ಮೋದಿ ಭಾಷಣ ಮುಕ್ತಾಯ
ಮೈಸೂರು ಸ್ವಚ್ಛ ನಗರ ಎಂಬ ಹೆಸರು ಮಾಡಿದೆ. ಇದನ್ನು ಮೈಸೂರಿನ ನಾಗರಿಕರು ಮುಂದುವರಿಸಬೇಕು.
ಕರ್ನಾಟಕ ಮಹಾ ಲೇಖಕರು, ಕವಿಗಳ ಭೂಮಿ. ಸಂಸ್ಕೃತಿಗೆ ಕರ್ನಾಟಕದ ಕೊಡಗೆ ಬಹಳ ದೊಡ್ಡದು.
ಕನ್ನಡ ಸಾಹಿತ್ಯ ಬಹಳ ಶ್ರೀಮತವಾದದ್ದು.
ಮೈಸೂರು ರೇಷ್ಮೆ, ಶ್ರೀಗಂಧ, ಸಂಸ್ಕೃತಿಗೆ ಪ್ರಸಿದ್ಧಿ ಎಂದು ಮೋದಿ ಬಣ್ಣಿಸಿದರು.
ಮೈಸೂರು ಸ್ವಚ್ಛತೆಯಲ್ಲಿ ನಂ.1
ಮೈಸೂರು ಸ್ವಚ್ಛತೆಯಲ್ಲಿ ನಂ.1 ಆಗಿದೆ. ಸ್ವಚ್ಛತಾ ಅಭಿಯಾನವನ್ನು ಹೀಗೆಯೇ ಮುಂದುವರಿಸಿ ಎಂದು ಪ್ರಧಾನಿ ಮೋದಿ ತಿಳಿಸಿದರು.
ವಿವೇಕ ಸ್ಮಾರಕ ಸಾಧಕರಿಗೆ ಒಂದು ಧಾನ್ಯ ಕೇಂದ್ರ.
ಯುವಕರಿಗೆ ರಾಷ್ಟ್ರವೇ ಪ್ರಥಮ. ದೇಶ ಕಟ್ಟುವ ಕೆಲಸ ಚಿಂತನೆ.
ಭಾರತದ ಯುವ ಸಮೂಹದ ಸಾಧನೆಯನ್ನು ಹಾಡಿ ಹೊಗಳಿದ ಪ್ರಧಾನಿ.
ಭಾರತೀಯ ಯುವಕರು ಹಿಂದೆ ಗುಲಾಮಿ ಮನಃಸ್ಥಿತಿಯಲ್ಲಿದ್ದರು. ಈಗ ಯುವಕರು ಮನಸ್ಥಿತಿಯಿಂದ ಹೊರ ಬಂದಿದ್ದಾರೆ.
ಯುವಕರ ಮನಃಸ್ಥಿತಿ ಬದಲಾದ ಕಾರಣ ಇಡೀ ದೇಶದ ಪ್ರಗತಿಯ ಬದಲಾಗಿದೆ.
ಭಾರತ ಇವತ್ತು ಎಲ್ಲಾ ಕ್ಷೇತ್ರದಲ್ಲಿ ಪ್ರಪಂಚದ ಮುಂದೆ ಬೆಳಗಲು ಕಾರಣ ಯುವಜನರು.
ಎಲ್ಲಾ ವಲಯದಲ್ಲೂ ಯುವ ಸಮೂಹದ ಪ್ರಗತಿಯ ಹೆಜ್ಜೆ ಗುರುತು ಮೂಡಿಸಿದ್ದಾರೆ.
ಯುವ ಸಮೂಹದ ಶಕ್ತಿಯೆ ದೇಶದ ಶಕ್ತಿ ಆಗುತ್ತದೆ.
ಸ್ವಾಮಿ ವಿವೇಕಾನಂದರನ್ನು ಮೈಸೂರು ಮಹಾರಾಜರು ಮೈಸೂರಿಗೆ ಕರೆಸಿದ್ದರು.
ಸ್ವಾಮಿ ವಿವೇಕಾನಂದರು ಭಾರತೀಯ ಯುವಜನರ ಚೇತನ ಎಂದು ಮೋದಿ ತಿಳಿಸಿದರು
ಮೈಸೂರು ಪವಿತ್ರ ಭೂಮಿ
ಇಲ್ಲಿನ ಎಲ್ಲಾ ಸಂತರಿಗೂ ನನ್ನ ಪ್ರಣಾಮ
ಮೈಸೂರು ಸಾಂಸ್ಕೃತಿಕ, ಐತಿಹಾಸಿಕ ಕೇಂದ್ರ
ದಸರಾ, ಸಂಗೀತ, ಕಲೆ ಬಹಳ ಪ್ರಸಿದ್ಧಿ
ಮೈಸೂರಿನ ಕಣ ಕಣದಲ್ಲೂ ಕಲೆ, ಸಂಸ್ಕೃತಿ ಇದೆ ಎಂದು ಮೋದಿ ಬಣ್ಣನೆ
ಮೈಸೂರು ದಸರಾ ಬಗ್ಗೆ ಮೋದಿ ಗುಣಗಾನ
ಮೈಸೂರಿನ ಅರಮನೆ ಸುಂದರವಾಗಿದೆ. ಮೈಸೂರು ಭಾರತದ ಪುರಾತನ ಸಾಂಸ್ಕೃತಿಕ ಕೇಂದ್ರ ಎಂದ ಮೋದಿ
ಮೋದಿ ಭಾಷಣ
ಚಾಮುಂಡೇಶ್ವರಿ ತಾಯಿಗೆ ನನ್ನ ನಮನ
ನನ್ನ ಬೆಳವಣಿಗೆಯಲ್ಲಿ ರಾಮಕೃಷ್ಣ ಆಶ್ರಮದ ಪ್ರಭಾವ ಬಹಳ ಹೆಚ್ಚಿದೆ.
ಮೋದಿ ಭಾಷಣ ಆರಂಭ
ಕನ್ನಡದಲ್ಲಿ ಭಾಷಣ ಆರಂಭ
ಎಲ್ಲರಿಗೂ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲಿ ಹೇಳಿದ ಮೋದಿ

ಕರ್ನಾಟಕ ರಕ್ಷಿಸಿ: ಪ್ರಧಾನಿಗಳಿಗೆ ಸಿಎಂ ಮನವಿ
ಕರ್ನಾಟಕಕ್ಕೆ ಸಹಾಯ ಮಾಡಿ. ಕರ್ನಾಟಕವನ್ನು ರಕ್ಷಿಸಿ. ಇಡೀ ದೇಶ ಕರ್ನಾಟಕ ನೋಡುತ್ತಿದೆ. ಕರ್ನಾಟಕ ಇಡೀ ದೇಶದ ಪ್ರಮುಖ ರಾಜ್ಯ.
ಕರ್ನಾಟಕದ ವಾತಾವರಣ, ಸಂಸ್ಕೃತಿ ನೋಡಿ. ಇದು ಸಂಕಲ್ಪ ಭೂಮಿ. ನಾವು ನೀವೂ ಜೊತೆಯಾಗಿ ಸೇರಿ ಈ ಕರ್ನಾಟಕ ಬೆಳೆಸೋಣ.
ಭಾರತ ಕರ್ನಾಟಕದ ಜೊತೆ ಅಭಿವೃದ್ಧಿಯಾಗಲಿ. ನಾವೆಲ್ಲಾ ಒಟ್ಟಾಗಿ ಸೇರಿ ಕೆಲಸ ಮಾಡೋಣಾ. ನಮಗೆ ನಿಮ್ಮ ಸಹಕಾರ ಬೇಕು ಎಂದು ಪ್ರಧಾನಿ ಮೋದಿಗೆ ಸಿಎಂ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.
ವಿವೇಕ ಸ್ಮಾರಕ ಇಡೀ ದೇಶದ ಆಸ್ತಿ.
ಇಡೀ ಸರ್ಕಾರ ರಾಮಕೃಷ್ಣ ಆಶ್ರಮದ ಪರ ನಿಲುತ್ತದೆ.
ಇದು ಭಾಗ್ಯ ಇದು ಭಾಗ್ಯ. ನನ್ನ ಭಾಗ್ಯ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು.
ವಿವೇಕಾನಂದ ತ್ಯಾಗ ನಮಗೆ ಸ್ಫೂರ್ತಿ.
ಇದು ಮೈಸೂರಿನ ಐತಿಹಾಸಿಕ ಸಮಾರಂಭವಲ್ಲ. ದೇಶದ ಐತಿಹಾಸಿಕ ಸಮಾರಂಭ ಎಂದು ಡಿಕೆಶಿ ತಿಳಿಸಿದರು.
ಸಿಎಂ ಡಿ.ಕೆ.ಶಿವಕುಮಾರ್ ಭಾಷಣ
ವಿವೇಕಾನಂದರ ಚಿಂತನೆಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ.
ವಿವೇಕಾನಂದರ ಆಲೋಚನೆಯಂತೆ ಯುವ ಯುವ ನವ ಯುಗದಂತೆ ಸರ್ಕಾರ ನಡೆಸುತ್ತೇನೆ.
ಯುವಶಕ್ತಿ ಬಳಸಲು ಕಾರ್ಯಕ್ರಮ ರೂಪಿಸಿದ್ದೇನೆ.
ಮೈಸೂರು ಇತಿಹಾಸ ವಿಶ್ವದ ವಿಶ್ವಾಸ.
ವಿವೇಕಾನಂದರು ಮೈಸೂರಿನಿಂದ ನೇರವಾಗಿ ಚಿಕಾಗೋಗೆ ಹೋಗಿ ಐತಿಹಾಸಿಕ ಭಾಷಣ ಮಾಡಿದರು.

ವಿವೇಕಾನಂದರ ಬೋಧನೆ ಓದಿದ ಮೋದಿ
ರಾಮಕೃಷ್ಣ ಆಶ್ರಮದ ಡಾಕ್ಯುಮೆಂಟರಿ ಪ್ಲೇ
ಮೈಸೂರು ರಾಮಕೃಷ್ಣ ಆಶ್ರಮದ ಮುಕ್ತಿದಾನಜೀ ಸ್ವಾಗತ ಭಾಷಣ
ಮೋದಿಗೆ ಸ್ವಾಮಿ ವಿವೇಕಾನಂದರ ಪ್ರತಿಮೆ ಹಸ್ತಾಂತರ
ವೇದಿಕೆ ಕಾರ್ಯಕ್ರಮ ಆರಂಭವಾಗಿದ್ದು, ಪ್ರಧಾನಿ ಮೋದಿಗೆ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿರುವ ವಿವೇಕಾನಂದರ ಪ್ರತಿಮೆಯನ್ನು ಹಸ್ತಾಂತರಿಸಲಾಯಿತು.

ರಾಮಕೃಷ್ಣ ಪರಮಹಂಸರ ಫೋಟೊಗೆ ಮೋದಿ ನಮನ

ವಿವೇಕಾನಂದರ ಫೋಟೊಗೆ ಪುಷ್ಪಾರ್ಚನೆ ಮಾಡಿದ ಪ್ರಧಾನಿ
ವಿವೇಕ ಸ್ಮಾರಕ ಆವರಣದಲ್ಲಿ ಬಿಲ್ವಪತ್ರೆ ಸಸಿ ನೆಟ್ಟ ಪಿಎಂ

ಆಶ್ರಮದಲ್ಲೇ ಪ್ರಧಾನಿ ಕೆಲಹೊತ್ತು ಧ್ಯಾನ
ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ಪ್ರಧಾನಿ ಮೋದಿ ಅವರು ವಿವೇಕ ಸ್ಮಾರಕವನ್ನು ಉದ್ಘಾಟಿಸಿದರು. ಬಳಿಕ ಆಶ್ರಮದಲ್ಲೇ ಕೆಲಹೊತ್ತು ಧ್ಯಾನ ಮಾಡಿದರು.

ರಾಮಕೃಷ್ಣ ಆಶ್ರಮದಲ್ಲಿ ʼನಮೋʼ

ಮೋದಿಗೆ ಸಿಎಂ, ವಿಜಯೇಂದ್ರ ಸ್ವಾಗತ


ಮೋದಿ ಸ್ವಾಗತಕ್ಕೆ ರಸ್ತೆ ಬದಿ ನಿಂತ ಅಭಿಮಾನಿಗಳು.
ವಿವೇಕ ಸ್ಮಾರಕದತ್ತ ಮೋದಿ
ಓವಲ್ ಮೈದಾನಕ್ಕೆ ‘ನಮೋ’ ಆಗಮನ
ವಿಶೇಷ ಹೆಲಿಕಾಪ್ಟರ್ ಮೂಲಕ ಆಗಮನ.
ಓವಲ್ ಮೈದಾನಕ್ಕೆ ಬಂದಿಳಿದ ನಮೋ.
ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಸಿಎಂ ಡಿ.ಕೆ.ಶಿವಕುಮಾರ್, ಸಚಿವ ಯತೀಂದ್ರ ಸಿದ್ದರಾಮಯ್ಯ.
ಮೋದಿಗೆ ಡಿಕೆಶಿ ಸ್ವಾಗತ
ಕೆಲವೇ ಕ್ಷಣಗಳಲ್ಲಿ ಓವೆಲ್ ಮೈದಾನಕ್ಕೆ ಮೋದಿ ಆಗಮನ..
ಮಂಡಕಹಳ್ಳಿಯಿಂದ ವಿಶೇಷ ಸೇನಾ ಹೆಲಿಕ್ಯಾಪ್ಟರ್ ಮೂಲಕ ಆಗಮನ.
ಈಗಾಗಲೇ ಓವೆಲ್ ಮೈದಾನಕ್ಕೆ ಮೋದಿ ಸ್ವಾಗತಕ್ಕೆ ಆಗಮಿಸಿರುವ ರಾಜ್ಯಪಾಲರು ಹಾಗೂ ಸಿಎಂ ಡಿಕೆಶಿ
ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿನ ಏರ್‌ಪೋರ್ಟ್‌ಗೆ ಬಂದಿಳಿದಿದ್ದಾರೆ.

