– 5 ಟೌನ್ಶಿಪ್ ಆಗ್ಲೇಬೇಕು; ʻಪಬ್ಲಿಕ್ ಟಿವಿ Exclusive ಸಂದರ್ಶನʼದಲ್ಲಿ ಸಿಎಂ ಮಾತು
– ನೈಸ್ ಟೇಕ್ ಓವರ್ ಮಾಡೋದಕ್ಕೆ ನನಗೇನು ತಲೆ ಕೆಟ್ಟಿದ್ಯಾ?
ಬೆಂಗಳೂರು: ಬೆಂಗಳೂರು-ಮೈಸೂರು ರೋಡ್ (Bengaluru-Mysuru Road) ಆಗಲೇಬೇಕು. ಆದರೆ ನೈಸ್ ರಸ್ತೆಯನ್ನ ಈಗ ನಾನು ವಶಕ್ಕೆ ತಗೆದುಕೊಳ್ಳಲು ಆಗಲ್ಲ ಎಂದು ಸಿಎಂ ಡಿಕೆ ಶಿವಕುಮಾರ್ (CM DK Shivakumar) ಹೊಸ ಬಾಂಬ್ ಸಿಡಿಸಿದರು.
ʻಪಬ್ಲಿಕ್ ಟಿವಿ Exclusive ಸಂದರ್ಶನʼದಲ್ಲಿ ಸುದೀರ್ಘವಾಗಿ ಮಾತನಾಡಿದ ಸಿಎಂ ಹಲವು ವಿಚಾರಗಳನ್ನ ಪ್ರಸ್ತಾಪಿಸಿದ್ರು. ನಮ್ಮ ಪ್ರಾಜೆಕ್ಟ್ ಕಾರ್ಯಗತ ಆಗಬೇಕು. ಇದು ನೈಸ್ ರಸ್ತೆ (Nice Road) ಮೈಸೂರಿಗೆ ಹೋಗಬೇಕು ಅನ್ನೋ ಪ್ರಾಜೆಕ್ಟ್. ಒಪ್ಪಂದದಂತೆ 5 ಟೌನ್ಶಿಪ್ ಆಗಬೇಕು, ಈಗಾಗಲೇ ಅಧಿಸೂಚನೆ ಆಗಿದೆ. ಮೈಸೂರು, ಚನ್ನಪಟ್ಟಣ, ರಾಮನಗರ ಬೆಳೆಯುತ್ತಿದೆ. ಎಕ್ಸ್ಪ್ರೆಸ್ ವೇ ಜೊತೆಗೆ ನೈಸ್ ರೋಡ್ ಕೂಡ ಬೇಕು. ರಸ್ತೆಗಳು ಹೆಚ್ಚಾದಷ್ಟು ಅಭಿವೃದ್ಧಿ ಹೆಚ್ಚುತ್ತದೆ ಎಂದರು. ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳು ಒಂದಷ್ಟು ತೊಂದರೆ ಕೊಟ್ಟಿವೆ – ʻಪಬ್ಲಿಕ್ ಟಿವಿ Exclusive ಸಂದರ್ಶನʼದಲ್ಲಿ ಒಪ್ಪಿಕೊಂಡ ಸಿಎಂ
ಹೆಚ್ಡಿಕೆಗೆ ತಿರುಗೇಟು:
ಇನ್ನೂ ನೈಸ್ ಯೋಜನೆ ವಿಚಾರವಾಗಿ ಹೆಚ್ಡಿಕೆ ಆರೋಪಿಗಳಿಗೆ ಸಿಎಂ ತಿರುಗೇಟು ನೀಡಿದರು. ನೈಸ್ನ ನಾನು ಮಾಡಿದ್ನಾ? ದೇವೇಗೌಡ್ರು ಸೈನ್ ಹಾಕಿದ್ದು. ನೈಸ್ ರೋಡ್ ಇಲ್ಲ ಅಂದ್ರೆ ಏನಾಗುತ್ತಿತ್ತು? ನೈಸ್ ಪ್ರಾಜೆಕ್ಟ್ ನೋಟಿಫಿಕೇಶನ್ ಇವರೇ ಮಾಡಿದ್ದು. ನೈಸ್ ಟೇಕ್ ಓವರ್ ಮಾಡೋದಕ್ಕೆ ನನಗೇನು ತಲೆ ಕೆಟ್ಟಿದ್ಯಾ? ಸುಳ್ಳು ಅವರ ಮನೆ ದೇವರು. ನಾನೇಕೆ ನೈಸ್ ತೆಗೆದುಕೊಳ್ಳಲಿ? ನನಗೆ ಅದು ಬೇಡ ಎಂದು ಕೌಂಟರ್ ಕೊಟ್ಟರು. ಇದನ್ನೂ ಓದಿ: ನನ್ನ ನಾಯಕತ್ವದಲ್ಲಿ ಪಕ್ಷ ಅಧಿಕಾರಕ್ಕೆ ತಂದು ರಾಷ್ಟ್ರ ರಾಜಕಾರಣಕ್ಕೆ ಹೋಗ್ತೀನಿ: ಡಿಕೆ ಶಿವಕುಮಾರ್
ನೈಸ್ ರಸ್ತೆಯನ್ನ ವಶಕ್ಕೆ ಪಡೆಯೋಕೆ ಈಗ ಆಗಲ್ಲ. ಅದರ ಟೈಂ ಮುಗಿಯಬೇಕು. ಅಲ್ಲಿವರೆಗೂ ಅದನ್ನು ಮುಟ್ಟಲು ಆಗಲ್ಲ. ಇವರು ಅವನಿಗೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ ಅಷ್ಟೇ ಎಂದು ಟೋಲ್ ಕಟ್ಟಬೇಡಿ ಎಂದಿದ್ದ ಹೆಚ್ಡಿಕೆಗೆ ಡಿಕೆಶಿ ತಿರುಗೇಟು ನೀಡಿದರು. ಇದನ್ನೂ ಓದಿ: ನಾನು ಸಿಂಗಲ್ ಫೈಟರ್… ಗುಂಪು ಕಟ್ಟಿಕೊಂಡು ಹೋಗಲ್ಲ: ಡಿಕೆಶಿ
ಬಿಜೆಪಿಯವ್ರು ನನ್ನನ್ನ ಟ್ರ್ಯಾಕ್ ಮಾಡ್ತಿದ್ದಾರೆ:
ಮುಂದುವರಿದು… ಬಿಜೆಪಿಯವರು ನನ್ನನ್ನ ಸುಮ್ಮನೆ ಬಿಡಲ್ಲ, ನನ್ನನ್ನ ಟ್ರ್ಯಾಕ್ ಮಾಡ್ತಿದ್ದಾರೆ. ದೆಹಲಿಯಿಂದ ಬೆಂಗಳೂರಿಗೆ ಅಧಿಕಾರಿಗಳನ್ನ ಕಳಿಸಿದ್ದಾರೆ. ನನ್ನ ಸುತ್ತಮುತ್ತಲೇ ಇದ್ದಾರೆ. ದೆಹಲಿಯಿಂದಲೇ ಕುಳಿತು ಆಪರೇಟ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಚುನಾವಣೆ ಹೊತ್ತಿಗೆ ಐದಾರು ಸಚಿವರ ಮೇಲೆ ಐಟಿ-ಇಡಿ ಮೂಲಕ ದಾಳಿಗೆ ಕಾಯ್ತಿದ್ದಾರೆ ಎಂದು ಸಿಎಂ ಡಿಕೆಶಿ ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯ ಜೊತೆ ನಾನು ಬಂಡೆ ತರ ನಿಂತಿದ್ದೇನೆ, ಅವ್ರೂ ನನ್ನ ಪರವಾಗಿ ನಿಲ್ತಾರೆ: ಡಿಕೆ ಶಿವಕುಮಾರ್
ಪ್ರಿಯಾಂಕ್ಗೂ ಕೆಪಿಎಸ್ಸಿಗೂ ಸಂಬಂಧನೇ ಇಲ್ಲ:
ಇದೇ ವೇಳೆ ಕೆಪಿಎಸ್ಸಿ ಹಗರಣದಲ್ಲಿ ಪ್ರಿಯಾಂಕ್ ಖರ್ಗೆ ಅವರ ವಿರುದ್ಧದ ಆರೋಪಗಳಿಗೆ ಪ್ರತಿಕ್ರಿಯಿಸಿದರು. ಕೆಪಿಎಸ್ಸಿ ಪರೀಕ್ಷೆ ವಿಚಾರದಲ್ಲಿ ಪ್ರಿಯಾಂಕ್ ಖರ್ಗೆ ಅವರ ಮೇಲೆ ಯಾವುದೇ ಆರೋಪ ಇಲ್ಲ. ಕೆಪಿಎಸ್ಸಿಗೂ ಪ್ರಿಯಾಂಕ್ ಖರ್ಗೆಗೂ ಸಂಬಂಧನೇ ಇಲ್ಲ. ಪ್ರಿಯಾಂಕ್ ಬುದ್ಧಿವಂತರಾಗಿ ಇಡಿಗೆ ಪ್ರಕರಣ ಬಿಟ್ಟುಕೊಡದೇ ಆ ಅಧಿಕಾರಿಯನ್ನ ಎಳೆದು ತಂದ್ರು ಎಂದು ತಿಳಿಸಿದರು. ಇದನ್ನೂ ಓದಿ: ಬೇಕೋ, ಬೇಡವೋ ರಾಜ್ಯದಲ್ಲಿ ಗ್ಯಾರಂಟಿ ಕೊಟ್ಟಿದ್ದೇವೆ, ಗ್ಯಾರಂಟಿ ಇಲ್ಲದಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ: ಹೆಚ್ಸಿ ಬಾಲಕೃಷ್ಣ
5 ರಿಂದ 6 ಜನರಿಗೆ ದಾಳಿ ಆತಂಕ ಇದೆ:
ಐಟಿ-ಇಡಿ ದಾಳಿ ಬಗ್ಗೆ ಮಾತನಾಡಿರುವ ಡಿಕೆ ಶಿವಕುಮಾರ್, 5 ರಿಂದ 6 ಜನರ ಮೇಲೆ ದಾಳಿ ನಡೆಯುವ ಸಾಧ್ಯತೆಗಳಿವೆ ಎಂದು ತಿಳಿಸಿದರು. ಇದನ್ನೂ ಓದಿ: ಬಿಜೆಪಿಯವ್ರು ನನ್ನನ್ನ ಟ್ರ್ಯಾಕ್ ಮಾಡ್ತಿದ್ದಾರೆ, ದಿಲ್ಲಿಯಿಂದ ಬೆಂಗಳೂರಿಗೆ ಅಧಿಕಾರಿಗಳನ್ನ ಕಳಿಸಿದ್ದಾರೆ: ಡಿಕೆಶಿ ಸ್ಫೋಟಕ ಹೇಳಿಕೆ

