ಲಕ್ನೋ: ಈದ್ ಅಲ್-ಅಧಾ ದಿನದಂದು ರಸ್ತೆಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡುವುದು ಅಥವಾ ‘ಕುರ್ಬಾನಿ’ (ಪ್ರಾಣಿ ಬಲಿ)ಗೆ ಅವಕಾಶ ನೀಡದಂತೆ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಆದೇಶಿಸಿದ್ದಾರೆ. ಜೊತೆಗೆ ಬಕ್ರೀದ್ (Bakrid) ಹಬ್ಬಕ್ಕೆ ಸಂಬಂಧಿಸಿದಂತೆ 10 ಕಟ್ಟುನಿಟ್ಟಿನ ನಿರ್ದೇಶನಗಳನ್ನು ಹೊರಡಿಸಿದ್ದಾರೆ.
ಮಸೀದಿ ಆವರಣದೊಳಗೆ ಮಾತ್ರ ನಮಾಜ್ ಮಾಡಬೇಕು. ತೆರೆದ ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ರಸ್ತೆಗಳಲ್ಲಿ ಪ್ರಾರ್ಥನೆಗಳನ್ನು ನಡೆಸಬಾರದು. ಪ್ರಾರ್ಥನೆ ಸಲ್ಲಿಸಲು ರಸ್ತೆಗಳನ್ನು ನಿರ್ಬಂಧಿಸಬಾರದು ಮತ್ತು ಭಕ್ತರ ಸಂಖ್ಯೆ ಹೆಚ್ಚಿದ್ದರೆ, ಪಾಳಿಯಲ್ಲಿ ಪ್ರಾರ್ಥನೆಗಳನ್ನು ನಡೆಸಬೇಕೆಂದು ನಿರ್ದೇಶಿಸಲಾಗಿದೆ. ಇದನ್ನೂ ಓದಿ: ಪತ್ನಿಯೊಂದಿಗೆ ಪ್ರೇಮಸೌಧ ತಾಜ್ ಮಹಲ್‌ಗೆ ಭೇಟಿ ನೀಡಿದ ಮಾರ್ಕೊ ರುಬಿಯೊ
ತೆರೆದ ಪ್ರದೇಶಗಳಲ್ಲಿ ಯಾವುದೇ ಪ್ರಾಣಿ ಬಲಿ ನೀಡಬಾರದು ಮತ್ತು ನಿಷೇಧಿತ ಪ್ರಾಣಿಗಳ ಬಲಿ ತಡೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪ್ರಾಣಿ ಬಲಿಯ ನಂತರ ಯಾವುದೇ ಅನೈರ್ಮಲ್ಯದ ಪರಿಸ್ಥಿತಿಗಳು ಉದ್ಭವಿಸದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಸರಿಯಾದ ನೈರ್ಮಲ್ಯ ವ್ಯವಸ್ಥೆಗಳನ್ನು ಮಾಡುವಂತೆ ಅಧಿಕಾರಿಗಳಿಗೆ ಅದೇಶಿಸಿದ್ದಾರೆ.
ದುಷ್ಕರ್ಮಿಗಳ ಮೇಲೆ ತೀವ್ರ ನಿಗಾ ಇಡಬೇಕು. ಈದ್ಗಾಗಳಲ್ಲಿ ಪೊಲೀಸ್ ಪಡೆಗಳನ್ನು ನಿಯೋಜಿಸಬೇಕು. ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಮತ್ತು ಡ್ರೋನ್‌ಗಳನ್ನು ಬಳಸಿಕೊಂಡು ಕಣ್ಗಾವಲು ನಡೆಸಬೇಕು. ಕಾನೂನು ಸುವ್ಯವಸ್ಥೆ ಬಗ್ಗೆ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್ ಉಗ್ರರ ಬಳಿಯಿತ್ತು ಚೀನಾದ ಹೈಟೆಕ್ ಕ್ಯಾಮೆರಾ – ತನಿಖೆಗಿಳಿದ NIA
