ಬಿಟೌನ್ ಚೆಲುವೆ ಉರ್ಫಿ ಜಾವೇದ್, ದಿನಕ್ಕೊಂದು ಹೊಸ ಅವತಾರದಲ್ಲಿ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡುತ್ತಾರೆ. ಇದೀಗ ಬಿಕಿನಿಗೆ ಫ್ಲವರ್ ಅಂಟಿಕೊಂಡು ಹಾಟ್ ಲುಕ್ನಲ್ಲಿ ಉರ್ಫಿ ಮಿಂಚಿದ್ದಾರೆ. ಈ ವಿಡಿಯೋ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದೆ. ಸಖತ್ ವೈರಲ್ ಆಗಿದೆ.
View this post on Instagram
ಬಾಲಿವುಡ್ ಬ್ಯೂಟಿ ಉರ್ಫಿಗೆ ಬಟ್ಟೆ ವಿಚಾರದಲ್ಲಿ ಏನೋ ಒಂಥರಾ ಕ್ರೇಜ್, ಚಿತ್ರ ವಿಚಿತ್ರ ಉಡುಗೆಯಲ್ಲಿ ಕಾಣಿಸಿಕೊಳ್ತಾರೆ. ಹೊಸ ಪ್ರಯೋಗದ ಲುಕ್ನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಾರೆ. ಇದೀಗ ಉರ್ಫಿಯ ಹೊಸ ಹಾಟ್ ಅವತಾರಕ್ಕೆ ನೆಟ್ಟಿಗರು ಉಫ್ ಅಂತಿದ್ದಾರೆ. ಫ್ಲವರ್ ಬಿಕಿನಿ ತೊಟ್ಟು ಕ್ಯಾಮೆರಾ ಕಣ್ಣಿಗೆ ಗ್ಲಾಮರಸ್ ಆಗಿ ಪೋಸ್ ಮಾಡಿದ್ದಾರೆ. ಇದನ್ನೂ ಓದಿ:ಸಲಾರ್ನಲ್ಲಿ ಡಾರ್ಲಿಂಗ್ ಪ್ರಭಾಸ್ ಡಬಲ್ ರೋಲ್
View this post on Instagram
ʻಪುಷ್ಪʼ ಚಿತ್ರದಲ್ಲಿ ಅಲ್ಲು ಅರ್ಜುನ್ ಅದ್ಯಾವಾಗ ಫ್ಲವರ್ ಅಲ್ಲಾ ಫೈಯರ್ ಅಂದ್ರೋ, ಅದನ್ನ ಉರ್ಫಿ ಸಖತ್ ಸೀರಿಯಸ್ ಆಗಿ ತೆಗೆದುಕೊಂಡಂತೆ ಇದೆ. ಫ್ಲವರ್ ಅವತಾರದಲ್ಲಿ ಎಂಟ್ರಿ ಕೊಟ್ಟು, ಹುಡುಗರ ಹಾರ್ಟಿಗೆ ಉರ್ಫಿ ಕಿಚ್ಚಿಟ್ಟಿದ್ದಾರೆ. ಈ ವಿಡಿಯೋಗೆ ಈಗ ಭರ್ಜರಿ ಲೈಕ್ಸ್, ಕಾಮೆಂಟ್ಸ್ ಜೊತೆಗೆ ಸಖತ್ ಟ್ರೋಲ್ ಕೂಡ ಆಗುತ್ತಿದೆ. ಆದರೆ ಇದು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಮತ್ತೆ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ.
Live Tv