ವಿವಾದದ ನಡುವೆಯೂ ದೇಶಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ದಿ ಕೇರಳ ಸ್ಟೋರಿ, (The Kerala Story) ಹಲವು ಚಿತ್ರಗಳಿಗೆ ಸ್ಫೂರ್ತಿಯಾಗುತ್ತಿದೆ. ತಮಿಳಿನಲ್ಲೂ (Tamil) ಇಂಥದ್ದೇ ಮಾದರಿಯ ಚಿತ್ರವೊಂದು ರೆಡಿಯಾಗಿದ್ದು, ಈ ಚಿತ್ರ ಕೂಡ ವಿವಾದಕ್ಕೆ ಕಾರಣವಾಗಿದೆ. ಆ ಚಿತ್ರವನ್ನು ತಡೆಯಬೇಕು ಎಂದು ಮುಸ್ಲಿಂ ಸಮುದಾಯ ಆಗ್ರಹಿಸಿದೆ.
Advertisement
ಕೆಲವು ದಿನಗಳ ಹಿಂದೆಯಷ್ಟೇ ರಿಲೀಸ್ ಆಗಿರುವ ತಮಿಳಿನ ಫರ್ಹಾನಾ (Farhana) ಸಿನಿಮಾ ಕೂಡ ಮುಸ್ಲಿಂ ವಿರೋಧ ಧೋರಣೆಯನ್ನು ತೋರುತ್ತಿದೆ. ಹಾಗಾಗಿ ಮೂಲಭೂತವಾದಿಗಳು ಚಿತ್ರವನ್ನು ವಿರೋಧಿಸುತ್ತಿದ್ದಾರೆ. ಹಾಗಂತ ಇದು ಉಗ್ರರ ಕುರಿತಾದ ಸಿನಿಮಾವಲ್ಲ, ಮುಸ್ಲಿಂ ಮಹಿಳೆಯ ಮತ್ತೊಂದು ಮುಖವನ್ನು ಇದು ಅನಾವರಣ ಮಾಡಿದೆ. ಇದನ್ನೂ ಓದಿ:ಲವ್ಲಿ ಸ್ಟಾರ್ ಪ್ರೇಮ್- ಜ್ಯೋತಿ ದಾಂಪತ್ಯಕ್ಕೆ 25ರ ಸಂಭ್ರಮ
Advertisement
Advertisement
ಮುಸ್ಲಿಂ ಮಹಿಳೆಯೊಬ್ಬರು ಬಡತನದ ಕಾರಣದಿಂದಾಗಿ ಲೈಂಗಿಕತೆ ಕುರಿತಾಗಿ ಮಾತನಾಡುವ ಕಾಲ್ ಸೆಂಟರ್ ಸೇರಿಕೊಳ್ಳುತ್ತಾಳೆ. ಅಲ್ಲಿಂದ ಆಕೆ ವೃತ್ತಿಗೆ ಸಂಬಂಧಿಸಿದ ಸಂಕಟಗಳು ಏನು, ಬ್ಲಾಕ್ ಮೇಲರ್ ಒಬ್ಬನ ಕಿರುಕುಳದಿಂದ ಆಕೆ ಹೇಗೆ ಪಾರಾಗುತ್ತಾಳೆ ಹೀಗೆ ಕಥೆಯನ್ನು ಒಳಗೊಂಡಿದೆ. ಈ ಕಥೆಗೆ ಇಂಡಿಯನ್ ನ್ಯಾಷನಲ್ ಲೀಗ್ ಮತ್ತು ಕೆಲ ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತ ಪಡಿಸಿವೆ.
Advertisement
ನಾವು ಯಾರ ಮನಸ್ಸಿಗೂ ನೋವನ್ನುಂಟು ಮಾಡಿಲ್ಲ. ಉತ್ತಮವಾದ ಸಂದೇಶವನ್ನು ಹೊಂದಿರುವ ಸಿನಿಮಾ ಇದಾಗಿದೆ. ಯಾರ ವಿರುದ್ಧವೂ ನಾವು ಕಥೆಯನ್ನು ಹೇಳಿಲ್ಲ ಎಂದು ಚಿತ್ರತಂಡ ಹೇಳಿಕೊಂಡಿದ್ದರೂ, ಮುಸ್ಲಿಂ ಸಂಘಟನೆಗಳು ಮಾತ್ರ ಕಿವಿಗೊಟ್ಟಿಲ್ಲ. ಅಂದಹಾಗೆ ಈ ಸಿನಿಮಾವನ್ನು ನೆಲ್ಸನ್ ವೆಂಕಟೇಷನ್ ನಿರ್ದೇಶನ ಮಾಡಿದ್ದರೆ, ಐಶ್ವರ್ಯ ರಾಜೇಶ್ (Aishwarya Rajesh) ಮುಖ್ಯಪಾತ್ರ ನಿರ್ವಹಿಸಿದ್ದಾರೆ.