ಮಂಡ್ಯ: ಸಾಮಾನ್ಯವಾಗಿ ಸತ್ತವರ ಹೆಸರನ್ನು ದಾಖಲೆಗಳಿಂದ ತೆಗೆದುಹಾಕುವುದು, ಮರಣ ಪ್ರಮಾಣಪತ್ರ ಪಡೆಯುವುದು ಎಲ್ಲೆಡೆ ಸಾಮಾನ್ಯ. ಆದರೆ, ಇಲ್ಲೊಬ್ಬ ವ್ಯಕ್ತಿ ಕಣ್ಣಿಗೆ ಎದುರಿಗೆ ಜೀವಂತವಾಗಿದ್ದರೂ, ಸರ್ಕಾರಿ ದಾಖಲೆಗಳಲ್ಲಿ ಆತನನ್ನು ಸಾಯಿಸಿಬಿಟ್ಟಿದ್ದಾರೆ. ಮಂಡ್ಯದಲ್ಲಿ ಅಧಿಕಾರಿಗಳ ಈ ಯಡವಟ್ಟಿನಿಂದಾಗಿ ಬದುಕಿರುವ ವ್ಯಕ್ತಿಯೊಬ್ಬರು ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ರೀತಿಯ ಸಮಸ್ಯೆ ಎದುರಿಸುತ್ತಿರುವವರು ಮಂಡ್ಯದ (Mandya) ಗುತ್ತಲು ಬಡಾವಣೆಯ ನಿವಾಸಿ ಶಫಿಉಲ್ಲಾಖಾನ್. ಕಳೆದ ಮೂರು ತಿಂಗಳಿಂದ ಇವರಿಗೆ ಸಿಗಬೇಕಿದ್ದ ಪಡಿತರ ಕಾರ್ಡ್‌ನ ರೇಷನ್ (Ration Card) ಬಂದ್ ಆಗಿದೆ. ರೇಷನ್ ಕಾರ್ಡ್‌ನಲ್ಲಿ ಏನಾಗಿದೆ ಎಂದು ಪರಿಶೀಲನೆ ಮಾಡಲು ಹೋದ ಶಫಿಉಲ್ಲಾಖಾನ್ ಅವರಿಗೆ ದೊಡ್ಡ ಶಾಕ್ ಎದುರಾಗಿತ್ತು. ಅಧಿಕಾರಿಗಳು ಇವರನ್ನು 2024ರಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ನಮೂದಿಸಿ, ಅಧಿಕೃತ ಮರಣ ಪ್ರಮಾಣಪತ್ರವನ್ನೇ ಸೃಷ್ಟಿಸಿಬಿಟ್ಟಿದ್ದಾರೆ. ಬದುಕಿರುವ ಇವರಿಗೆ ಡೆತ್ ಸರ್ಟಿಫಿಕೇಟ್ (Death Certificate) ಸಿಕ್ಕಿದ್ದನ್ನು ಕಂಡು ಇಡೀ ಕುಟುಂಬವೇ ಬೆಚ್ಚಿಬಿದ್ದಿದೆ. ಇದನ್ನೂ ಓದಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತದ ಖಾಯಂ ಸದಸ್ಯತ್ವಕ್ಕೆ ರಷ್ಯಾ ಬೆಂಬಲ
ಘಟನೆಯಿಂದ ಕಂಗಾಲಾದ ಶಫಿಉಲ್ಲಾಖಾನ್, ಕೂಡಲೇ ನಗರಸಭೆಗೆ ತೆರಳಿ ವಿಚಾರಣೆ ನಡೆಸಿದ್ದಾರೆ. ಅಲ್ಲಿ ಅವರಿಗೆ ಆಘಾತಕಾರಿ ಸಂಗತಿ ಎದುರಾಗಿದೆ. ನಗರಸಭೆ ಅಧಿಕಾರಿಗಳು ನೀವು 2024ರಲ್ಲಿಯೇ ಸಾವನ್ನಪ್ಪಿದ್ದೀರಿ ಎಂದು ಅದೇ ಡೆತ್ ಸರ್ಟಿಫಿಕೇಟ್ ಅನ್ನು ಕೈಗೆ ಇಟ್ಟಿದ್ದಾರೆ. ಇದನ್ನೂ ಓದಿ: ಬಿಡದಿ ಟೌನ್‌ಶಿಪ್ ಜಟಾಪಟಿ – ಭೈರಮಂಗಲದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದ್ದ ರೈತರ ಮೇಲೆ FIR
ಬಳಿಕ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ತೆರಳಿ ವಿಚಾರಿಸಿದರೆ, ಅಲ್ಲಿನ ಅಧಿಕಾರಿಗಳ ವಾದ ಮತ್ತಷ್ಟು ವಿಚಿತ್ರವಾಗಿದೆ. ಶಫಿಉಲ್ಲಾಖಾನ್ ಎಂಬ ವ್ಯಕ್ತಿಗೆ ನಮ್ಮ ಆಸ್ಪತ್ರೆಯಲ್ಲಿ ಮೂರು ತಿಂಗಳು ಚಿಕಿತ್ಸೆ ನೀಡಲಾಗಿದೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ ಬಳಿಕ ಮರಣೋತ್ತರ ಪರೀಕ್ಷೆಯನ್ನು ಸಹ ಮಾಡಿದ್ದೇವೆ ಎಂದು ಮಿಮ್ಸ್ ಅಧಿಕಾರಿಗಳು ವಾದಿಸುತ್ತಿದ್ದಾರೆ. ಇಲ್ಲಿ ಬದುಕಿರುವ ಶಫಿಉಲ್ಲಾಖಾನ್ ಕಣ್ಣೆದುರಿಗೆ ನಿಂತಿದ್ದರೂ, ಕಾಗದದ ಮೇಲೆ ಮಾತ್ರ ಅವರು ಶವವಾಗಿದ್ದಾರೆ. ಇದನ್ನೂ ಓದಿ: ದಸರಾ ಉದ್ಘಾಟನೆಗೆ ಗವಿಸಿದ್ದೇಶ್ವರ ಶ್ರೀ ನಕಾರ ವದಂತಿ – ಗವಿಮಠ, ಸಚಿವ ತಂಗಡಗಿ ಸ್ಪಷ್ಟನೆ
ನಾನು ಕಣ್ಣೆದುರಿಗೆ ಜೀವಂತವಾಗಿದ್ದರೂ, ನನ್ನನ್ನು ಸತ್ತವನು ಅಂತ ಮಾಡಿಬಿಟ್ಟಿದ್ದಾರೆ. ಈಗ ರೇಷನ್ ಕಾರ್ಡ್ ಇಲ್ಲ, ಬ್ಯಾಂಕ್ ವಹಿವಾಟು ಕೂಡ ಸ್ಥಗಿತಗೊಂಡಿದೆ. ಎಲ್ಲೋದರೂ ನನ್ನನ್ನು ಸತ್ತವನು ಅಂತಲೇ ತೋರಿಸುತ್ತಿದ್ದಾರೆ. ಅಧಿಕಾರಿಗಳ ಬಳಿ ನ್ಯಾಯ ಕೇಳಿದ್ರೆ ಯಾರೂ ಸರಿಯಾಗಿ ಸ್ಪಂದಿಸುತ್ತಿಲ್ಲ. ದಯವಿಟ್ಟು ನನಗೆ ನ್ಯಾಯ ಕೊಡಿಸಿ ಎಂದು ಶಫಿಉಲ್ಲಾಖಾನ್ ಕೇಳಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಮಂತ್ರಾಲಯಕ್ಕೆ ತೆರಳುತ್ತಿದ್ದ ಟಿಟಿ ವಾಹನ ಪಲ್ಟಿ – 10ಕ್ಕೂ ಹೆಚ್ಚು ಜನರಿಗೆ ಗಾಯ
ಅಧಿಕಾರಿಗಳ ಯಡವಟ್ಟಿಗೆ ಜೀವಂತ ಮನುಷ್ಯ ಸತ್ತಂತೆ ಅಲೆಯುವಂತಾಗಿದೆ. ರೇಷನ್ ಇಲ್ಲ, ಬ್ಯಾಂಕ್ ಅಕೌಂಟ್ ಕೆಲಸ ಮಾಡುತ್ತಿಲ್ಲ, ಸರ್ಕಾರದ ಸೌಲಭ್ಯಗಳೂ ಬಂದ್ ಆಗಿವೆ. ಕಚೇರಿಗಳಿಂದ ಕಚೇರಿಗೆ ಅಲೆದಾಡಿ ಸುಸ್ತಾಗಿರುವ ಶಫಿಉಲ್ಲಾಖಾನ್ ಈಗ ತಮಗೆ ನ್ಯಾಯ ಸಿಗುವಂತೆ ಕಣ್ಣೀರಿಡುತ್ತಿದ್ದಾರೆ. ಇದನ್ನೂ ಓದಿ: ಗ್ರಾಹಕರೇ ಗಮನಿಸಿ – ಇಂದು ಬ್ಯಾಂಕ್ ಓಪನ್, ನಾಳೆಯಿಂದ 3 ದಿನ ಮುಷ್ಕರ

