ಡೆಹ್ರಾಡೂನ್: ಉತ್ತರಾಖಂಡದ ಋಷಿಕೇಶ (Rishikesh) ಖಾಂಡ್ ಗಾಂವ್ (Khand Gaon) ಪ್ರದೇಶದ ಯೋಗ ನಗರಿ ರೈಲು ನಿಲ್ದಾಣದ ಬಳಿ ಸೋಮವಾರ ರಾತ್ರಿ ಉಜ್ಜಿಯಿನಿ ಎಕ್ಸ್‌ಪ್ರೆಸ್ ರೈಲಿನ ಮೂರು ಬೋಗಿಗಳು ಹಳಿತಪ್ಪಿದ್ದು (Ujjaini Express Derailed), ಭಾರೀ ದುರಂತವೊಂದು ತಪ್ಪಿದೆ.
ಸೋಮವಾರ ರಾತ್ರಿ 9:30ರ ವೇಳೆಗೆ ಘಟನೆ ನಡೆದಿದೆ. ಅಪಘಾತ ಸಂಭವಿಸಿದ ವೇಳೆ ರೈಲಿನಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ ಮತ್ತು ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಿನನಿತ್ಯದ ನಿರ್ವಹಣಾ ಕಾರ್ಯಾಚರಣೆಯ ಸಮಯದಲ್ಲಿ ಬ್ರೇಕ್ ವೈಫಲ್ಯದಿಂದಾಗಿ ಹಳಿತಪ್ಪಿದೆ ಎಂದು ಶಂಕಿಸಲಾಗಿದೆ. ಇದನ್ನೂ ಓದಿ: ಹ್ಯಾಂಡ್ಸ್ ಫ್ರೀ ರೈಡಿಂಗ್ ನಿಯಂತ್ರಣಕ್ಕೆ ಸರ್ಕಾರ ಹೊಸ ಪ್ಲ್ಯಾನ್ – ದ್ವಿಚಕ್ರ ವಾಹನಗಳಿಗೆ ಬರುತ್ತೆ 3 ಲೇಯರ್ ಸೇಫ್ಟಿ ಸಿಸ್ಟಮ್
ರೈಲು ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಘಟನೆಗೆ ನಿಖರ ಕಾರಣ ಏನು ಎಂದು ತನಿಖೆ ನಡೆಸಲಾಗುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: 3 ವರ್ಷ, ನೂರು ಹರ್ಷ – ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ 3 ವರ್ಷಗಳ ಸಂಭ್ರಮ, ತುಮಕೂರಲ್ಲಿ ಸಾಧನಾ ಸಮಾವೇಶ

