– ಮಗು ಮೃತಪಟ್ಟ ದಿನ ಬಟ್ಟೆ ಬದಲಿಸಿದ್ದ ಆರೋಪಿಗಳು
ಬೆಂಗಳೂರು: ಕಾಡುಗೋಡಿಯಲ್ಲಿ (Kadugodi) ಆರು ವರ್ಷದ ಬಾಲಕಿ ವೆನ್ನಿಲಾ ಅನುಮಾನಸ್ಪದ ಸಾವು ಪ್ರಕರಣದಲ್ಲಿ ಹಲವು ಇಂಟರೆಸ್ಟಿಂಗ್ ವಿಚಾರಗಳು ಹೊರಗೆ ಬರುತ್ತಿವೆ. ಬಾಲಕಿ ಸಾವು ಪ್ರಕರಣದಲ್ಲಿ ಹೆತ್ತ ತಾಯಿ ಮತ್ತು ಆಕೆಯ ಪ್ರಿಯಕರನ ಮೇಲೆ ಪೊಲೀಸರಿಗೆ ಮತ್ತಷ್ಟು ಅನುಮಾನ ಮೂಡಿದೆ.
ಆರು ವರ್ಷದ ಮಗು ವೆನ್ನಿಲಾ ಅನುಮಾನಸ್ಪದ ಸಾವು ಪ್ರಕರಣದಲ್ಲಿ ಪೊಲೀಸರ ತನಿಖೆ ವೇಳೆ ಹಲವು ವಿಚಾರಗಳು ಬೆಳಕಿಗೆ ಬರುತ್ತಿವೆ. ಹೆತ್ತ ತಾಯಿಯೇ ಮಗಳನ್ನು ಕೊಲೆ ಮಾಡಿದ್ದು, ಬಿರಿಯಾನಿ ಕಥೆ ಕಟ್ಟಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಮಾರ್ಚ್ 24ರಂದು ಇದ್ದಕ್ಕಿದ್ದಂತೆ ಮಗಳು ಮೃತಪಟ್ಟಿರುತ್ತಾಳೆ. ಮಗುವಿನ ತಾಯಿ ಪ್ರಿಯಾಂಕಾ ಬರ್ತಡೇಗೆ ಕೋಲಾರ ಬಳಿಯ ಕೆಫೆಗೆ ಹೋಗಿದ್ವಿ, ಆಗ ಮಗುವಿಗೆ ಕೇಕ್ ತಿನ್ನಿಸಿ ಕಾರಿನಲ್ಲಿ ಮಲಗಿಸಿದ್ದಿ, ಬೆಳಗ್ಗೆ ನೋಡುವಷ್ಟರಲ್ಲಿ ಸಾವನ್ನಪ್ಪಿದೆ ಎಂದು ಹೇಳಿದ್ದಳು. ತಾಯಿ ಪ್ರಿಯಾಂಕಾಳ ಬಗೆಬಗೆ ಹೇಳಿಕೆಯಿಂದ ಅನುಮಾನಗೊಂಡ ಕಾಡುಗೊಡಿ ಪೊಲೀಸರು ವೆನ್ನಿಳಾ ಮೃತದೇಹವನ್ನು ಮರಣೋತ್ತರ ಪರೀಕ್ಷಗೆ ಒಳಪಡಿಸಿದ್ದರು. ಮೂರು ತಿಂಗಳ ಬಳಿಕ ಬಂದ ಪೋಸ್ಟ್ ಮಾರ್ಟಂ ವರದಿಯಲ್ಲಿ ಹೊಡೆದು ಸಾಯಿಸಿದ ಅಂಶ ಬಯಲಾಗಿತ್ತು. ಇದನ್ನೂ ಓದಿ: ಆಟವಾಡುತ್ತಿದ್ದ ವೇಳೆ ಕುಸಿದು ಬಿದ್ದು 14 ವರ್ಷದ ಬಾಲಕಿ ಸಾವು – ಹೃದಯಾಘಾತ ಶಂಕೆ

ಇದೀಗ ಆರೋಪಿ ತಾಯಿ (Mother) ಪ್ರಿಯಾಂಕಾಗಳ ಮತ್ತೊಂದು ಮುಖವಾಡ ಬಯಲಾಗಿದ್ದು, ಆಕೆಗೆ ಐಷಾರಾಮಿ ಜೀವನ ನಡೆಸಬೇಕು ಅನ್ನೋ ಆಸೆ ಇತ್ತು. ಬಾಲಕಿ ತಾಯಿ ಪ್ರಿಯಾಂಕಾ, ಆಕೆಯ ಪ್ರಿಯಕರ ಮೋಹನ್ ನಡುವೆ ಪ್ರೀತಿಯಾಗಿ ಕಾಶಿಯಲ್ಲಿ ಯಾರಿಗೂ ತಿಳಿಯದಂತೆ ಮದುವೆಯಾಗಿದ್ದರು. ಇದು ಮುಂದುವರೆದು ಮಗು ಮಾಡಿಕೊಳ್ಳಲು ನಿರ್ಧಾರ ಮಾಡಿದ ವೇಳೆ ಜೊತೆಗಿದ್ದ ಪ್ರಿಯಾಂಕಾಳ ಮಗಳು ಆರು ವರ್ಷದ ವೆನ್ನಿಲಾ ಅದಕ್ಕೆ ಅಡ್ಡಿಯಾಗುತ್ತಾಳೆ ಎಂಬ ಕಾರಣಕ್ಕೆ ಮಗುವನ್ನು ಕತ್ತುಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದೆ. ಅಲ್ಲದೇ ಆರೋಪಿ ಪ್ರಿಯಾಂಕಾಗೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ಬಳಿ ಐವತ್ತು ಎಕರೆ ಜಮೀನು ಇದ್ದು, ಆಸ್ತಿ ವಿಚಾರಕ್ಕೂ ಈ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಡೊಮಿನಿಕನ್ ರಿಪಬ್ಲಿಕ್‌ನಲ್ಲಿ ಖಾಸಗಿ ಜೆಟ್ ಪತನ – ಇಬ್ಬರು ಪೈಲಟ್ ಸಜೀವ ದಹನ, ಬೆಚ್ಚಿಬೀಳಿಸುವ ವಿಡಿಯೋ ವೈರಲ್
ಮಗು ಮೃತಪಟ್ಟ ದಿನ ಬಟ್ಟೆ ಬದಲಿಸಿದ್ದ ಆರೋಪಿಗಳು:
ಪ್ರಕರಣ ಹೊರಗೆ ಬರುತ್ತಿದ್ದಂತೆ, ಪ್ರಿಯಕರ ಮೋಹನ್‌ನನ್ನು ಕಾಡುಗೋಡಿ ಪೊಲೀಸರು ಬಂಧನ ಮಾಡಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮಗು ವೆನ್ನಿಲಾ ಸಾವನ್ನಪ್ಪಿದ ದಿನ ಧರಿಸಿದ್ದ ಬಟ್ಟೆ, ಅವತ್ತು ನೀವು ಯಾವ ಬಟ್ಟೆ ಧರಿಸಿದ್ರಿ, ಆ ಬಟ್ಟೆಗಳನ್ನು ನೀಡುವಂತೆ ಪೊಲೀಸರು ಕೇಳಿದ್ದಾರೆ. ಆದರೆ ಪ್ರಿಯಕರ ಮೋಹನ್ ಮಗು ಮತ್ತು ತಾನು ಧರಿಸಿದ್ದ ಬಟ್ಟೆಗಳನ್ನು ಚೇಂಜ್ ಮಾಡಿ ಕೊಟ್ಟಿರೋದು ಪೊಲೀಸರ ಸಿಸಿಟಿವಿ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಇನ್ನು ಮಗುವಿನ ಅಮ್ಮ ಪ್ರಿಯಾಂಕಾ ಕೇಸ್ ದಾಖಲಾದ ಮರುಕ್ಷಣವೇ ನಾಪತ್ತೆಯಾಗಿದ್ದಾರೆ. ಇದನ್ನೂ ಓದಿ: ʻದೀದಿʼಗೆ ದೊಡ್ಡ ಶಾಕ್ – ರಾಜ್ಯಸಭಾ ಸದಸ್ಯತ್ವಕ್ಕೆ ಸುಖೇಂದು ಶೇಖರ್, ಕೋಯೆಲ್ ಮಲ್ಲಿಕ್ ರಾಜೀನಾಮೆ
