ವಾಷಿಂಗ್ಟನ್: ಟ್ವಿಟ್ಟರ್ ಸಿಇಒ ಹುದ್ದೆಗೆ ಜ್ಯಾಕ್ ಡಾರ್ಸಿ ರಾಜೀನಾಮೆ ನೀಡಿದ್ದು ಭಾರತೀಯ ಮೂಲದ ಪರಾಗ್ ಅಗರ್‌ವಾಲ್ ನೇಮಕವಾಗಿದ್ದಾರೆ. ಅಂತಾರಾಷ್ಟ್ರಿಯ ಮಟ್ಟದ ಕಂಪನಿಯಾದ ಕಾರಣ ಪರಾಗ್ ಅವರ ಸಂಬಳ ಎಷ್ಟಿರಬಹುದು ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.
ಪರಾಗ್ ಅವರಿಗೆ ಟ್ವಿಟರ್ ವಾರ್ಷಿಕವಾಗಿ 1 ದಶಲಕ್ಷ ಡಾಲರ್( ಅಂದಾಜು 7.50 ಕೋಟಿ ರೂ.)ಜೊತೆಗೆ ಬೋನಸ್ ನೀಡುತ್ತದೆ. ಅಂದರೆ ತಿಂಗಳಿಗೆ ಅಂದಾಜು 62.56 ಲಕ್ಷ ರೂ. ಹಣವನ್ನು ಕಂಪನಿ ಪಾವತಿಸುತ್ತದೆ.
Advertisement
Deep gratitude for @jack and our entire team, and so much excitement for the future. Here’s the note I sent to the company. Thank you all for your trust and support ???? https://t.co/eNatG1dqH6 pic.twitter.com/liJmTbpYs1
— Parag Agrawal (@paraga) November 29, 2021
Advertisement
ಟ್ವಿಟ್ಟರ್ ಕಂಪನಿಯು ಯುಎಸ್ ಸೆಕ್ಯೂರಿಟೀಸ್ ಆ್ಯಂಡ್ ಎಕ್ಸೆಂಜ್‌ಗೆ (ಎಸ್‌ಇಸಿ) ಸಲ್ಲಿಸಿದ ದಾಖಲೆಯಲ್ಲಿ ಈ ಅಂಶ ಬಹಿರಂಗವಾಗಿದೆ. ಇಷ್ಟೇ ಅಲ್ಲದೇ ಪರಾಗ್ ಅವರು 12.5 ಮಿಲಿಯನ್ ಯುಎಸ್ ಡಾಲರ್ ಮೌಲ್ಯದ ನಿಯಂತ್ರಿತ ಷೇರುಗಳನ್ನು (ಆರ್‌ಎಸ್‌ಯು) ಕಂಪನಿ ಕಡೆಯಿಂದ ಸ್ವೀಕರಿಸಲಿದ್ದಾರೆ.
Advertisement
ಇತ್ತೀಚಿನ ವರ್ಷಗಳಲ್ಲಿ ಡೋರ್ಸೆ ಡಿಜಿಟಲ್ ಪಾವತಿ ಸಂಸ್ಥೆ ಸ್ಕ್ವೇರ್‌ನಲ್ಲಿದ್ದ ನೂರಾರು ಮಿಲಿಯನ್ ಡಾಲರ್ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. 2009ರಲ್ಲಿ ಸ್ಕ್ವೇರ್ ಸ್ಥಾಪಿಸಿದ್ದು ಸಹ ಸಂಸ್ಥಾಪಕರೂ ಆಗಿದ್ದರು. ಪ್ರಸ್ತುತ ಸ್ಕ್ವೇರ್ ಮಾರುಕಟ್ಟೆ ಮೌಲ್ಯ 98.2 ಶತಕೋಟಿ ಡಾಲರ್(ಅಂದಾಜು 7 ಸಾವಿರ ಕೋಟಿ ರೂ. ರೂ.) ಮೌಲ್ಯವನ್ನು ಹೊಂದಿದ್ದರೆ ಟ್ವಿಟ್ಟರ್ 37 ಶತಕೋಟಿ( ಅಂದಾಜು 2 ಸಾವಿರ ಕೋಟಿ ರೂ.) ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. ಇದನ್ನೂ ಓದಿ: ಡಿಕೆಶಿ ಭಂಡಾಸುರ, ಸಿದ್ದರಾಮಯ್ಯ ಮಂಡಾಸುರ: ಶ್ರೀರಾಮುಲು ವ್ಯಂಗ್ಯ
Advertisement
2009ರಲ್ಲಿ ಡಾರ್ಸಿ ಹಣಕಾಸು ಪಾವತಿ ಸಂಸ್ಥೆ ʼಸ್ಕ್ವೇರ್ʼ ಸ್ಥಾಪಿಸಿದ್ದರು. ಈ ಕಂಪನಿಯಲ್ಲಿ ಡಾರ್ಸಿ ಮುಖ್ಯ ಕಾರ್ಯನಿರ್ವಹಕರಾಗಿದ್ದಾರೆ. ಕೆಲ ದಿನಗಳ ಹಿಂದೆ ದೊಡ್ಡ ಹೂಡಿಕೆದಾರರು ಡಾರ್ಸಿ ಅವರು ಎರಡು ಕಂಪನಿಗಳನ್ನು ಪರಿಣಾಮಕಾರಿಯಾಗಿ ಮುನ್ನಡೆಸಬಹುದೇ ಎಂದು ಬಹಿರಂಗವಾಗಿ ಪ್ರಶ್ನಿಸಿದ್ದರು.
ಮುಂಬೈ ಐಐಟಿಯಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಪದವಿ ಮುಗಿಸಿರುವ ಪರಾಗ್ ಅವರು, ಅಮೆರಿಕದ ಸ್ಟ್ಯಾನ್‌ಪೋರ್ಡ್ ಯುನಿವರ್ಸಿಟಿಯಿಂದ ಪಿಎಚ್‌ಡಿ ಪಡೆದಿದ್ದಾರೆ. 2011 ರಲ್ಲಿ ಟ್ವಿಟರ್ ಸೇರಿದ್ದ ಪರಾಗ್, ಆ ಕಂಪನಿಯ ಕೃತಕ ಬುದ್ದಿಮತ್ತೆ ಹಾಗೂ ಜಾಗತಿಕ ಮಾರುಕಟ್ಟೆ ಬೆಳೆಸಲು ಉತ್ತಮ ಕೊಡುಗೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂಬೈ ಮೂಲದ ಪರಾಗ್ ಅವರ ತಾಯಿ ಶಿಕ್ಷಕಿಯಾಗಿದ್ದು, ಅವರ ತಂದೆ ಪರಮಾಣು ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಪರಾಗ್ ಪತ್ನಿ ವಿನೀತಾ ಅಗರ್‌ವಾಲ್ ವೆಂಚರ್ ಕ್ಯಾಪಿಟಲ್‌ನಲ್ಲಿ ಹೂಡಿಕೆದಾರರಾಗಿದ್ದಾರೆ. ಪರಾಗ್–ವಿನೀತಾ ದಂಪತಿಗೆ ಗಂಡು ಮಗುವಿದೆ.
ಅಗರ್‌ವಾಲ್ ನವೆಂಬರ್ 29 ರಂದು ಟ್ವಿಟ್ಟರ್ ಸಿಇಒ ಆಗಿ ನೇಮಕಗೊಂಡಿದ್ದು, ಮೈಕ್ರೋಸಾಫ್ಟ್‌ನ ಸತ್ಯ ನಾಡೆಲ್ಲಾ, ಅಲ್ಫಾಬೆಟ್‍ನ ಸುಂದರ್ ಪಿಚೈ, ಐಬಿಎಮ್‍ನ ಅರವಿಂದ್ ಕೃಷ್ಣ, ಅಡೋಬ್‍ನ ಶಂತನು ನಾರಾಯಣ್ ಹೀಗೆ ಭಾರತೀಯ ಟೆಕ್ ಸಿಇಒಗಳಂತಹ ಗಣ್ಯರ ಸಾಲಿಗೆ ಸೇರಿಕೊಂಡಿದ್ದಾರೆ