ಮಂಡ್ಯ: ವರಮಹಾಲಕ್ಷ್ಮಿ ಹಬ್ಬದ (Varamahalakshmi Festival) ಹಿನ್ನೆಲೆ ಶ್ರೀರಂಗಪಟ್ಟಣದ (Srirangapatna) ಪ್ರಸಿದ್ಧ ಚಾಮುಂಡೇಶ್ವರಿ ದೇವಾಲಯದಲ್ಲಿ (Chamundeshwari Temple) ತಾಯಿಗೆ ಆಕರ್ಷಕ ‘ಧನಲಕ್ಷ್ಮಿ’ ಅಲಂಕಾರ ಮಾಡಿ ವಿಶೇಷ ಪೂಜೆ ನೆರವೇರಿಸಲಾಗಿದೆ.
ದೇವಾಲಯದ ಗರ್ಭಗುಡಿಯನ್ನು ಸಂಪೂರ್ಣವಾಗಿ ನೋಟುಗಳಿಂದ ಸಿಂಗರಿಸಲಾಗಿದ್ದು, ಭಕ್ತರ ಕಣ್ಮನ ಸೆಳೆಯುತ್ತಿದೆ. ಭಕ್ತರು ನೀಡಿದ ಕಾಣಿಕೆ ಹಣವಾದ ಸುಮಾರು 3 ಲಕ್ಷ ರೂ. ಬಳಸಿಕೊಂಡು ದೇವಾಲಯದ ಪ್ರಧಾನ ಅರ್ಚಕರಾದ ಲಕ್ಷ್ಮೀಶ ಅವರು ಈ ವೈಭವೋಪೇತ ಅಲಂಕಾರ ಮಾಡಿದ್ದಾರೆ. ಇದನ್ನೂ ಓದಿ: ಇಂದು ನಾಡಿನಾದ್ಯಂತ ವರಮಹಾಲಕ್ಷ್ಮಿ ಹಬ್ಬ; ಹೂ-ಹಣ್ಣು ಬೆಲೆ ಗಗನಕ್ಕೇರಿದ್ರೂ, ಮುಗಿಬಿದ್ದು ಖರೀದಿಸಿದ ಜನ

10, 20, 50, 100, 200 ಹಾಗೂ 500 ರೂ. ಮುಖಬೆಲೆಯ ಹೊಸ ನೋಟುಗಳನ್ನು ಜೋಡಿಸಿ ಗರ್ಭಗುಡಿ ಮತ್ತು ದೇವಿಯ ಸುತ್ತಲೂ ಕಲಾತ್ಮಕವಾಗಿ ಅಲಂಕರಿಸಲಾಗಿದೆ. ನಾಡಿನಲ್ಲಿ ಕಾಲಕಾಲಕ್ಕೆ ಉತ್ತಮ ಮಳೆ-ಬೆಳೆಯಾಗಿ ರೈತರಿಗೆ ಹಾಗೂ ಜನಸಾಮಾನ್ಯರಿಗೆ ಸಮೃದ್ಧಿ ಸಿಗಲಿ ಎಂದು ಸಂಕಲ್ಪಿಸಿ ದೇವಿಗೆ ವಿಶೇಷ ಅರ್ಚನೆ ಮತ್ತು ಮಹಾಮಂಗಳಾರತಿ ನೆರವೇರಿಸಲಾಯಿತು.
ಧನಲಕ್ಷ್ಮಿ ರೂಪದಲ್ಲಿ ಕಂಗೊಳಿಸುತ್ತಿರುವ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯಲು ಬೆಳಗಿನಿಂದಲೇ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬದ ವಿಶೇಷತೆ- ಆಚರಣೆ, ವ್ರತ ಹೇಗೆ ಮಾಡಬೇಕು?
