ಬೆಂಗಳೂರು: ರಾಜ್ಯಾದ್ಯಂತ ನಗರ ಪ್ರದೇಶಗಳ ವ್ಯಾಪ್ತಿಗಳಲ್ಲಿನ ನಿವೇಶನಗಳಿಗೂ ‘ಬಿ’ ಖಾತಾದಿಂದ (B Khata) ‘ಎ’ ಖಾತೆ (A Khata) ನೀಡಲು ಗುರುವಾರ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಅಲ್ಲದೆ, ಅನಧಿಕೃತ ನಿವೇಶನಗಳಿಗೆ ಖಾತೆ ನೀಡುವುದನ್ನು ನಿಯಂತ್ರಸಲು ಯಾವುದೇ ಖಾತೆ ಹೊಂದಿರದ ನಿವೇಶನಗಳಿಗೆ ಹೊಸದಾಗಿ ಎ-ಖಾತಾ ನೀಡದಿರಲು ನಿರ್ಧರಿಸಲಾಗಿದೆ. ಇದನ್ನೂ ಓದಿ: ಪಿಂಚಣಿದಾರರಿಗೆ ‘ಸಂಧ್ಯಾ ಕಿರಣ’ ಆರೋಗ್ಯ ಭದ್ರತೆ: ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರ
ಈಗಾಗಲೇ ಬೆಂಗಳೂರಿನಲ್ಲಿ ಬಿ ಖಾತೆಗೆ ಎ ಖಾತೆ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಇದೇ ರೀತಿಯಲ್ಲಿ ರಾಜ್ಯಾದ್ಯಂತ ನಗರ ಪ್ರದೇಶಗಳಲ್ಲಿನ ಸ್ಥಳೀಯ ಯೋಜನಾ ಪ್ರದೇಶಗಳ ಒಳಗೆ ಅಥವಾ ಹೊರಗೆ ಇರುವ ಬಿ-ಖಾತಾ ನಿವೇಶನಗಳಿಗೂ ಎ ಖಾತೆ ನೀಡಲು ತೀರ್ಮಾನಿಸಲಾಗಿದೆ.
ಮೊದಲನೆಯದಾಗಿ, ಬಿ ಖಾತಾದಲ್ಲಿರುವ ಆಸ್ತಿಯ ಇಲ್ಲಿಯವರೆಗಿನ ಎಲ್ಲ ಬಾಕಿ ಆಸ್ತಿ ತೆರಿಗೆಯನ್ನು ಸಂಪೂರ್ಣವಾಗಿ ಪಾವತಿಸಬೇಕು. ಇದನ್ನೂ ಓದಿ: ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಪಟ್ಟು – ಆ.14 ರಂದು ವಿಧಾನಸೌಧದ ಮುಂದೆ ಪ್ರತಿಭಟನೆಗೆ ಸಿದ್ಧತೆ
ಯಾವುದೇ ಬಾಕಿ ಉಳಿಸಿಕೊಳ್ಳಬಾರದು. ಆಸ್ತಿಯ ಹಕ್ಕು ಪತ್ರ, ಕ್ರಯ ಪತ್ರ, ಆಸ್ತಿ ತೆರಿಗೆ ಪಾವತಿಸಿದ ರಸೀದಿಗಳು, ಅನುಮೋದಿತ ಕಟ್ಟಡ ನಿರ್ಮಾಣ ನಕ್ಷೆ ಜತೆ ಅರ್ಜಿ ಸಲ್ಲಿಸಿದರೆ ಅಧಿಕಾರಿಗಳು ಪರಿಶೀಲಿಸಿ ಕ್ರಮಬದ್ಧವಾಗಿದ್ದರೆ ಮಾತ್ರ ಎ ಖಾತಾ ನೀಡಬಹುದು.

