– ಶಕ್ತಿ ಯೋಜನೆ ಮೆಗಾ ಆಪರೇಷನ್ ಬಗ್ಗೆ ಸಿಎಂ ಸ್ಫೋಟಕ ಹೇಳಿಕೆ
– ಹೊರ ರಾಜ್ಯದವರಿಗೆ ಏಕೆ ಗ್ಯಾರಂಟಿ ಲಾಭ ಕೊಡಬೇಕು?
ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಕೆಲವೊಂದು ಬದಲಾವಣೆ ಮಾಡುವ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಮಹತ್ವದ ಸುಳಿವು ನೀಡಿದ್ದಾರೆ.
‘ಪಬ್ಲಿಕ್ ಟಿವಿ ಎಕ್ಸ್ಕ್ಲೂಸಿವ್ ಸಂದರ್ಶನ’ದಲ್ಲಿ ಮಾತನಾಡಿದ ಅವರು, ಗೃಹಜ್ಯೋತಿ, ಗೃಹಲಕ್ಷ್ಮಿ ಹಾಗೂ ಶಕ್ತಿ ಯೋಜನೆಗಳನ್ನ ಪರಿಷ್ಕರಣೆ ಮಾಡುವ ಕುರಿತು ಮಾತನಾಡಿದ್ದಾರೆ. ಗ್ಯಾರಂಟಿ ಯೋಜನೆಗಳು (Guarantee Scheme) ಒಂದಷ್ಟು ತೊಂದರೆ ಕೊಟ್ಟಿದೆ, ಇಲ್ಲ ಅಂತ ಹೇಳಲ್ಲ ಎಂದು ಒಪ್ಪಿಕೊಂಡಿದ್ದಾರೆ.
ಹೊರ ರಾಜ್ಯದವರಿಗೆ ಗ್ಯಾರಂಟಿ ಲಾಭ ಏಕೆ?
ಮುಂದುವರಿದು ಮಾತನಾಡಿದ ಅವರು, ಉಚಿತ ಬಸ್ ಪ್ರಯಾಣಕ್ಕೆ ಸ್ವೈಪ್ ಕಾರ್ಡ್ ವಿತರಣೆ ಮಾಡುವ ಮಾದರಿಯನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. ಏಕೆಂದ್ರೆ ಕರ್ನಾಟಕಕ್ಕೆ ಆಂಧ್ರಪ್ರದೇಶ, ಕೇರಳ ಹಾಗೂ ಮಹಾರಾಷ್ಟ್ರದಿಂದ ಜನರು ಬರುತ್ತಿದ್ದಾರೆ. ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ಬಳಸಿಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರದಿಂದ ಬರುವ ಕೆಲವರು ಬೆಳಗಾವಿಗೆ ಬರ್ತಾರೆ, ಬೆಳಗಾವಿಯಿಂದ ಫ್ರೀ ಬಸ್ನಲ್ಲಿ ಬರ್ತಾರೆ. ಆದ್ದರಿಂದ ಇನ್ಮುಂದೆ ರಾಜ್ಯದ ಮತದಾರರು ಹಾಗೂ ಸ್ಥಳೀಯರಿಗೆ ಪ್ರತ್ಯೇಕ ಸ್ವೈಪ್ ಕಾರ್ಡ್ ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದ ಅರ್ಹ ಫಲಾನುಭವಿಗಳಿಗೆ ಕಾರ್ಡ್ ನೀಡುವ ವ್ಯವಸ್ಥೆ ಜಾರಿಗೆ ತಂದರೆ ಸುಮಾರು 100 ಕೋಟಿ ವೆಚ್ಚವಾಗಬಹುದು. ಆದ್ರೆ ಆಗಲಿ, ಆದ್ರೆ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಯಿಂದ 3,000 ಕೋಟಿ ಅಥವಾ 5,000 ಕೋಟಿ ಉಳಿತಾಯವಾದರೂ ನನಗೆ ತೃಪ್ತಿ ಇದೆ. ಎಷ್ಟು ಉಳಿಯುತ್ತೋ ಉಳಿಯಲಿ ಎಂದ ಸಿಎ, ಇದೆಲ್ಲ ಮಾಡೋದಕ್ಕೆ ಹೈಕಮಾಂಡ್ ಖಂಡಿತಾ ನನ್ನ ಜೊತೆಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

