ಲಕ್ನೋ: 16 ವರ್ಷದ ಬಾಲಕಿಯ ಮೇಲೆ ಮಲತಂದೆ ಹಾಗೂ ಆತನ ಸಹೋದರ ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಕಂಧ್ಲಾ ಪಟ್ಟಣದಲ್ಲಿ ನಡೆದಿದೆ.
ಕಂಧ್ಲಾ ನಿವಾಸಿಗಳಾದ ವಾಸೀಮ್ ಹಾಗೂ ತನ್ವೀರ್ ಅತ್ಯಾಚಾರ ಎಸಗಿದ ಆರೋಪಿಗಳು. ಬಾಲಕಿಯ ಮೇಲೆ ಇಬ್ಬರು ಸೇರಿ ಶನಿವಾರ ಅತ್ಯಾಚಾರ ಎಸಗಿ ಪರಾರಿಯಗಿದ್ದಾರೆ. ಈ ಕುರಿತು ಸಂತ್ರಸ್ತ ಬಾಲಕಿಯ ತಾಯಿ ಸ್ಥಳೀಯ ಪೊಲೀಸ್ ಠಾಣೆಗೆ ಭಾನುವಾರ ದೂರು ನೀಡಿದ್ದಾರೆ.
Advertisement
ಏನಿದು ಪ್ರಕರಣ?:
ದೂರು ನೀಡಿದ ಮಹಿಳೆಯ ಪತಿ 2018ರ ಅಕ್ಟೋಬರ್ ನಲ್ಲಿ ನಿಧರಾಗಿದ್ದರು. ಬಳಿಕ ವಾಸೀಮ್ ಜೊತೆಗೆ ಮದುವೆಯಾಗಿದ್ದ ಆಕೆಯು 16 ವರ್ಷದ ಮಗಳನ್ನು ತನ್ನ ಬಳಿ ಇರಿಸಿಕೊಂಡಿದ್ದಳು. ಆರೋಪಿಗಳಾದ ವಾಸೀಮ್ ಮತ್ತು ತನ್ವೀರ್ ಇಬ್ಬರು ಸೇರಿ ನಿನ್ನೆ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾರೆ.
Advertisement
Advertisement
ಅತ್ಯಾಚಾರ ಮಾಡಿರುವ ಕುರಿತು ಯಾರಿಗೂ ಹೇಳದಂತೆ ಮಗಳಿಗೆ ಬೆದರಿಕೆ ಹಾಕಿದ್ದಾರೆ. ಒಂದು ವೇಳೆ ಹೇಳಿದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇವೆ ಅಂತ ಆರೋಪಿಗಳು ಹೇಳಿದ್ದಾರೆ ಎಂದು ಸಂತ್ರಸ್ತ ಬಾಲಕಿಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.
Advertisement
ಆರೋಪಿಗಳ ವಿರುದ್ಧ ಪೊಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಈ ಕುರಿತು ತನಿಖೆ ಆರಂಭವಾಗಿದ್ದು, ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv