ಹೈದರಾಬಾದ್: ವಿಶ್ವದ ಶ್ರೀಮಂತ ಹಿಂದೂ (Hindu) ದೇವಸ್ಥಾನ ಎಂದೇ ಖ್ಯಾತಿ ಪಡೆದಿರುವ ತಿರುಪತಿ ದೇವಾಲಯ (Tirupati Temple) ಹುಂಡಿಯಿಂದಲೇ 1,450.50 ಕೋಟಿ ರೂ.ಆದಾಯ ಸಂಗ್ರಹಿಸಿದೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಕಾರ್ಯನಿರ್ವಾಹಕ ಅಧಿಕಾರಿ ಧರ್ಮಾ ರೆಡ್ಡಿ, 2022ರಲ್ಲಿ ದೇವಸ್ಥಾನಕ್ಕೆ 2.37 ಕೋಟಿ ಭಕ್ತರು ಭೇಟಿ ನೀಡಿದ್ದು, ಹುಂಡಿ ಸಂಗ್ರಹವು 1,450.50 ಕೋಟಿ ರೂ. ಆಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಒಂದೇ ಕಡೆ ನಿಂತ್ರೆ ಬಲವಿಲ್ಲ; ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕು – ಸಿದ್ದುಗೆ ರಾಜಕೀಯ ಭವಿಷ್ಯ ನುಡಿದ ಮನೆ ದೇವರು
Advertisement
Advertisement
2021 ರಲ್ಲಿ 1.04 ಕೋಟಿ ಭಕ್ತರು ಭೇಟಿ ನೀಡಿ 833.41 ಕೋಟಿ ರೂ. ಹುಂಡಿ ಸಂಗ್ರಹವಾಗಿತ್ತು. 2021 ಮತ್ತು 2022ರ ಆರಂಭದಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಇಳಿಕೆಯಾಗಿತ್ತು.
Advertisement
ಡಿಸೆಂಬರ್ ತಿಂಗಳೊಂದರಲ್ಲೇ 129.ಕೋಟಿ ರೂ. ಹುಂಡಿ ಸಂಗ್ರಹವಾಗಿತ್ತು. ಕಳೆದ ವರ್ಷ 11.54 ಲಕ್ಷ ಲಡ್ಡು ಪ್ರಸಾದ ಮಾರಾಟ ಮಾಡಿದ್ದರೆ 2021ರಲ್ಲಿ 5.96 ಲಕ್ಷ ಇತ್ತು.
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k