ಬೆಳಗಾವಿ: ಚಿಕ್ಕೋಡಿ (Chikkodi)ತಾಲೂಕಿನ ನವಲಿಹಾಳ ಗ್ರಾಮದ ಶಿಕ್ಷಕ ಡಾ.ವಿಶ್ವನಾಥ್ ಧುಮಾಳ ಅವರು ತಂದೆ-ತಾಯಿ ಇಲ್ಲದ, ಬಡ ಮಕ್ಕಳು ಹಾಗೂ ಆದರ್ಶ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತು ಪಡೆದು ಮಾದರಿಯಾಗಿದ್ದಾರೆ. 75 ವಿದ್ಯಾರ್ಥಿಗಳನ್ನು ಅವರು ದತ್ತು ಪಡೆದಿದ್ದಾರೆ.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾದ ಇವರು ಕಳೆದ 7 ವರ್ಷಗಳಿಂದ ಅನಾಥ ಹಾಗೂ ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿದ್ದಾರೆ.ಇದನ್ನೂ ಓದಿ: ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ ಪ್ರಕರಣ – 8 ಮಂದಿಗೆ ಜಾಮೀನು, ಒಬ್ಬನಿಗೆ ನಿರಾಸೆ
ವಿವಿಧ ಶಾಲೆಗಳ ತಂದೆ-ತಾಯಿ ಇಲ್ಲದ ಬಡ ಮಕ್ಕಳು ಹಾಗೂ ಆದರ್ಶ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತು ಪಡೆದಿರುವ ಅವರು, ಬ್ಯಾಗ್, ಪುಸ್ತಕ, ಪೆನ್ನು, ಕಂಪಾಸ್ ಬಾಕ್ಸ್ ಸೇರಿದಂತೆ ಅಗತ್ಯ ಶೈಕ್ಷಣಿಕ ಕಿಟ್‌ಗಳನ್ನು ಉಚಿತವಾಗಿ ವಿತರಿಸುತ್ತಿದ್ದಾರೆ.
ಇದರ ಜೊತೆಗೆ ಮಕ್ಕಳಿಗೆ ಕಾಲಕಾಲಕ್ಕೆ ಉಚಿತ ಆರೋಗ್ಯ ತಪಾಸಣೆಯನ್ನೂ ಮಾಡಿಸುತ್ತಿದ್ದಾರೆ. ಅವರ ಈ ಸಮಾಜಮುಖಿ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದ್ದು, ನಿವೃತ್ತ ಶಿಕ್ಷಕ ಡಾ. ಚಂದ್ರಶೇಖರ್ ಅವರು ವಿಶ್ವನಾಥ್ ಅವರ ಈ ಸೇವೆಯನ್ನು ಶ್ಲಾಘಿಸಿದ್ದಾರೆ.ಇದನ್ನೂ ಓದಿ: ಮಂಡ್ಯ ಹೆದ್ದಾರಿಯಲ್ಲಿ ಟ್ರಕ್ ಡ್ರೈವರ್ ಮೇಲೆ ಫೈರಿಂಗ್ – ಉದ್ಯಮಿ ಪುತ್ರನ ರಕ್ಷಣೆಗೆ ನಿಂತ್ರಾ ಪೊಲೀಸರು?

