ಕಲಬುರಗಿ: ನಾನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಎಂದು ಎಂಎಲ್‌ಸಿ ಉಮಾಶ್ರೀ (Umashree) ತಿಳಿಸಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಸಚಿವ ಸ್ಥಾನ ಕೇಳೋದು ನಮ್ಮ ಧರ್ಮ. ಅದನ್ನ ತೀರ್ಮಾನ ಮಾಡೋದು ಹೈಕಮಾಂಡ್ ಎಂದು ಹೇಳಿದ್ದಾರೆ.
ನಮ್ಮಲ್ಲಿ ಹೈಕಮಾಂಡ್ ತೀರ್ಮಾನವೇ ಸುಪಿರಿಯರ್. ಇನ್ನೊಂದು ದಿನ ಕಾದು ನೋಡಿ ಯಾರು ಸಚಿವರಾಗ್ತಾರೆ ಎನ್ನೋದು ಗೊತ್ತಾಗುತ್ತದೆ ಎಂದು ಮಾತನಾಡಿದ್ದಾರೆ.
ಕಾವೇರಿ ವಿಷಯದಲ್ಲಿ ಸರ್ವಪಕ್ಷದ ಸಭೆ ಕರೆಯೋದು ಸರ್ಕಾರದ ಕೆಲಸ. ಅದನ್ನ ನಮ್ಮ ಮುಖ್ಯಮಂತ್ರಿಗಳು ಮಾಡಿದ್ದಾರೆ. ತಮಿಳುನಾಡಿಗೆ ಇಲ್ಲಿಯವರೆಗೂ ನೀರು ಬಿಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
