ನವದೆಹಲಿ: ನಮ್ಮ ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕಲು ಬಿಜೆಪಿ (BJP) ಗುಂಡಾಗಳನ್ನು ಕಳುಹಿಸಿದೆ ಎಂದು ಕಾಕ್ರೋಚ್ ಜನತಾ ಪಾರ್ಟಿ(CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ(Abhijeet Dipke) ಗಂಭೀರ ಆರೋಪ ಮಾಡಿದ್ದಾರೆ.
ಜಂತರ್ ಮಂತರ್‌ನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಲ್ಲು ತೂರಾಟ ನಮ್ಮ ಕಡೆಯಿಂದ ನಡೆದಿಲ್ಲ. ಬಿಜೆಪಿಯ ಗೂಂಡಾಗಳು ಈ ಕೃತ್ಯ ಎಸಗುತ್ತಿದ್ದಾರೆ. ಪೊಲೀಸರು ಕಲ್ಲುಗಳನ್ನು ತುಂಬಿರುವ ಟ್ರಕ್‌ಗಳನ್ನು ತರುತ್ತಿದ್ದಾರೆ. ಬಿಜೆಪಿಯ ಗೂಂಡಾಗಳು ಬಂದು ಕಲ್ಲು ತೂರಾಟ ನಡೆಸಿ, ನಂತರ ಸಿಜೆಪಿ ಕಾರ್ಯಕರ್ತರ ಹೆಸರನ್ನು ಕೆಡಿಸುತ್ತಿದ್ದಾರೆ ಎಂದು ದೂರಿದರು.
#WATCH | Delhi: Founding President of Cockroach Janta Party, Abhijeet Dipke says, “People are being sent from outside to deliberately disrupt the protest. We have been sitting here for a month. No such incident has happened in a month. But now, as this protest has grown, goons… pic.twitter.com/eqSeYcfhm1
— ANI (@ANI) July 23, 2026
ನಾವು ಕಳೆದ ಒಂದು ತಿಂಗಳಿನಿಂದ ಶಾಂತಿಯುತವಾಗಿ ಧರಣಿ ಕುಳಿತಿದ್ದೇವೆ. ಈ ಒಂದು ತಿಂಗಳಲ್ಲಿ ಇಂತಹ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಆದರೆ ಈಗ ಈ ಹೋರಾಟ ಬೃಹತ್ ರೂಪ ಪಡೆದುಕೊಳ್ಳುತ್ತಿದ್ದಂತೆ ಜನರನ್ನು ಪ್ರಚೋದಿಸಲು ಬಿಜೆಪಿಯವರು ಹೊರಗಿನಿಂದ ಗೂಂಡಾಗಳನ್ನು ಕಳುಹಿಸುತ್ತಿದ್ದಾರೆ ಎಂದು ಹೇಳಿದರು.
ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರೊಂದಿಗಿನ ಮಾತುಕತೆಯ ಕುರಿತು ಉಲ್ಲೇಖಿಸಿದ ಅವರು, ಜೆ.ಪಿ. ನಡ್ಡಾ ಅವರೊಂದಿಗಿನ ನಮ್ಮ ಕಳೆದ ಸಭೆಯ ನಂತರ ನಮ್ಮ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಲಾಗಿದೆ. ಸರ್ಕಾರದೊಂದಿಗೆ ಇನ್ಮುಂದೆ ಯಾವುದೇ ರೀತಿಯ ಮಾತುಕತೆ ನಡೆದರೂ ಅದು ಕೇವಲ ಜಂತರ್ ಮಂತರ್ ಪ್ರತಿಭಟನಾ ಸ್ಥಳದಲ್ಲೇ ನಡೆಸಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಜಂತರ್ ಮಂತರ್‌ನಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ- ಇಂಟರ್‌ನೆಟ್ ಬಂದ್
#WATCH | Delhi: Founding President of Cockroach Janta Party, Abhijeet Dipke says, “I have already spoken about the lathi charge. It was very brutal, and we will take the police officers who carried it out to court, and today is the 34th day of our protest. Sonam Sir’s hunger… pic.twitter.com/LuZgdavsIr
— ANI (@ANI) July 23, 2026
ಇಂದು 34ನೇ ದಿನಕ್ಕೆ ನಮ್ಮ ಪ್ರತಿಭಟನೆ ಕಾಲಿಟ್ಟಿದೆ. ನಾನು ಈಗಾಗಲೇ ಲಾಠಿಚಾರ್ಜ್ ಬಗ್ಗೆ ಮಾತನಾಡಿದ್ದೇನೆ. ಈ ಕೃತ್ಯ ಎಸಗಿದ ಪೊಲೀಸ್ ಅಧಿಕಾರಿಗಳನ್ನು ನಾವು ನ್ಯಾಯಾಲಯಕ್ಕೆ ಎಳೆಯುತ್ತೇವೆ ಎಂದರು
ಸೋನಮ್ ಸರ್ ಅವರ ನಿರಾಹಾರ ಸತ್ಯಾಗ್ರಹ ಮುಂದುವರಿದಿದ್ದು, ಇಂದು ಅವರ ಉಪವಾಸ ಸತ್ಯಾಗ್ರಹದ 26ನೇ ದಿನವಾಗಿದೆ. ಆದ್ದರಿಂದ ನಮ್ಮ ಬೇಡಿಕೆಗಳು ಈಡೇರುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ. ಆದರೆ ಸೋನಮ್ ಸರ್ ಅವರ ಜೀವ ನಮಗೆ ಅತ್ಯಂತ ಅಮೂಲ್ಯವಾದ್ದರಿಂದ, ಅವರು ತಮ್ಮ ಉಪವಾಸ ಸತ್ಯಾಗ್ರಹವನ್ನು ನಿಲ್ಲಿಸಬೇಕೆಂದು ಅಭಿಜಿತ್ ದೀಪ್ಕೆ ಮನವಿ ಮಾಡಿದರು.
