ತುಮಕೂರು: ತುರುವೇಕೆರೆ (Turuvekere) ತಾಲೂಕಿನ ಅಂಚಿಹಳ್ಳಿ (Anchihalli) ಅರಣ್ಯ ಪ್ರದೇಶದಲ್ಲಿ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ ಪ್ರಕರಣಕ್ಕೆ 4 ತಿಂಗಳ ಬಳಿಕ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ (Illicit Relationship) ಹೊಂದಿದ್ದ ಪ್ರಿಯತಮನೇ ಆಕೆಯ ಹತ್ಯೆಗೈದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಡಿಎನ್‌ಎ ಪರೀಕ್ಷೆಯಿಂದ ಪೊಲೀಸರು ಪ್ರಕರಣ ಭೇದಿಸಿದ್ದಾರೆ. ಪ್ರೇಯಸಿಯನ್ನ ಕೊಲೆಗೈದಿದ್ದ ಆರೋಪಿ ಈಗ ತುರುವೇಕೆರೆ ಪೊಲೀಸರ ಅತಿಥಿಯಾಗಿದ್ದಾನೆ. ವಿವಾಹಿತೆ ಮಹಿಳೆ ಶ್ವೇತಾ (26) ಮೃತ ದುರ್ದೈವಿ. ತುಮಕೂರು (Tumakuru) ಜಿಲ್ಲೆ ತುರುವೇಕೆರೆ ತಾಲೂಕಿನ ಅಂಚಿಹಳ್ಳಿ ಅರಣ್ಯ ಪ್ರದೇಶದಲ್ಲಿ ಜನವರಿ 30ರಂದು ಅರಣ್ಯ ಪ್ರದೇಶದಲ್ಲಿ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ಶ್ವೇತಾ ಮಿಸ್ಸಿಂಗ್ ಬಗ್ಗೆ ಗಂಡ ಜನವರಿ 28ಕ್ಕೆ ತುರುವೇಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದ. ದೂರು ದಾಖಲಿಸಿಕೊಂಡ ತುರುವೇಕೆರೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಶ್ವೇತಾ ತಾಯಿಯ ಡಿಎನ್‌ಎ ಪರೀಕ್ಷೆ ನಡೆಸಿ, ಡಿಎನ್‌ಎ ಪರೀಕ್ಷೆಯ ವರದಿಯಲ್ಲಿ ಮೃತಪಟ್ಟಿರೋದು ಶ್ವೇತಾ ಎಂಬುದನ್ನು ಖಚಿತಪಡಿಸಿಕೊಂಡಿದ್ದರು. ಇದನ್ನೂ ಓದಿ: ರಸ್ತೆಗಳೂ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾರ್ಥನೆ ಸಲ್ಲಿಸುವಂತಿಲ್ಲ, ಪ್ರಾಣಿ ಬಲಿ ಕೊಡುವಂತಿಲ್ಲ: ಬಕ್ರೀದ್‌ಗೂ ಮುನ್ನ ಸಿಎಂ ಯೋಗಿ ಷರತ್ತು
ತುರುವೇಕೆರೆಯ ಮುತ್ತಗದಹಳ್ಳಿಯ ವಾಸಿಯಾಗಿದ್ದ ಶ್ವೇತಾಗೆ ಅದೇ ಗ್ರಾಮದ ಭಾನುಪ್ರಕಾಶ್ ಜೊತೆ ಅಕ್ರಮ ಸಂಬಂಧ ಇತ್ತು. ದಿನ ಕಳೆದಂತೆ ಇಬ್ಬರ ನಡುವೆ ಮನಸ್ತಾಪ ಆಗಿತ್ತು. ಜನವರಿ 19ರಂದು ಭಾನುಪ್ರಕಾಶ್ ಶ್ವೇತಾಗೆ ಕಾಲ್ ಮಾಡಿ ಆದಿಚುಂಚನಗಿರಿಗೆ ಕರೆಸಿಕೊಂಡಿದ್ದ. ಅಂದೇ ಕೊಲೆ ಮಾಡಿ ಅಂಚಿಹಳ್ಳಿ ಅರಣ್ಯಪ್ರದೇಶದಲ್ಲಿ ಪೆಟ್ರೋಲ್‌ನಲ್ಲಿ ಸುಟ್ಟು ಹಾಕಿದ್ದ. ಮೃತ ಶ್ವೇತಾಳ ಮೊಬೈಲ್ ನಂಬರ್ ಸಿಡಿಆರ್ ಪರಿಶೀಲನೆ ನಡೆಸಿದಾಗ ಪೊಲೀಸರಿಗೆ ಭಾನುಪ್ರಕಾಶ್ ಮೇಲೆ ಅನುಮಾನ ವ್ಯಕ್ತವಾಗಿದೆ. ಭಾನುಪ್ರಕಾಶ್‌ನನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ತೈಲ ದರ ಹೆಚ್ಚಳದಿಂದ ಕರ್ನಾಟಕಕ್ಕೆ ಲಾಭ, ಕೇಂದ್ರಕ್ಕಲ್ಲ – ಆರ್. ಅಶೋಕ್ ಸಮರ್ಥನೆ
ಬೇರೆಯವರ ಜೊತೆ ಅಕ್ರಮ ಸಂಬಂಧ ಬೆಳೆಸುತ್ತಿದ್ದಳು ಎಂಬ ಕಾರಣಕ್ಕೆ ಭಾನುಪ್ರಕಾಶ್ ಆಕೆಯನ್ನು ಹತ್ಯೆ ಮಾಡಿದ್ದ. ಭಾನುಪ್ರಕಾಶ್ ಶ್ವೇತಾ ಜೊತೆ 2-3 ವರ್ಷಗಳಿಂದ ಅಕ್ರಮ ಸಂಬಂಧ ಬೆಳೆಸಿದ್ದ. ಬಳಿಕ ಭಾನುಪ್ರಕಾಶ್ ಪತ್ನಿಗೆ ಈ ವಿಚಾರ ಗೊತ್ತಾಗಿ ಅವರ ಮನೆಯಲ್ಲಿ ಗಲಾಟೆ ಆಗಿತ್ತು. ಕೆಲ ದಿನಗಳಿಂದ ಭಾನುಪ್ರಕಾಶ್ ಶ್ವೇತಾಳ ಜೊತೆ ಮಾತು ಬಿಟ್ಟಿದ್ದ. ಭಾನುಪ್ರಕಾಶ್ ಮಾತನಾಡದೇ ಇದ್ದ ಸಮಯದಲ್ಲಿ ಶ್ವೇತಾ ಮತ್ತೊಬ್ಬನ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದಳು. ಈ ವಿಚಾರ ತಿಳಿದು ಶ್ವೇತಾಳನ್ನ ಕರೆಸಿಕೊಂಡು ಕೊಲೆ ಮಾಡಿದ್ದಾಗಿ ಪೊಲೀಸರ ತನಿಖೆಯಲ್ಲಿ ಆರೋಪಿ ಭಾನುಪ್ರಕಾಶ್ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ತುರುವೆಕೆರೆ ಪೊಲೀಸರು ಆರೋಪಿ ಭಾನುಪ್ರಕಾಶ್‌ನನ್ನು (53) ಬಂಧಿಸಿದ್ದಾರೆ. ಇದನ್ನೂ ಓದಿ: ರಾಜ್ಯಸಭೆಗೆ ನಾನು ಕೂಡ ಆಕಾಂಕ್ಷಿ: ಡಿ.ವಿ ಸದಾನಂದಗೌಡ
