ಬೆಂಗಳೂರು: ಈ ಸರ್ಕಾರ ಎಲ್ಲೋ ಜೋಗಪ್ಪ ನಿನ್ನ ಅರಮನೆ ಹಾಡಿನ ಹಾಗೆ ಆಗಿದೆ ಎಂದು ರಾಜ್ಯ ಸರ್ಕಾರದ ವಿರುದ್ದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಯವರು (H.D Kumaraswamy) ಲೇವಡಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ, ತಮ್ಮ ಮಾತು ಈ ಸರ್ಕಾರದಲ್ಲಿ ನಡೆಯುತ್ತಿಲ್ಲ ಎಂಬ ಸಿದ್ದರಾಮಯ್ಯ (Siddaramaiah) ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಸರ್ಕಾರದಲ್ಲಿ ಅವರ ಮಾತು ನಡೆಯುತ್ತಿದೆಯೋ ಇಲ್ಲವೋ ನನಗೇನು ಗೊತ್ತು. ಸಿದ್ದರಾಮಯ್ಯ ಅವರ ಭಾವನೆ ಅವರು ಹೇಳಿಕೊಂಡಿದ್ದಾರೆ. ಈ ಸರ್ಕಾರದಲ್ಲಿ ಏನು ನಡೆಯುತ್ತಿದೆ ಎಂದು ನಿಮಗೆ ಗೊತ್ತು. ಈ ಸರ್ಕಾರ ಹೇಗಿದೆ ಎಂದರೆ ಹಿಂದಿನ ಕಾಲದಲ್ಲಿ ಜಾಗಟೆ ಹೊಡೆದುಕೊಂಡು ಹೋಗ್ತಾ ಇದ್ದರು ಈ ಸರ್ಕಾರವೂ ಹಾಗೆ. ಎಲ್ಲೋ ಜೋಗಪ್ಪ ನಿನ್ನ ಅರಮನೆ ಹಾಡಿನ ಹಾಗೆ ಆಗಿದೆ ಈ ಸರ್ಕಾರದಲ್ಲಿ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ರಾಜ್ಯ ಸರ್ಕಾರ ಮೊದಲು ಬರ ಪರಿಹಾರ ಘೋಷಿಸಿ, ಕೇಂದ್ರಕ್ಕೆ ನಿಯೋಗ ಕೊಂಡೊಯ್ಯಲಿ: ಪಿ.ಸಿ ಮೋಹನ್
ದೇವೇಗೌಡರ (H.D Deve Gowda) ಮುಖ ನೋಡಿ ಒಕ್ಕಲಿಗರು ಮತ ಹಾಕ್ತಾರೆ ಎಂಬ ಮಾಜಿ ಸಚಿವ ರಾಜಣ್ಣ ಹೇಳಿಕೆ ವಿಚಾರವಾಗಿ, ರಾಜಣ್ಣ (K.N Rajanna) ಅವರ ಭಾವನೆ ಹೇಳಿದ್ದಾರೆ. ಅವರ ಹೇಳಿಕೆ ಅತಿಶಯೋಕ್ತಿಯಲ್ಲ. ಒಕ್ಕಲಿಗ ಸಮಾಜ 30-40 ವರ್ಷಗಳಿಂದ ದೇವೇಗೌಡರ ಹೋರಾಟರ ಹಿನ್ನಲೆಯಲ್ಲಿ ನಮ್ಮ ಭಾಗದಲ್ಲಿ, ನಮ್ಮ ಸಮಾಜ, ನಮ್ಮ ಪಕ್ಷಕ್ಕೆ ಬೆಂಬಲ ಕೊಟ್ಟಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದ ಹಿತವೇ ಸರ್ಕಾರದ ಮೊದಲ ಆದ್ಯತೆ: ಪರಮೇಶ್ವರ್

