ವಾಷಿಂಗ್ಟನ್: ಅಮೆರಿಕದ (America) ಶಾಲಾ ಆವರಣದಲ್ಲಿ 17 ವರ್ಷದ ವಿದ್ಯಾರ್ಥಿ ಜೊತೆ ಲೈಂಗಿಕ ಸಂಬಂಧ ಹೊಂದಿದ್ದ ಶಿಕ್ಷಕಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಫ್ಲೋರಿಡಾದ ಪ್ರೌಢಶಾಲಾ ಶಿಕ್ಷಕಿ ಶಾಲೆಯ 17 ವರ್ಷದ ವಿದ್ಯಾರ್ಥಿ ಜೊತೆ ಲೈಂಗಿಕ ಸಂಬಂಧ ಹೊಂದಿದ್ದರು. ಈ ಬಗ್ಗೆ ತಪ್ಪೊಪ್ಪಿಕೊಂಡ ನಂತರ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು 15 ವರ್ಷಗಳ ಪ್ರೊಬೇಶನ್ ಶಿಕ್ಷೆ ವಿಧಿಸಲಾಗಿದೆ. 37 ವರ್ಷದ ಹೀದರ್ ಮ್ಯಾಶ್‌ಬರ್ನ್-ಸ್ಮಿತ್ ಶಿಕ್ಷೆಗೆ ಗುರಿಯಾಗಿ ಶಿಕ್ಷಕಿ. ಇದನ್ನೂ ಓದಿ: ವಿದ್ಯಾರ್ಥಿಗಳೊಂದಿಗೆ ಹೈಸ್ಕೂಲ್ ಶಿಕ್ಷಕಿಯ ಕಾಮದಾಟ – 1 ವರ್ಷದ ಬಳಿಕ ಅರೆಸ್ಟ್
ವಿದ್ಯಾರ್ಥಿ ಜೊತೆ ಶಿಕ್ಷಕಿ ಎರಡು ಬಾರಿ ಲೈಂಗಿಕ ಸಂಪರ್ಕ ಬೆಳೆಸಿದ್ದರು. ಪ್ರಕರಣ ಸಂಬಂಧ ಏಪ್ರಿಲ್ 29 ರಂದು ಆಕೆಯನ್ನು ಅರೆಸ್ಟ್ ಮಾಡಲಾಯಿತು. ತನ್ನ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದರಿಂದ ಜೈಲು ಶಿಕ್ಷೆ ವಿಧಿಸಲಾಗಿದೆ.
ಬಂಧನದ ನಂತರ ಶಿಕ್ಷಕಿಯನ್ನು ಪ್ರೌಢಶಾಲೆಯ ಹುದ್ದೆಯಿಂದ ಅಮಾನತುಗೊಳಿಸಲಾಗಿದೆ. ಶಿಕ್ಷಕರು, ವಿದ್ಯಾರ್ಥಿಗಳೊಂದಿಗೆ ಅಕ್ರಮ ಲೈಂಗಿಕ ಸಂಬಂಧದಲ್ಲಿ ತೊಡಗಿಸಿಕೊಳ್ಳುವ ವಿದ್ಯಮಾನವು ಅಮೆರಿಕದಲ್ಲಿ ಹೆಚ್ಚುತ್ತಿರುವ ಕಳವಳಕಾರಿ ಸಂಗತಿಯಾಗಿದೆ. ಇದನ್ನೂ ಓದಿ: ವೆನೆಜುವೆಲಾದ 65 ಶತಕೋಟಿ ಬ್ಯಾರಲ್ ಕಚ್ಚಾ ತೈಲ ನಿಕ್ಷೇಪಗಳ ಮೇಲೆ ಅಮೆರಿಕ ಹಿಡಿತ – ಟ್ರಂಪ್ ಘೋಷಣೆ
2014 ಮತ್ತು 2019 ರ ನಡುವೆ 500 ಕ್ಕೂ ಹೆಚ್ಚು ಶಿಕ್ಷಕರ ದುಷ್ಕೃತ್ಯ ಪ್ರಕರಣಗಳು ವರದಿಯಾಗಿವೆ. ಸುಮಾರು 10 ವಿದ್ಯಾರ್ಥಿಗಳಲ್ಲಿ ಒಬ್ಬರು ಶಿಕ್ಷಕರಿಂದ ಲೈಂಗಿಕ ದುಷ್ಕೃತ್ಯವನ್ನು ಅನುಭವಿಸುತ್ತಿದ್ದಾರೆ. 2023 ರಲ್ಲಿ ಮಕ್ಕಳ ಲೈಂಗಿಕತೆಗೆ ಸಂಬಂಧಿಸಿದ ಅಪರಾಧಗಳಿಗಾಗಿ ಸುಮಾರು 350 ಶಿಕ್ಷಕರನ್ನು ಬಂಧಿಸಲಾಗಿದೆ.
