ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಉತ್ತರಾಖಂಡದಲ್ಲಿ ಭಾಷಣ ಮಾಡಿದ ಸ್ಥಳವನ್ನ ಶುದ್ಧೀಕರಣ (Shuddhikaran) ಮಾಡಿದ ಪ್ರಕರಣ ಖಂಡಿಸಿ ವಿಧಾನ ಪರಿಷತ್ತಿನಲ್ಲಿಂದು ಖಂಡನಾ ನಿರ್ಣಯ ಮಂಡನೆ ಮಾಡಿ ಅಂಗೀಕರಿಸಲಾಯಿತು.

ಪರಿಷತ್ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ (Congress Member) ಜಕ್ಕಪ್ಪನವರ್ ಖಂಡನಾ ನಿರ್ಣಯ ಮಂಡನೆ ಮಾಡಿದ್ರು. ನಿರ್ಣಯ ಮಂಡನೆ ವೇಳೆ ಬಿಜೆಪಿ ವಿರುದ್ದ ಆರೋಪ ಮಾಡಿದ್ರು. ಇದನ್ನೂ ಓದಿ: ತಾನು ಭಾಷಣ ಮಾಡಿದ ಜಾಗದಲ್ಲಿ ಶುದ್ಧೀಕರಣ ಹೋಮ – ದೇಶದಲ್ಲಿ ದಲಿತರಿಗೆ ಜಾಗವಿಲ್ಲ ಎಂದು ಖರ್ಗೆ ಕಿಡಿ

ಈ ವೇಳೆ ಸದನದಲ್ಲಿ ಗದ್ದಲ ಗಲಾಟೆಯೂ ಆಯ್ತು. ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷಗಳು ಪ್ರತಿಭಟನೆ ಮಾಡುತ್ತಾ ಇದ್ದುದರಿಂದ ಧ್ವನಿ ಮತದ ಮೂಲಕ ಖಂಡನಾ ನಿರ್ಣಯ ಸದನದಲ್ಲಿ ಅಂಗೀಕಾರ ಆಯ್ತು.
ಏನಿದು ವಿವಾದ?
ಆಗಸ್ಟ್ 8ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರ‍್ಯಾಲಿ ನಡೆಸಿದ್ದ ಸ್ಥಳದಲ್ಲಿ ಆಗಸ್ಟ್ 10 ರಂದು ಶ್ರೀರಾಮ ಸೇನಾ ಧರ್ಮಾರ್ಥ ಸೇವಾ ನ್ಯಾಸ್ ಸಂಘಟನೆಯಿಂದ ಶುದ್ಧೀಕರಣ ಹೋಮ ನಡೆಸಲಾಗಿತ್ತು. ಈ ಘಟನೆಗೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಖರ್ಗೆ ದಲಿತ ಸಮುದಾಯಕ್ಕೆ ಸೇರಿದವರಾಗಿರುವ ಕಾರಣಕ್ಕೆ ಈ ರೀತಿ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಇದನ್ನೂ ಓದಿ: ರಾಹುಲ್ ಗಾಂಧಿಗೆ ಬಿಗ್ ರಿಲೀಫ್ – ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್ ವಿಚಾರಣೆಗೆ ಸುಪ್ರೀಂ ತಡೆ
ಈ ವಿಚಾರವನ್ನ ರಾಜ್ಯಸಭೆಯಲ್ಲೂ ಪ್ರಸ್ತಾಪಿಸಿದ ಖರ್ಗೆ, ಈ ದೇಶದಲ್ಲಿ ದಲಿತರಿಗೆ ಜಾಗವಿಲ್ಲ ಎಂದು ನಾವು ಹೇಳುತ್ತಲೇ ಇದ್ದೇವೆ. ಧರ್ಮದ ಹೆಸರಿನಲ್ಲಿ ಎಲ್ಲರನ್ನೂ ವಿಭಜಿಸಲಾಗುತ್ತಿದೆ. ಅಲ್ಲಿ ಹವನ ಮಾಡಿಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು. ತಮ್ಮ ಭಾಷಣದಲ್ಲಿ ಯಾವುದೇ ಧರ್ಮ ಅಥವಾ ಸಮುದಾಯದ ವಿರುದ್ಧ ಮಾತನಾಡಿಲ್ಲ. ಸರ್ಕಾರದ ಸಮಸ್ಯೆಗಳ ಬಗ್ಗೆ ಮಾತ್ರ ಪ್ರಸ್ತಾಪಿಸಿದ್ದೇನೆ. ಅನು ತಮ್ಮ ರ‍್ಯಾಲಿ ನಡೆಸಿದ ಸ್ಥಳವನ್ನು ಶುದ್ಧೀಕರಿಸಲು ಹೋಮ ಮಾಡಲಾಗಿದೆ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
