– ದಲಿತರನ್ನ ಮುಟ್ಟಿಸಿಕೊಳ್ಳುವುದೇ ಅಪರಾಧದ ರೀತಿ ಬಿಂಬಿಸಲಾಗ್ತಿದೆ ಅಂತ ಕಿಡಿ
ನವದೆಹಲಿ: ಖರ್ಗೆ ಅವರು ಭಾಷಣ ಮಾಡಿದ ಸ್ಥಳದಲ್ಲಿ ಶುದ್ಧೀಕರಣ (Shuddhikaran) ನಡೆಸಿದ ಬಿಜೆಪಿ ನಾಯಕರ ವಿರುದ್ಧ ಎಫ್‌ಐಆರ್ (FIR) ದಾಖಲಿಸುವಂತೆ ಪ್ರಧಾನಿ ಮೋದಿ ಆದೇಶಿಸಬೇಕು ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಒತ್ತಾಯಿಸಿದರು.
ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಮತ್ತು ಅರ್‌ಎಸ್‌ಸ್ (BJP – RSS) ಅನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದರು. ಇದೇ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹಲ್ದ್ವಾನಿ ಭೇಟಿ ಉಲ್ಲೇಖಿಸಿ ಮಾತನಾಡಿದರು. ಇದನ್ನೂ ಓದಿ: ತಾನು ಭಾಷಣ ಮಾಡಿದ ಜಾಗದಲ್ಲಿ ಶುದ್ಧೀಕರಣ ಹೋಮ – ದೇಶದಲ್ಲಿ ದಲಿತರಿಗೆ ಜಾಗವಿಲ್ಲ ಎಂದು ಖರ್ಗೆ ಕಿಡಿ
#WATCH | Delhi: Lok Sabha LoP Rahul Gandhi says, “…Our CLP leader in Rajasthan visits a temple, and BJP leaders perform a ‘purification’ ritual. Congress President Kharge ji, who has dedicated his entire life to the country and the Constitution, goes to the Ramlila Ground in… pic.twitter.com/2EN4llPGiK
— ANI (@ANI) August 29, 2026
ಖರ್ಗೆ ಅವರು ಭಾಷಣ ಮಾಡಿದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ʻಶುದ್ಧೀಕರಣʼ ನಡೆಸಲಾಗಿದೆ. ಈ ವಿಷಯದಲ್ಲಿ ಪ್ರಧಾನಿ ಮಧ್ಯಪ್ರವೇಶಿಸಬೇಕು, ಶುದ್ಧೀಕರಣ ನಡೆಸಿದವರ ವಿರುದ್ಧ ಎಫ್‌ಐಆರ್‌ಗೆ ಆದೇಶಿಸಬೇಕೆಂದು ಅವರು ಒತ್ತಾಯಿಸಿದರು.
ಶುದ್ಧೀಕರಣವು ಮೂಲಭೂತವಾಗಿ ಅಸ್ಪೃಶ್ಯತೆಯ ಮತ್ತೊಂದು ರೂಪವಾಗಿದ್ದು, ಸಂವಿಧಾನದಿಂದಲೇ ಅದನ್ನ ನಿಷೇಧಿಸಲಾಗಿದೆ. ಇಂತಹ ಆಚರಣೆಗಳು ದಲಿತರನ್ನ ಅಶುದ್ಧರೆಂದು ಬಿಂಬಿಸುತ್ತವೆ. ಈ ರೀತಿ ಸಂವಿಧಾನ ವಿರೋಧಿ ಕ್ರಮ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಿಗೆ ಇಂತಹ ಘಟನೆ ಸಂಭವಿಸಬಹುದಾದ್ರೆ, ಸಾಮಾನ್ಯ ನಾಗರಿಕರ ವಿರುದ್ಧವೂ ಇದೇ ರೀತಿಯ ಘಟನೆಗಳು ಸಂಭವಿಸಬಹುದು. ಈ ವಿಷಯದಲ್ಲಿ ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಖರ್ಗೆ ಭಾಷಣ ಮಾಡಿದ್ದ ಸ್ಥಳದಲ್ಲಿ ಶುದ್ಧೀಕರಣ ಹೋಮ – ಪರಿಷತ್‌ನಲ್ಲಿ ಖಂಡನಾ ನಿರ್ಣಯ ಅಂಗೀಕಾರ

ಮುಟ್ಟಿಸಿಕೊಳ್ಳುವುದೇ ಅಪರಾಧದ ರೀತಿ ಬಿಂಬಿಸಲಾಗ್ತಿದೆ
ಇಂದಿಗೂ ಗ್ರಾಮೀಣ ಪ್ರದೇಶಗಳು ಹಾಗೂ ನಗರ ಪ್ರದೇಶಗಳಲ್ಲಿ ದಲಿತರು ತಾರತಮ್ಯ ಎದುರಿಸುತ್ತಿದ್ದಾರೆ. ಬಾವಿಗಳಿಂದ ನೀರು ಸೇದುವುದನ್ನು ನಿಷೇಧಿಸುವುದು ಮತ್ತು ಚಹಾ ಅಂಗಡಿಗಳಲ್ಲಿ ಪ್ರತ್ಯೇಕ ಪೇಪರ್ ಕಪ್‌ಗಳನ್ನ ಒದಗಿಸುವ ಕೆಲಸ ಮಾಡಲಾಗುತ್ತಿದೆ. ಚಹಾ ಅಂಗಡಿಗೆ ಹೋದ್ರೆ ಎರಡು ರೀತಿಯ ಕಪ್‌ಗಳನ್ನ ಬಳಕೆ ಮಾಡಲಾಗುತ್ತೆ. ಪೇಪರ್ ಕಪ್ ನಲ್ಲಿ ದಲಿತರಿಗೆ ಚಹಾ ನೀಡಲಾಗುತ್ತೆ. ಮದುವೆ ಮೆರವಣಿಗೆಯಲ್ಲಿ ಕುದುರೆ ಮೇಲೆ ದಲಿತರು ಹತ್ತಿದ್ರೆ ಕಲ್ಲು ತೂರಲಾಗುತ್ತೆ. ಹೀಗಾಗೀ ಅವರು ಹೆಲ್ಮೆಟ್ ಧರಿಸಬೇಕಿದೆ. ಇದು ಉತ್ತರ ಪ್ರದೇಶ, ಉತ್ತರ ಭಾರತದ ಸ್ಥಿತಿ. ಸಾಧನೆ ಮಾಡುವ ದಲಿತರ ವಿರುದ್ಧ ಆಕ್ರಮಣ ಮಾಡಲಾಗುತ್ತಿದೆ. ಇದೇ ರೀತಿ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನ ಶುದ್ಧೀಕರಣ ಮಾಡಲಾಯ್ತು. ಇದನ್ನು ಬಿಜೆಪಿ ಆರ್‌ಎಸ್‌ಎಸ್ ಜನರು ಮಾಡುತ್ತಾರೆ, ಇದೊಂದು ಕ್ರಿಮಿನಲ್ ಚಟುವಟಿಕೆ ಮಾತ್ರವಲ್ಲದೇ ಅಸ್ಪೃಶ್ಯತೆಯನ್ನು ಅನುಷ್ಠಾನಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ದಲಿತರನ್ನ ಮುಟ್ಟಿಸಿಕೊಳ್ಳುವುದು ಅಪರಾಧದ ರೀತಿಯಲ್ಲಿ ಬಿಂಬಿಸಲಾಗುತ್ತಿದೆ ಎಂದು ಕಿಡಿ ಕಾರಿದ್ರು.
ಇದೇ ವೇಳೆ ರಾಜಸ್ಥಾನ ಮತ್ತು ಉತ್ತರಾಖಂಡವನ್ನು ಉಲ್ಲೇಖಿಸಿ, ರಾಜಸ್ಥಾನದಲ್ಲಿ, ಸಿಎಲ್‌ಪಿ ನಾಯಕರೊಬ್ಬರು ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ದೇವಸ್ಥಾನವನ್ನು ಶುದ್ಧೀಕರಿಸಲಾಗಿದೆ. ಹೀಗೆ ದೇಶದ ವಿವಿಧ ಭಾಗಗಳಲ್ಲಿ ದಲಿತರ ವಿರುದ್ಧ ತಾರತಮ್ಯ ಮುಂದುವರೆದಿದೆ ಎಂದು ಅವರು ವಾಗ್ದಾಳಿ ನಡೆಸಿದರು.
