡಿ ಸಮಯ ಬಂದಾಗ.

TAGGED:Bigg bosstanisha kuppandaVarthur Santhoshತನಿಷಾ ಕುಪ್ಪಂಡಬಿಗ್ ಬಾಸ್ವರ್ತೂರು ಸಂತೋಷ್
Share This Article
Facebook Whatsapp Whatsapp Telegram

Cinema news

Karen Kshiti Suvarna September 21 set for Cannes market premiere
ಕೇನ್ಸ್‌ನಲ್ಲಿ ಕನ್ನಡ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣಗೆ ಗೌರವ
Cinema Latest Sandalwood
Daali Dhananjaya
ಮೊದಲ ಮಗುವಿನ ನಿರೀಕ್ಷೆಯಲ್ಲಿ ಡಾಲಿ ಧನಂಜಯ್‌ ದಂಪತಿ
Cinema Latest Main Post Sandalwood
Darshan
ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕದ ತಟ್ಟಿದ ದರ್ಶನ್‌
Cinema Court Latest Main Post Sandalwood
yash toxic
ಜಾಗತಿಕ ಮಟ್ಟದಲ್ಲಿ ಅಬ್ಬರಿಸಲು ಸಜ್ಜಾದ ಯಶ್ – ಟಾಕ್ಸಿಕ್ ಬಿಡುಗಡೆ ದಿನಾಂಕ ಮತ್ತೆ ಮುಂದಕ್ಕೆ
Cinema Latest Main Post

You Might Also Like

Supreme Court 1
Court

ಮತ ಎಣಿಕೆಗೂ ಮುನ್ನ ಸುಪ್ರೀಂ ಕೋರ್ಟ್ ಮೊರೆ ಹೋದ ಟಿಎಂಸಿ

Public TV
By Public TV
33 minutes ago
Delhi Capitals 2
Cricket

ಕನ್ನಡಿಗ ರಾಹುಲ್‌, ನಿಸ್ಸಂಕಾ ಬ್ಯಾಟಿಂಗ್‌ ಅಬ್ಬರಕ್ಕೆ ರಾಜಸ್ಥಾನ್‌ ತತ್ತರ – ಡೆಲ್ಲಿಗೆ 7 ವಿಕೆಟ್‌ಗಳ ಭರ್ಜರಿ ಜಯ

Public TV
By Public TV
39 minutes ago
bengaluru rain
Bengaluru City

ಬೆಂಗಳೂರಿನ ಹಲವೆಡೆ ಸುರಿದ ಮಳೆ – ರಸ್ತೆಗಳು ಜಲಾವೃತ, ಜಯನಗರದಲ್ಲಿ ಆಟೋ ಮೇಲೆ ಉರುಳಿದ ಮರ

Public TV
By Public TV
1 hour ago
Girish Mattannavar
Bengaluru City

ಧರ್ಮಸ್ಥಳದ ಬಗ್ಗೆ ಅವಹೇಳನಕಾರಿ ಹೇಳಿಕೆ – ಗಿರೀಶ್ ಮಟ್ಟಣ್ಣನವರ್ ವಿರುದ್ಧ FIR

Public TV
By Public TV
3 hours ago
Yadagiri Death
Districts

ಯಾದಗಿರಿಯಲ್ಲಿ ಬಿಸಿಲಿನ ತಾಪಕ್ಕೆ ಕೂಲಿ ಕಾರ್ಮಿಕ ದುರ್ಮರಣ

Public TV
By Public TV
3 hours ago
Peenya Flyover 1
Bengaluru City

ಪೀಣ್ಯ ಫ್ಲೈಓವರ್‌ನಲ್ಲಿ 4 ದಿನ ವಾಹನ ಸಂಚಾರಕ್ಕೆ ನಿರ್ಬಂಧ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?