ಬೆಂಗಳೂರು: ಡಿವೈಡರ್‌ಗೆ (Divider) ಬೈಕ್ (Bike) ಡಿಕ್ಕಿ ಹೊಡೆದ ಪರಿಣಾಮ ಕೇರಳ ಮೂಲದ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೆಂಗೇರಿಯ (Kengeri) ಆರ್.ಆರ್ ಡೆಂಟಲ್ ಕಾಲೇಜು ಬಳಿ ನಡೆದಿದೆ.
ಅತುಲ್, ಗೌರಿಶಂಕರ್ ಮೃತ ನರ್ಸಿಂಗ್ ವಿದ್ಯಾರ್ಥಿಗಳು. ನಸುಕಿನ ಜಾವ 3 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಇಬ್ಬರು ವಿದ್ಯಾರ್ಥಿಗಳು ಮೈಸೂರು ಕಡೆಯಿಂದ ಬೆಂಗಳೂರು ಕಡೆಗೆ ಬೈಕ್‌ನಲ್ಲಿ ಬರುತ್ತಿದ್ದರು. ಈ ವೇಳೆ ರಸ್ತೆ ಡಿವೈಡರ್‌ಗೆ ಬೈಕ್ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ. ಇದನ್ನೂ ಓದಿ: ಕಿಡ್ನ್ಯಾಪ್ & ರೇಪ್ ಕೇಸಲ್ಲಿ ಭಾರತೀಯ ಮೂಲದ ವ್ಯಕ್ತಿಗೆ ಲಂಡನ್‌ನಲ್ಲಿ 34 ವರ್ಷ ಜೈಲು ಶಿಕ್ಷೆ
ಘಟನಾ ಸ್ಥಳಕ್ಕೆ ಕೆಂಗೇರಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: 6 ತಿಂಗಳ ಮಗುವಿನೊಂದಿಗೆ 6ನೇ ಮಹಡಿಯಿಂದ ಜಿಗಿದ ಮಹಿಳಾ ಟೆಕ್ಕಿ ಸಾವು – ಕಂದಮ್ಮ ಪಾರು
