ಬೆಂಗಳೂರು: ವಾಣಿಜ್ಯ ತೆರಿಗೆ ಇಲಾಖೆ (Commercial Tax Department) ಅಧಿಕಾರಿಗಳು ಬೃಹತ್ ಕಾರ್ಯಾಚರಣೆ ನಡೆಸಿ ಬರೋಬ್ಬರಿ 2,384 ಕೋಟಿ ರೂ. ನಕಲಿ ITC (ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್) ಪಡೆದಿದ್ದ ಜಾಲವನ್ನು ಪತ್ತೆ ಹಚ್ಚಿದ್ದಾರೆ. ಈ ಅಕ್ರಮಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳನ್ನು ಸಲೀಮುಲ್ಲಾ ಬೇಗ್ (59) ಮತ್ತು ಹಸೇನ್ ಬೇಗ್ (35) ಎಂದು ಗುರುತಿಸಲಾಗಿದೆ. ಆರೋಪಿಗಳು 72 ನಕಲಿ ಸರಬರಾಜು ಸಂಸ್ಥೆಗಳಿಂದ ಸಂಶಯಾಸ್ಪದ ವಹಿವಾಟು ನಡೆಸಿರುವುದು ಪತ್ತೆಯಾಗಿದೆ. ಅಲ್ಲದೇ 2,172 ಕೋಟಿ ರೂ. ವಹಿವಾಟಿನ ಮೂಲಕ ಸಲೀಮುಲ್ಲಾ 382 ಕೋಟಿ ರೂ. ನಕಲಿ ITC ಪಡೆದಿದ್ದ. ಇದೇ ರೀತಿ 55 ಸಂಸ್ಥೆಗಳಿಂದ 212 ಕೋಟಿ ರೂ. ವಹಿವಾಟಿನಿಂದ 35 ಕೋಟಿ ರೂ. ಹಣವನ್ನು ಹಸೇನ್ ಪಡೆದಿದ್ದ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಲೇಡಿ ಇನ್ಫ್ಲುಯೆನ್ಸರ್ ಬ್ಲ್ಯಾಕ್‌ಮೇಲ್ ಕೇಸ್‌ಗೆ ಟ್ವಿಸ್ಟ್ – ಪ್ರೀತಿ ಹೆಸರಲ್ಲಿ ಸೆಕ್ಸ್, ಗಂಡನ ಕಾಮಪುರಾಣ ಬಿಚ್ಚಿಟ್ಟ ಮಡದಿ
ಆರೋಪಿಗಳು, ಟಂಗ್ ಸ್ಟನ್ ಕಾರ್ಬೈಡ್ ಸ್ಕ್ರ್ಯಾಪ್, ಈ ವೆಸ್ಟ್ ಹಾಗೂ ಇತರೆ ಸ್ಕ್ರ್ಯಾಪ್ ಹೆಸರಿನಲ್ಲಿ ನಕಲಿ ಬಿಲ್ಲಿಂಗ್ ಮಾಡುತ್ತಿದ್ದರು. ನಕಲಿ ತೆರಿಗೆ ಬಿಲ್ ಸೃಷ್ಟಿಸಿ ITC ಪಡೆದು ವಂಚನೆ ಮಾಡುತ್ತಿದ್ದರು. GST ಕಾಯ್ದೆ ಅಡಿ ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ.
ತನಿಖೆ ವೇಳೆ 127 ನಕಲಿ ಸಂಸ್ಥೆಗಳ ಜಾಲ ಪತ್ತೆಯಾಗಿವೆ. 2,384 ಕೋಟಿ ಸಂಶಯಾಸ್ಪದ ವಹಿವಾಟಿನಿಂದ 420 ಕೋಟಿ ನಕಲಿ ITC ಪಡೆದಿದ್ದು ಬೆಳಕಿಗೆ ಬಂದಿದೆ. ಅಲ್ಲದೇ SKS ಟ್ರೇಡರ್ಸ್ ಮೂರು ವರ್ಷಗಳಲ್ಲಿ 50 ಕೋಟಿ ರೂ. ಇಂದ 900 ಕೋಟಿ ರೂ.ಗೆ ವಹಿವಾಟು ಏರಿಕೆಯಾಗಿದೆ. ಆದರೆ ಈ ಸಂಸ್ಥೆಯ ದಾಖಲಾತಿಗಳಲ್ಲಿ ವಹಿವಾಟು ಏರಿಕೆಯ ಸಾಕ್ಷ್ಯಗಳಿಲ್ಲ. ಈ ಹಿನ್ನೆಲೆ ನಕಲಿ ವಹಿವಾಟು ನಡೆಸಿರುವುದು ಖಾತರಿಯಾಗಿದೆ.
ಕಳೆದ ಜನವರಿಯಲ್ಲಿ 1,464 ಕೋಟಿ ವಹಿವಾಟು ಸಂಬಂಧ ಐವರನ್ನು ಅಧಿಕಾರಿಗಳು ಬಂಧಿಸಿದ್ದರು. ಒಟ್ಟಾರೆ ಪ್ರಸಕ್ತ ವರ್ಷ ಬಂಧಿತರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ಇದನ್ನೂ ಓದಿ: ಬಿಹಾರದಲ್ಲಿ ಅಮಾನುಷ ಕೃತ್ಯ – ನಿಂಬೆ ಹಣ್ಣು ಕಿತ್ತಿದ್ದಕ್ಕೆ ಬಾಲಕನ ಕೊಲೆ

