ಟೆಕ್ಸಾಸ್: ತನ್ನ ವಿದ್ಯಾರ್ಥಿಗಳೊಂದಿಗೆ ಅನುಚಿತ ಸಂಬಂಧ (ಅಕ್ರಮ ಸಂಬಂಧ) ಹೊಂದಿದ್ದ ಆರೋಪದ ಮೇಲೆ ಟೆಕ್ಸಾಸ್ ಹೈಸ್ಕೂಲ್‌ನ ಮಾಜಿ ಶಿಕ್ಷಕಿ (Texas high school teacher) ಹಾಲಿ ಆಡಮ್ಸ್‌ನನ್ನ ಪೊಲೀಸರು ಬಂಧಿಸಿದ್ದಾರೆ.
ಆಂಗ್ಲೆಟನ್ ಹೈಸ್ಕೂಲ್‌ನಲ್ಲಿ ಶಿಕ್ಷಕಿಯಾಗಿದ್ದ ಆಡಮ್ಸ್ ವಿರುದ್ಧ ಸಾಕ್ಷ್ಯ ನಾಶಕ್ಕೆ ಯತ್ನ ಹಾಗೂ ಅಪ್ರಾಪ್ತರಿಗೆ ಮದ್ಯ ಕುಡಿಸಿದ 2 ಪ್ರಕರಣಗಳು ದಾಖಲಾಗಿವೆ. ಸತತ 1 ವರ್ಷದ ಸುದೀರ್ಘ ತನಿಖೆ ಬಳಿಕ ಶಿಕ್ಷಿಯನ್ನ ಮೂರು ದಿನಗಳ ಹಿಂದೆ ಬಂಧಿಸಲಾಗಿದೆ.
ವಿದ್ಯಾರ್ಥಿಯೊಬ್ಬ ಶಾಲಾ ಸಿಬ್ಬಂದಿಗೆ ನೀಡಿದ ದೂರಿನ ಆಧಾರದ ಮೇಲೆ ತನಿಖೆ ಆರಂಭವಾಗಿತ್ತು. ಮಾಜಿ ವಿದ್ಯಾರ್ಥಿಯೊಬ್ಬ ಆಡಮ್ಸ್ ಅವರ ಮನೆಯಲ್ಲಿ ಇರುವ ಸಂದರ್ಭದಲ್ಲಿ ವಿಡಿಯೋ ಕಾಲ್ ಮಾಡಿದ್ದಾನೆ ಎನ್ನಲಾಗಿದೆ. ಅಲ್ಲಿನ ಹಾಸಿಗೆಯ ಮೇಲೆ ಆಕೆಯ ಸೆಕ್ಸ್ ಚಿತ್ರಗಳಿದ್ದವು ಎಂದು ಆರೋಪಿಸಲಾಗಿದೆ. ಆಡಮ್ಸ್ ಮತ್ತು ಮಾಜಿ ವಿದ್ಯಾರ್ಥಿ ಆತ್ಮೀಯವಾಗಿ ಕಾಣಿಸಿಕೊಂಡಿರುವ ಚಿತ್ರವೂ ಪತ್ತೆಯಾಗಿದೆ ಎಂದು ವರದಿಯಾಗಿದೆ.

ಇದಲ್ಲದೆ, ಮನೆಗೆ ವಿದ್ಯಾರ್ಥಿಗಳನ್ನ ಕರೆಸಿ ಕೆಲಸ ಮಾಡಿಸುತ್ತಿದ್ದರು ಹಾಗೂ ಶಾಲೆಯ ಬೇಸ್‌ಬಾಲ್ ತಂಡದ ಮೂವರು ವಿದ್ಯಾರ್ಥಿಗಳೊಂದಿಗೆ ಸೋಷಿಯಲ್ ಮೀಡಿಯಾ ಮೂಲಕ ಸಂಪರ್ಕದಲ್ಲಿದ್ದರು ಎಂಬ ಆರೋಪವೂ ಕೇಳಿಬಂದಿದೆ.
24.81 ಲಕ್ಷ ರೂ. ಬಾಂಡ್ ಮೇಲೆ ರಿಲೀಸ್
ಬಂಧನದ ಬಳಿಕ ಆಡಮ್ಸ್ ಅವರನ್ನ Brazoria County Detention Centerಗೆ ಕರೆದೊಯ್ಯಲಾಗಿದ್ದು, ಅದೇ ದಿನ 26,000 ಡಾಲರ್ (ಸುಮಾರು 24.81 ಲಕ್ಷ ರೂ.) ಬಾಂಡ್ ಮೇಲೆ ಬಿಡುಗಡೆ ಮಾಡಲಾಗಿದೆ. ಅವರು ಈಗ ಆಂಗ್ಲೆಟನ್ ಇಂಡಿಪೆಂಡೆಂಟ್ ಸ್ಕೂಲ್ ಡಿಸ್ಟ್ರಿಕ್ಟ್‌ನಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮನೋವೈದ್ಯೆ ಗೇಲ್ ಸಾಲ್ಟ್ಜ್ ಅವರ ಪ್ರಕಾರ, ಇಂತಹ ಪ್ರಕರಣಗಳಲ್ಲಿ ಕೆಲ ಶಿಕ್ಷಕರು ಸಂಬಂಧವನ್ನು ನಿಜವಾದ ಪ್ರೇಮ ಸಂಬಂಧವೆಂದು ತಾವೇ ನಂಬಿಕೊಳ್ಳುವ ಸಾಧ್ಯತೆಯಿದ್ದು, ಇದು ವಿದ್ಯಾರ್ಥಿಗಳ ಮೇಲೆ ಗಂಭೀರ ಮಾನಸಿಕ ಪರಿಣಾಮ ಬೀರುತ್ತದೆ.
