Wednesday, 22nd January 2020

Recent News

ಇಂದು ರಾಜ್ಯಪಾಲರ ಮುಂದೆ ಬಿಎಸ್‍ವೈ ಹಕ್ಕು ಮಂಡನೆ

ಬೆಂಗಳೂರು: ಒಂಬತ್ತು ದಿನಗಳ ವಿಶ್ವಾಸಮತ ಮಹಾನಾಟಕ ಮುಗಿದಿದ್ದು, 2018ರ ವಿಧಾನಸಭಾ ಚುನಾವಣೆ ಬಳಿಕ ಕೆಲ ದಿನವಷ್ಟೇ ಸಿಎಂ ಆಗಿ ಉಳಿದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಪಟ್ಟ ಏರಲು ಸಿದ್ಧರಾಗಿದ್ದಾರೆ.

ಸತತ ಏಳನೇ ಬಾರಿ ನಡೆಸಿದ ಆಪರೇಷನ್ ಕಮಲದಲ್ಲಿ ಯಶಸ್ವಿ ಆಗಿರುವ ಬಿಎಸ್‍ವೈ ಇಂದು ರಾಜ್ಯಪಾಲರನ್ನ ಭೇಟಿ ಆಗಿ ಸರ್ಕಾರ ರಚನೆಗೆ ಆಹ್ವಾನಿಸುವಂತೆ ಹಕ್ಕು ಮಂಡಿಸಲಿದ್ದಾರೆ. ನಾಳೆ ಅಥವಾ ನಾಡಿದ್ದೇ ಕರ್ನಾಟಕದ 19ನೇ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಗುರುವಾರ ಬೆಳಗ್ಗೆ 9.40 ರಿಂದ 10.30 ಅಥವಾ ಸಂಜೆ 4.30ರ ನಂತರ ಹಾಗೂ ಶುಕ್ರವಾರ ಮಧ್ಯಾಹ್ನ 2 ರಿಂದ 3 ಗಂಟೆ ಅಥವಾ ಸಂಜೆ 4.30 ಗಂಟೆಯವರೆಗೆ ಶುಭ ಮುಹೂರ್ತ ಇದೆ ಅಂತ ಜ್ಯೋತಿಷಿಗಳು ಹೇಳಿದ್ದಾರಂತೆ. ಹೀಗಾಗಿ ಈ ನಾಲ್ಕರಲ್ಲಿ ಯಾವ ಗಳಿಗೆಯಲ್ಲಿ ಯಡಿಯೂರಪ್ಪ ಮತ್ತೆ ಗದ್ದುಗೆ ಏರ್ತಾರೆ ಅನ್ನೋದು ಕುತೂಹಲಕಾರಿಗಿಯೇ ಉಳಿದಿದೆ.

ಮೊದಲಿಗೆ ಸಿಎಂ ಆಗಿ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಲಿದ್ದು, ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿದ ಬಳಿಕವಷ್ಟೇ ಶಾಸಕರು ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯೂ ನಡೆಯಲಿದೆ.

Leave a Reply

Your email address will not be published. Required fields are marked *