ರಾಮನಗರ: ಬೇಕೋ, ಬೇಡವೋ ರಾಜ್ಯದಲ್ಲಿ ನಾವು ಗ್ಯಾರಂಟಿ ಕೊಟ್ಟಿದ್ದೇವೆ. ಗ್ಯಾರಂಟಿ (Guarantee Scheme) ಇಲ್ಲದಿದ್ದರೆ ಅಷ್ಟು ಸಮಸ್ಯೆ ಆಗುತ್ತಿರಲಿಲ್ಲ ಎಂದು ಸಚಿವ ಹೆಚ್‌ಸಿ ಬಾಲಕೃಷ್ಣ (HC Balakrishna) ಅಪಸ್ವರವೆತ್ತಿದ್ದಾರೆ.
ರಾಮನಗರದ ಡಿಸಿ ಕಚೇರಿ ಬಳಿ ವಿಶೇಷ ಚೇತನರ ಅಹವಾಲು ಸ್ವೀಕರಿಸುವ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ, ರೈತರಿಗೂ ಪರಿಹಾರ ಕೊಡಬೇಕು, ಅವರೂ ಗಲಾಟೆ ಮಾಡುತ್ತಿದ್ದಾರೆ. ಗ್ಯಾರಂಟಿ ನಿಲ್ಲಿಸಿದರೆ ಅವರೂ ಗಲಾಟೆ ಮಾಡುತ್ತಾರೆ. ಈ ಸಮಸ್ಯೆಯಲ್ಲಿ ಸಿಲುಕಿ ನಾವೆಲ್ಲ ಒದ್ದಾಡುತ್ತಿದ್ದೇವೆ. ಗ್ಯಾರಂಟಿ ಇಲ್ಲದಿದ್ದರೆ ಇದೆಲ್ಲ ಅಷ್ಟು ಸಮಸ್ಯೆ ಆಗುತ್ತಿರಲಿಲ್ಲ ಎಂದು ಅಸಹಾಯಕತೆ ತೋಡಿಕೊಂಡರು. ಇದನ್ನೂ ಓದಿ: ಬಿಜೆಪಿಯವ್ರು ನನ್ನನ್ನ ಟ್ರ್ಯಾಕ್ ಮಾಡ್ತಿದ್ದಾರೆ, ದಿಲ್ಲಿಯಿಂದ ಬೆಂಗಳೂರಿಗೆ ಅಧಿಕಾರಿಗಳನ್ನ ಕಳಿಸಿದ್ದಾರೆ: ಡಿಕೆಶಿ ಸ್ಫೋಟಕ ಹೇಳಿಕೆ
ನಾವೂ ಸರ್ಕಾರ ನಡೆಸಬೇಕಲ್ಲ, ವ್ಯವಸ್ಥೆಯಲ್ಲಿ ಹಣಕಾಸು ಸರಿದೂಗಿಸಬೇಕಲ್ಲ. ಬಜೆಟ್ ಒಳಗಡೆ ಎಲ್ಲವನ್ನೂ ಮಾಡಬೇಕು. ವಿಶೇಷ ಚೇತನರ ಬೇಡಿಕೆಗಳನ್ನ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡುತ್ತೇವೆ ಎಂದರು. ಇದನ್ನೂ ಓದಿ: ರೇಷನ್ ಕಾರ್ಡ್ ಅಪ್ಡೇಟ್‌ಗೆ ಹೋದವನಿಗೆ ಆಘಾತ – ಬದುಕಿರುವ ವ್ಯಕ್ತಿಯನ್ನೇ ಸಾಯಿಸಿದ ಅಧಿಕಾರಿಗಳು

