– ಟಿಎಂಸಿ ಪಕ್ಷದಲ್ಲಿ ಬಿಗಡಾಯಿಸಿದ ಬಂಡಾಯದ ಬಿಕ್ಕಟ್ಟು
ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದ ಸುಖೇಂದು ಶೇಖರ್ ರಾಯ್ (Sukhendu Sekhar Ray) ಅವರು ರಾಜ್ಯಸಭಾ ಸದಸ್ಯತ್ವಕ್ಕೆ ಇಂದು (ಸೋಮವಾರ) ರಾಜೀನಾಮೆ ಸಲ್ಲಿಸಿದ್ದಾರೆ. ಈ ಬೆನ್ನಲ್ಲೇ ಮತ್ತೊಬ್ಬ ರಾಜ್ಯಸಭಾ ಸದಸ್ಯೆ ಕೋಯೆಲ್ ಮಲ್ಲಿಕ್ (Koel Mallick) ಕೂಡ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.
ಇದು ಪಕ್ಷ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಮಾಜಿ ಸಿಎಂ ಮಮತಾ ಬ್ಯಾನರ್ಜಿ (Mamata Banerjee) ಅವರನ್ನ ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಬಂಡಾಯದ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿದೆ. ಇದನ್ನೂ ಓದಿ: 7 ಪ್ರಕರಣಗಳಲ್ಲಿ ವಾಂಟೆಡ್ – ತಲೆಮರೆಸಿಕೊಂಡಿದ್ದ ಟಿಎಂಸಿ ನಾಯಕ ನೇಪಾಳ ಗಡಿಯಲ್ಲಿ ಅರೆಸ್ಟ್
ಹಿರಿಯ ನಾಯಕರು ಹಾಗೂ ರಾಜ್ಯಸಭೆಯಲ್ಲಿ ಟಿಎಂಸಿಯ (TMC) ಗಟ್ಟಿ ಧ್ವನಿಗಳಲ್ಲಿ ಒಬ್ಬರಾಗಿದ್ದ ಸುಖೇಂದು ಶೇಖರ್ ಅವರು ರಾಜ್ಯಸಭಾ (Rajya Sabha) ಸಭಾಪತಿಗೆ ಇಂದು ರಾಜೀನಾಮೆ ಸಲ್ಲಿಸಿದ್ದಾರೆ.

ಸದ್ಯ ಸಂಸತ್ ಮೇಲ್ಮನೆಯಲ್ಲಿ 13 ಸದಸ್ಯರನ್ನು ಹೊಂದಿರುವ ಟಿಎಂಸಿ, ರಾಯ್ ಮತ್ತು ಮಲ್ಲಿಕ್ ಅವರ ರಾಜೀನಾಮೆಯಿಂದ ಸದಸ್ಯರ ಬಲ 11ಕ್ಕೆ ಇಳಿಯಲಿದೆ. ಇದನ್ನೂ ಓದಿ: ವಿದೇಶದಲ್ಲಿನ ಕೆಲ ಶಕ್ತಿಗಳು ದೇಶದ ಯುವಜನರನ್ನ ಕೈಗೊಂಬೆಯಾಗಿ ಮಾಡಿಕೊಳ್ಳಲು ಬಯಸ್ತಿವೆ; ʻಕಾಕ್ರೋಚ್ʼಗೆ ನಬಿನ್ ಚಾಟಿ
ಸುಖೇಂದು ರಾಜೀನಾಮೆ ಪತ್ರದಲ್ಲಿ ಏನಿದೆ?
ಸುಖೇಂದು ಶೇಖರ್ ರಾಯ್ ತಮ್ಮ ರಾಜೀನಾಮೆ ಪತ್ರದಲ್ಲಿ, ʻಭ್ರಷ್ಟಾಚಾರ, ಮಹಿಳೆಯರ ಮೇಲಿನ ಅಪರಾಧಗಳು ಮತ್ತು ಶಿಕ್ಷಣ, ಆರೋಗ್ಯ ರಕ್ಷಣೆ, ಕೈಗಾರಿಕೆ, ಉದ್ಯೋಗ, ಕಾನೂನು ಮತ್ತು ಸುವ್ಯವಸ್ಥೆ ಸೇರಿದಂತೆ ಆಡಳಿತದಲ್ಲಿನ ವೈಫಲ್ಯಗಳಿಂದಾಗಿ ಬಂಗಾಳದ ಜನ 15 ವರ್ಷ ಆಡಳಿತ ನಡೆಸಿದ ತೃಣಮೂಲ ಕಾಂಗ್ರೆಸ್ ಸರ್ಕಾರವನ್ನ ತಿರಸ್ಕರಿಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಅಲ್ಲದೇ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸಾಧನೆಯನ್ನ ಐತಿಹಾಸಿಕ ಜನಾದೇಶ ಎಂದು ಬಣ್ಣಿಸಿರುವ ಸುಖೇಂದು ಶೇಖರ್ ರಾಯ್ ತೃಣಮೂಲ ಕಾಂಗ್ರೆಸ್ ಮತ್ತು ರಾಜ್ಯಸಭೆ ಎರಡಕ್ಕೂ ರಾಜೀನಾಮೆ ನೀಡುವ ಮೂಲಕ ಜನರ ತೀಸ್ವೀಕರಿಸುತ್ತಿರುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: 6,000 ಕೆಲಸಕ್ಕೆ ಸೇರಿದ್ದ ಇಂಜಿನಿಯರ್ ಬಳಿ 2 ಕೋಟಿ ಕ್ಯಾಶ್, 5 ಬಿಲ್ಡಿಂಗ್, 13 ಸೈಟು – ಬೆಚ್ಚಿಬಿದ್ದ ಅಧಿಕಾರಿಗಳು
