Crime
ಸ್ಕೂಟರ್, ಬೈಕ್ ಡಿಕ್ಕಿ – ಓರ್ವ ಸಾವು, ಇಬ್ಬರಿಗೆ ಗಾಯ

ಉಡುಪಿ: ಸ್ಕೂಟರ್ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟ ಘಟನೆ ನೀಚಾಲಿನ ಸಾಂತೂರು ಎಂಬಲ್ಲಿ ನಡೆದಿದೆ. ಮೃತರನ್ನು ಶ್ರೀಕಾಂತ್ ಎಂದು ಗುರುತಿಸಲಾಗಿದೆ.
ಸ್ಕೂಟರ್ನಲ್ಲಿ ಶ್ರೀಕಾಂತ್ ಹಾಗೂ ಸಹಸವಾರ ರವೀಂದ್ರ ಪೂಜಾರಿ ಬೆಳ್ಮಣ್ನಿಂದ ಸಾಂತೂರಿಗೆ ಹೋಗಲು ರಾಜ್ಯ ಹೆದ್ದಾರಿಯಲ್ಲಿ ಹೋಗುತ್ತಿದ್ದ ದೂರದಿಂದಲೇ ಬಲ ಬದಿಯ ಇಂಡಿಕೇಟರ್ ಹಾಕಿ ರಸ್ತೆಯ ಬಲ ಬದಿಯ ಅಂಚನ್ನು ತಲುಪಿದ್ದರು. ಪಡುಬಿದ್ರೆ ಕಡೆಯಿಂದ ಬೈಕೊಂದು ಅತಿ ಬಂದು ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ.
ಬೈಕ್ ಸ್ಕೂಟರ್ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸಮೇತ ಶ್ರೀಕಾಂತ್ ಹಾಗೂ ರವೀಂದ್ರ ಪೂಜಾರಿ ಅವರು ರಸ್ತೆಗೆ ಬಿದ್ದಿದ್ದು, ಶ್ರೀಕಾಂತ್ ಅವರಿಗೆ ತಲೆಗೆ ಹಾಗೂ ರವಿಂದ್ರ ಪೂಜಾರಿ ಅವರ ಎಡ ಕಾಲು ಮೂಳೆ ಮುರಿದಿದೆ. ಬೈಕ್ ಸವಾರನಿಗೂ ಕೂಡ ಗಾಯವಾಗಿದೆ. ಕೂಡಲೇ ಗಾಯಾಳುಗಳನ್ನು ಉಡುಪಿ ಆಸ್ಪತ್ರೆಗೆ ಕರೆದೊಯ್ದಿದ್ದು, ಈ ವೇಳೆ ಶ್ರೀಕಾಂತ್ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಘಟನೆಯ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
