– ಟೇಕಾಫ್ ಮಾಡಬೇಡಿ, ಡೋರ್ ತೆಗೆಯಿರಿ, ಉಸಿರಾಡಲು ಕಷ್ಟವಾಗ್ತಿದೆ ಎಂದ ಪ್ರಯಾಣಿಕರು
– ಲ್ಯಾಂಡಿಂಗ್ ಬಳಿಕ ಅಸ್ವಸ್ಥಗೊಂಡ ಮಹಿಳೆಯರು, ಗರ್ಭಿಣಿಯರಿಗೆ ವೀಲ್ ಚೇರ್ ವ್ಯವಸ್ಥೆ
ನವದೆಹಲಿ: ದೆಹಲಿ-ಪುಣೆ ಸ್ಪೈಸ್‌ಜೆಟ್ (Spice Jet) ವಿಮಾನದಲ್ಲಿ ತಾಂತ್ರಿಕ ದೋಷ ಉಂಟಾಗಿ ಎಸಿ ಕೈಕೊಟ್ಟ ಪರಿಣಾಮ ಪ್ರಯಾಣಿಕರು ಉಸಿರಾಡೋಕೂ ತೊಂದರೆ ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.
ಮಂಗಳವಾರ (ಆ.12) ರಾತ್ರಿ 9:30ರ ಸುಮಾರಿಗೆ ಸ್ಪೈಸ್‌ಜೆಟ್‌ನ ಎಸ್‌ಜಿ-105 ವಿಮಾನವು ದೆಹಲಿಗೆ ಪುಣೆಗೆ ತೆರಳಬೇಕಿತ್ತು, ಆದರೆ ತಡವಾಗಿ 11:30ರ ಸುಮಾರಿಗೆ ಹೊರಡಲು ಸಿದ್ಧವಾಗಿತ್ತು. ವಿಮಾನದೊಳಗೆ ಎಸಿ ಆನ್ ಆಗಿರಲಿಲ್ಲ. ವಿಮಾನ ಟೇಕ್ ಆಫ್ ಆದ ಬಳಿಕವು ಎಸಿ ಆನ್ ಆಗಿರಲಿಲ್ಲ. ಇದರಿಂದ ವಿಮಾನದೊಳಗೆ ಉಸಿರಾಡೋಕೆ ಸಮಸ್ಯೆ ಎದುರಾಯಿತು. ಕೆಲವರಿಗೆ ಮೈ ತುಂಬಾ ಬೆವರು ಬಂದು, ಇನ್ನೇನು ಕುಸಿದು ಬೀಳುತ್ತೇವೆ ಎನ್ನಿಸುತ್ತಿತ್ತು. ಅಲ್ಲದೇ ಗರ್ಭಿಣಿಯರು ಸೇರಿ ಹಲವರು ಅಸ್ವಸ್ಥರಾಗಲು ಪ್ರಾರಂಭಿಸಿದರು ಎಂದು ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕ ಬಂದ್‌ಗೆ ರಾಜ್ಯ ರೈತ ಸಂಘಟನೆ ಬೆಂಬಲ – ತಮಿಳುನಾಡಿಗೆ ನೀರು ಹರಿಸದಂತೆ ಒತ್ತಾಯ
🚨 SpiceJet Delhi–Pune flight passengers protest after extreme heat and a reported technical fault caused severe discomfort onboard. Passengers demanded action from authorities. ✈️#SpiceJet #DelhiPune #FlightIssue #AviationNews #BreakingNews pic.twitter.com/mOKR0sVpk6
— Lokmat Times Nagpur (@LokmatTimes_ngp) August 12, 2026
ಇದರಿಂದ ಸಮಸ್ಯೆ ಎದುರಿಸಿದ ಪ್ರಯಾಣಿಕರು, ಡೋರ್ ಓಪನ್ ಮಾಡಿ, ಎಸಿ ಆನ್ ಮಾಡುವಂತೆ ತಿಳಿಸಿದರೂ ಸುಮ್ಮನಿರಿ ಎಂದು ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ. ಕೊನೆಗೆ ಅಲ್ಲಿದ್ದವರೆಲ್ಲ ವಿಮಾನದ ಬಾಗಿಲು ತೆರೆಯುವಂತೆ ಸಿಬ್ಬಂದಿಯನ್ನು ಆಗ್ರಹಿಸಿದರು. ಅಲ್ಲಿಂದ ವಿಮಾನವನ್ನು ನೇರವಾಗಿ ಬೇಗೆ ತಿರುಗಿಸಲಾಯಿತು. ಕೂಡಲೇ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು, ಅಸ್ವಸ್ಥಗೊಂಡ ಮಹಿಳೆಯರು ಹಾಗೂ ಗರ್ಭಿಣಿಯರಿಗಾಗಿ ವೀಲ್ ಚೇರ್ ವ್ಯವಸ್ಥೆ ಮಾಡಿ, ಟರ್ಮಿನಲ್ ಕಡೆಗೆ ಕರೆದೊಯ್ದರು.
हे दिल्लीहून पुण्याला जाणारे स्पाइसजेटचे विमान होते. विमानामध्ये आबालवृद्धांसह लहान मुलं देखील होती. या विमानात बसल्यानंतर विमानातील तापमान अचानक प्रचंड वाढलं. तापमान एवढं वाढत गेलं की लोकांना सहन होईना. सगळे घामाने ओले झाले होते. लोकांना श्वास घ्यायला खूप जास्त त्रास व्हायला… pic.twitter.com/jVYTEMcFNv
— Leshpal_speaks (@Leshpal_speaks) August 11, 2026
ನಂತರ ಬೇರೊಂದು ಪರ್ಯಾಯ ವಿಮಾನದ ವ್ಯವಸ್ಥೆ ಮಾಡಲಾಗಿದ್ದು, ಆ ವಿಮಾನವು ಇಂದು (ಆ.12) ಬೆಳಿಗ್ಗೆ 5:30ರ ಸುಮಾರಿಗೆ ದೆಹಲಿಯಿಂದ ಹೊರಟು 7 ಗಂಟೆಗೆ ಪುಣೆಯನ್ನು ತಲುಪಿದೆ ಎಂದು ಸ್ಪೈಸ್‌ಜೆಟ್ ವಕ್ತಾರರು ಈ ಬಗ್ಗೆ ಪ್ರಯಾಣಿಕರಿಗೆ ಕ್ಷಮೆಯಾಚಿಸಿದ್ದಾರೆ.ಇದನ್ನೂ ಓದಿ: ಜಂಟಿ ಸಂಸದೀಯ ಸಮಿತಿಗೆ FCRA ತಿದ್ದುಪಡಿ ಮಸೂದೆ ರವಾನೆ

