ದಕ್ಷಿಣ ಭಾರತದ ಖ್ಯಾತ ನಟ ಪ್ರಭಾಸ್ ಸದ್ಯ `ಸಲಾರ್’ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ `ಸಲಾರ್’ ಚಿತ್ರತಂಡದಿಂದ ಹೊಸ ಅಪ್‌ಡೇಟ್‌ವೊಂದು ಹೊರ ಬಿದ್ದಿದೆ. ಸ್ಟಾರ್ ನಟ ಪ್ರಭಾಸ್ ಡಬಲ್ ಶೇಡ್‌ನಲ್ಲಿ ಸಲಾರ್ ಚಿತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.
Advertisement
ರಾಜಮೌಳಿ ನಿರ್ದೇಶನದ ʻಬಾಹುಬಲಿʼ ಚಿತ್ರದಲ್ಲಿ ಪ್ರಭಾಸ್ ಡಬಲ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ತಂದೆ ಮತ್ತು ಮಗನ ಪಾತ್ರಕ್ಕೆ ಜೀವತುಂಬಿದ್ರು. ಆದರೆ ಈ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಇದೀಗ ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಕಾಂಬಿನೇಷನ್‌ನ ನಿರೀಕ್ಷಿತ ಸಿನಿಮಾ `ಸಲಾರ್’ನಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಂದೇ ಪರದೆಯಲ್ಲಿ ಒಟ್ಟಿಗೆ ದ್ವಿಪಾತ್ರ ಕಮಾಲ್ ಮಾಡಲಿದೆ.
Advertisement
Advertisement
`ಸಲಾರ್’ ಚಿತ್ರದಲ್ಲಿ ಡಬಲ್ ಶೇಡ್‌ನಲ್ಲಿ ಕಾಣಿಸಿಕೊಳ್ತಿದ್ದು, ಒಟ್ಟಿಗೆ ಈ ಜೋಡಿ ಕಾಣಿಸಿಕೊಳ್ಳಲಿದೆ. ಎರಡು ತದ್ವಿರುದ್ಧ ಪಾತ್ರಕ್ಕೆ ಪ್ರಭಾಸ್ ಜೀವತುಂಬಲಿದ್ದಾರೆ. ಈಗಾಗಲೇ ಶೂಟಿಂಗ್ ಭರದಿಂದ ಸಾಗ್ತಿದ್ದು, ಮತ್ತೊಂದು ಪಾತ್ರಕ್ಕಾಗಿ 22 ಕೆಜಿ ಇಳಿಸಿಕೊಂಡಿದ್ದಾರೆ. ಭಿನ್ನ ಪಾತ್ರ ಮತ್ತು ಲುಕ್ ಮೂಲಕ ರಂಜಿಸಲು ಡಾರ್ಲಿಂಗ್ ಪ್ರಭಾಸ್ ಸಜ್ಜಾಗಿದ್ದಾರೆ.
Advertisement
Live Tv