ನವದೆಹಲಿ: ಟಿ20 ಕ್ರಿಕೆಟ್‍ಗೆ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ನಿವೃತ್ತಿ ಹೇಳುವುದು ಒಳ್ಳೆಯದ್ದು ಎಂದು ಭಾರತ ತಂಡ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.
ಶನಿವಾರ ರಾಜ್‍ಕೋಟ್ ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋತ ಬಳಿಕ ಪ್ರತಿಕ್ರಿಯಿಸಿದ ಅವರು, ಧೋನಿ ಟಿ20ಯಲ್ಲಿ ಯುವ ಕ್ರಿಕೆಟಿಗರಿಗ ಅವಕಾಶ ನೀಡಬೇಕು. ಟಿ20ಯ ಬದಲು ಏಕದಿನ ಕ್ರಿಕೆಟ್ ನಲ್ಲಿ ಧೋನಿ ಚೆನ್ನಾಗಿ ಆಡುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
Advertisement
ಧೋನಿ ನಾಲ್ಕನೇಯವರಾಗಿ ಕ್ರೀಸ್ ಗೆ ಆಗಮಿಸುತ್ತಾರೆ. ಜೊತೆಗೆ ಮೈದಾನ ಹೊಂದಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಶನಿವಾರದ ಆಟ ನೋಡಿದರೆ ವಿರಾಟ್ ಕೊಹ್ಲಿಯ ಸ್ಟ್ರೈಕ್ ರೇಟ್ 160 ಇದ್ದರೆ, ಧೋನಿಯ ಸ್ಟ್ರೈಕ್ ರೇಟ್ 80 ಇತ್ತು ಎಂದು ಹೇಳುವ ಮೂಲಕ ತಮ್ಮ ವಾದಕ್ಕೆ ಸಮರ್ಥನೆ ನೀಡಿದ್ದಾರೆ.
Advertisement
197 ರನ್ ಗಳ ಗುರಿಯನ್ನು ಬೆನ್ನೆಟ್ಟಿಟ್ಟುತ್ತಿದ್ದ ವೇಳೆ 9.1 ಓವರ್ ನಲ್ಲಿ 4 ವಿಕೆಟ್ ಕಳೆದುಕೊಂಡು 67 ರನ್ ಗಳಿಸಿದ್ದಾಗ ನಾಲ್ಕನೇಯವರಾಗಿ ಧೋನಿ ಕ್ರೀಸ್ ಗೆ ಆಗಮಿಸಿದರು. ಕೊಹ್ಲಿ ಬೌಂಡರಿ ಹೊಡೆದು ರನ್ ಹೆಚ್ಚಿಸುವತ್ತ ಗಮನ ಹರಿಸಿದರೆ ಧೋನಿ ಆರಂಭದಲ್ಲಿ ದೊಡ್ಡ ಹೊಡೆತ ಹೊಡೆಯಲು ಪ್ರಯತ್ನಿಸಲಿಲ್ಲ.
Advertisement
15 ಓವರ್ ಪೂರ್ಣಗೊಂಡಾಗ ಧೋನಿ 18 ಎಸೆತ ಎದುರಿಸಿ 16 ರನ್ ಹೊಡೆದಿದ್ದರು. ಧೋನಿ ಅಂತಿಮವಾಗಿ 49 ರನ್(37 ಎಸೆತ, 2 ಬೌಂಡರಿ, 3 ಸಿಕ್ಸರ್) ಸಿಡಿಸಿ 19.3 ಓವರ್ ನಲ್ಲಿ 7ನೇಯವರಾಗಿ ಔಟಾದರು.
Advertisement
ಧೋನಿ ಟಿ20 ಕ್ರಿಕೆಟ್‍ಗೆ ನಿವೃತ್ತಿ ಹೇಳಬೇಕೇ? ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸ್ ನಲ್ಲಿ ದಾಖಲಿಸಿ.
ಇದನ್ನೂ ಓದಿ: ವಿರಾಟ್, ಧೋನಿ ನಡುವೆ ಹೊಂದಾಣಿಕೆ ಎಷ್ಟಿದೆ? ಕೊಹ್ಲಿಯ ಮಾತು ಕೇಳಿದ್ರೆ ನಿಮ್ಗೆ ಇಷ್ಟವಾಗುತ್ತೆ