ನವದೆಹಲಿ: ವೈಯಕ್ತಿಕ ಫೋಟೋ ಮತ್ತು ವೀಡಿಯೋಗಳನ್ನು ವ್ಯಕ್ತಿಯ ಅನುಮತಿ ಇಲ್ಲದೆ ಹಂಚಿಕೊಳ್ಳುಲು ಇನ್ಮುಂದೆ ಅವಕಾಶ ನೀಡುವುದಿಲ್ಲ ಎಂದು ಸಮಾಜಿಕ ಜಾಲತಾಣ ಕಂಪನಿಯಾದ ಟ್ವಿಟ್ಟರ್ ಹೇಳಿದೆ.
ಈಗಾಗಲೇ ಅನ್ಯರ ಫೋನ್ ನಂಬರ್, ವಿಳಾಸ, ಗುರುತಿನ ಚೀಟಿಯಂತಹ ಖಾಸಗಿ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ನಿಷೇಧಿಸಿ ಟ್ವೀಟರ್ ನೀತಿ ಜಾರಿ ಮಾಡಿದೆ. ಹೊಸ ನಿಯಮದ ಅನ್ವಯ ಬಳಕೆದಾರರು ಪ್ರತಿ ಬಾರಿ ಫೋಟೋ ಅಥವಾ ವೀಡಿಯೋ ಅಪ್ಲೋಡ್ ಮಾಡುವಾಗಲೂ ಟ್ವೀಟರ್ ಪರಾಮರ್ಶೆ ಮಾಡುವುದಿಲ್ಲ. ಇದನ್ನೂ ಓದಿ: ಟ್ವಿಟ್ಟರ್ ಸಿಇಒ ಪರಾಗ್ ಅಗರ್‌ವಾಲ್ ಸಿಗುತ್ತೆ ಕೋಟಿಗಟ್ಟಲೇ ಸಂಬಳ + ಬೋನಸ್
Advertisement
Advertisement
ಚಿತ್ರಿತ ವ್ಯಕ್ತಿಗಳು ಅಥವಾ ಅಧಿಕೃತ ಪ್ರತಿನಿಧಿಗಳು ತಮ್ಮ ಖಾಸಗಿ ಚಿತ್ರ ಅಥವಾ ವೀಡಿಯೋವನ್ನು ಹಂಚಿಕೊಳ್ಳಲು ತಾವು ಒಪ್ಪಿಗೆ ನೀಡಿಲ್ಲ ಎಂದು ನಮಗೆ ಸೂಚಿಸಿದಾಗ, ನಾವು ಅದನ್ನು ತೆಗೆದುಹಾಕುತ್ತೇವೆ ಎಂದು ಟ್ವೀಟರ್ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದೆ. ಇದನ್ನೂ ಓದಿ: ಟ್ವಿಟ್ಟರ್ CEO ಜಾಕ್ ಡಾರ್ಸಿ ರಾಜೀನಾಮೆ – ಭಾರತೀಯ ಪರಾಗ್ ಅಗರ್‌ವಾಲ್‌ಗೆ ಒಲಿಯಿತು ಪಟ್ಟ
Advertisement
ಮೈಕ್ರೋಬ್ಲಾಗಿಂಗ್ ಕಂಪನಿ ಟ್ವಿಟ್ಟರ್ ಸಹ-ಸಂಸ್ಥಾಪಕ ಜಾಕ್ ಡಾರ್ಸೆ ಸೋಮವಾರ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಹುದ್ದೆಯಿಂದ ಕೆಳಗಿಳಿದರು. ಟ್ವೀಟರ್‌ನ ನೂತನ ಸಿಇಒ ಆಗಿ ಭಾರತೀಯ ಮೂಲದ ಪರಾಗ್ ಅಗರ್‌ವಾಲ್ ಅಧಿಕಾರ ವಹಿಸಿಕೊಂಡಿದ್ದಾರೆ.