ಬೆಂಗಳೂರು: ಪಿಜಿಯಲ್ಲಿ (PG) ಸಿಲಿಂಡರ್ ಸ್ಫೋಟಗೊಂಡ (Cylinder Blast) ಪರಿಣಾಮ 10ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಬೆಂಗಳೂರು (Bengaluru) ಹೊರವಲಯದ ಬೊಮ್ಮಸಂದ್ರದಲ್ಲಿ (Bommasandra) ನಡೆದಿದೆ.
ಇಂದು ಮುಂಜಾನೆ 6 ಗಂಟೆಯ ಸುಮಾರಿಗೆ ಘಟನೆ ನಡೆದಿದೆ. ಬೊಮ್ಮಸಂದ್ರದ ನಾಗರಾಜ್ ರೆಡ್ಡಿ ಎಂಬವರಿಗೆ ಸೇರಿದ ಪಿಜಿ ಇದಾಗಿದ್ದು, ಲಿಂಗರಾಜು ಎಂಬವರಿಗೆ ಲೀಸ್‌ಗೆ ನೀಡಿದ್ದರು. ಈ ಕಟ್ಟಡ 18 ಕೊಠಡಿಗಳನ್ನು ಒಳಗೊಂಡಿದ್ದು, 10ಕ್ಕೂ ಹೆಚ್ಚು ಅನ್ಯರಾಜ್ಯದವರು ವಾಸವಾಗಿದ್ದರು. ಉತ್ತರ ಭಾರತದ ಕಾರ್ಮಿಕರು ಈ ಪಿಜಿಯಲ್ಲಿ ವಾಸಿಸುತ್ತಿದ್ದರು. ಇಂದು ಬೆಳಗ್ಗೆ ಎದ್ದು ಲೈಟ್ ಆನ್ ಮಾಡುತ್ತಿದ್ದಂತೆ ಸಿಲಿಂಡರ್ ಸ್ಫೋಟಗೊಂಡಿದೆ. ಇದನ್ನೂ ಓದಿ: ಬರ್ತ್‌ಡೇ ದಿನವೇ ಹತ್ಯೆಗೆ ಒಳಗಾದವನ ಕೊಲೆ ರಹಸ್ಯ ಬಯಲು – ಊಟಕ್ಕೆ ಹಣ ಕೊಡಲಿಲ್ಲವೆಂದು ಜೊತೆಯಲ್ಲಿದ್ದವನಿಂದಲೇ ಕೃತ್ಯ
ಸಿಲಿಂಡರ್ ಸ್ಫೋಟದಿಂದ ಗಂಭೀರ ಗಾಯಗೊಂಡಿರುವ ಗಾಯಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಹೊರಗಿನಿಂದ ಗೂಂಡಾಗಳನ್ನು ಕಳುಹಿಸಿ ಬಿಜೆಪಿ ಕಲ್ಲು ತೂರಾಟ ನಡೆಸುತ್ತಿದೆ: ಅಭಿಜೀತ್ ದೀಪ್ಕೆ
