Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ನಾನಾ ಯುದ್ಧ ಕಂಡ ವಿಶ್ವದ ಮುಂದೀಗ ಜೈವಿಕ ಶಸ್ತ್ರಾಸ್ತ್ರದ ಭಯ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ನಾನಾ ಯುದ್ಧ ಕಂಡ ವಿಶ್ವದ ಮುಂದೀಗ ಜೈವಿಕ ಶಸ್ತ್ರಾಸ್ತ್ರದ ಭಯ!

Latest

ನಾನಾ ಯುದ್ಧ ಕಂಡ ವಿಶ್ವದ ಮುಂದೀಗ ಜೈವಿಕ ಶಸ್ತ್ರಾಸ್ತ್ರದ ಭಯ!

Public TV
Last updated: December 16, 2025 4:23 pm
Public TV
Share
3 Min Read
BIO WAPEN
SHARE

ಮನುಷ್ಯ ತನ್ನ ಉಗಮದ ಬಳಿಕ ಶತೃಗಳ ಮೇಲೆ ದಾಳಿಗೆ ಕಲ್ಲು, ಕೋಲು, ಕತ್ತಿ, ಕೋವಿ, ಬಾಂಬ್‌, ಅಣು ಬಾಂಬ್‌ ಹೀಗೆ   ನಾನಾ ಆಸ್ತ್ರಗಳನ್ನು ಬಳಸಿದ್ದಾನೆ. ಹಾಗೇ ಈ ಜೈವಿಕ ಅಸ್ತ್ರ (Bioweapon) ಸಹ ಅದರಲ್ಲಿ ಒಂದು. ಇದು ಯಾವುದೇ ಸದ್ದಿಲ್ಲದೇ ಲಕ್ಷಗಟ್ಟಲೇ ಜನ, ಜಾನುವಾರುಗಳನ್ನು ಕೊಲ್ಲಬಹುದಾದ ಅಪಾಯಕಾರಿಯಾದ ರಾಕ್ಷಸ ಅಸ್ತ್ರದಲ್ಲಿ ಒಂದು ಎಂದೇ ಇದರ ಬಳಕೆಯನ್ನು ಬ್ಯಾನ್‌ ಮಾಡಲಾಗಿದೆ. ಆದರೂ ಕೆಲವು ರಾಷ್ಟ್ರಗಳು ಗೌಪ್ಯವಾಗಿ ತಮ್ಮ ಶತೃ ರಾಷ್ಟ್ರಗಳ ಮೇಲೆ ಇಂತಹ ಅಸ್ತ್ರಗಳನ್ನು ಪ್ರಯೋಗ ಮಾಡುತ್ತಿವೆ ಎಂದು ಆಗಾಗ ವರದಿಯಾಗುತ್ತಲೇ ಇರುತ್ತದೆ. 

ಈ ಜೈವಿಕ ಅಸ್ತ್ರದ ಬಗ್ಗೆ ಜೈವಿಕ ಶಸ್ತ್ರಾಸ್ತ್ರಗಳ ಸಮಾವೇಶದ 50ನೇ ವರ್ಷದ ಸಮ್ಮೇಳನದಲ್ಲಿ ವಿದೇಶಾಂಗ ಸಚಿವ ಜೈಶಂಕರ್ (Jaishankar) ಮಾತಾಡಿದ್ದರು. ಈ ಜೈವಿಕ ಅಸ್ತ್ರ ಎಂದರೇನು? ಇದು ಹೇಗೆ ಕೆಲಸ ಮಾಡುತ್ತದೆ? ಇದರ ಅಪಾಯಗಳೇನು ಎಂಬುದನ್ನು ಇಲ್ಲಿ ವಿವರಿಸಲಾಗಿದೆ. 

BIO Wepon 3

ಜೈವಿಕ ಅಸ್ತ್ರ ಎಂದರೇನು?
ಜೈವಿಕ ಅಸ್ತ್ರಗಳು (Biological Weapons) ವೈರಸ್‌ಗಳು, ಬ್ಯಾಕ್ಟೀರಿಯಾಗಳು, ವಿಷ ಅಥವಾ ಇತರ ಜೀವಿಗಳನ್ನು ಬಳಸಿಕೊಂಡು ಮಾನವರು, ಪ್ರಾಣಿಗಳು ಅಥವಾ ಸಸ್ಯಗಳಲ್ಲಿ ರೋಗ, ಸಾವುನೋವು ಮತ್ತು ಸಾಮೂಹಿಕ ಹಾನಿಯನ್ನುಂಟುಮಾಡುವ ಮಾರಕ ಆಯುಧಗಳಾಗಿವೆ. ಇವುಗಳ ಅಭಿವೃದ್ಧಿ, ಸಂಗ್ರಹಣೆ ಮತ್ತು ಬಳಕೆಯನ್ನು ಜೈವಿಕ ಶಸ್ತ್ರಾಸ್ತ್ರಗಳ ಸಮಾವೇಶ (BWC) ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ನಿಷೇಧಿಸಲಾಗಿದೆ. 

ಜೈವಿಕ ಅಸ್ತ್ರಗಳ ಪ್ರಮುಖ ಲಕ್ಷಣ
ಇವು ಮದ್ದುಗುಂಡುಗಳಂತೆ ಮೂಲಸೌಕರ್ಯಗಳನ್ನು ನಾಶಪಡಿಸುವುದಿಲ್ಲ. ಬದಲಾಗಿ ಆಂಥ್ರಾಕ್ಸ್ (Anthrax), ಪ್ಲೇಗ್ (Plague), ಟುಲಾರೆನ್ಸಿಯ (Tularemia), ಬೊಟುಲಿನಮ್ ಟಾಕ್ಸಿನ್ (Botulinum Toxin) ಮುಂತಾದ ರೋಗಗಳನ್ನು ಉಂಟು ಮಾಡಬಹುದು. ಇದು ಸಾಮೂಹಿಕ ಸಾವುನೋವುಗಳಿಗೆ ಕಾರಣವಾಗಲಿದೆ.

ವ್ಯಾಪಕ ಹರಡುವಿಕೆ: ಇವು ಒಮ್ಮೆ ಬಿಡುಗಡೆಯಾದ ಬಳಿಕ ನಿಯಂತ್ರಿಸುವುದು ಕಷ್ಟ, ಹರಡುವಿಕೆ ವೇಗವಾಗಿರುತ್ತದೆ ಮತ್ತು ರೂಪಾಂತರಗೊಳ್ಳುವ ಅಪಾಯ ಇರುತ್ತದೆ. 

ಕಡಿಮೆ ವೆಚ್ಚ: ಪರಮಾಣು ಅಸ್ತ್ರಗಳಿಗಿಂತ ತಯಾರಿಸಲು ಇವುಗಳನ್ನು ತಯಾರಿಸಲು ಕಡಿಮೆ ಹಣ (Money) ಸಾಕು. ಅದ್ದರಿಂದ ಕೆಲವು ದೇಶಗಳು ಇದರ ಬೆನ್ನ ಹಿಂದೆ ಬಿದ್ದಿವೆ ಎನ್ನಲಾಗುತ್ತಿದೆ. ಇದನ್ನು ʻಸಾಮೂಹಿಕ ವಿನಾಶದ ಅಸ್ತ್ರʼ ಎಂದೂ ಸಹ ಕರೆಯಲಾಗುತ್ತದೆ. 

ನಿಷೇಧ: 1972ರ ಜೈವಿಕ ಶಸ್ತ್ರಾಸ್ತ್ರಗಳ ಸಮಾವೇಶ (BWC) ಮೂಲಕ ಹೆಚ್ಚಿನ ದೇಶಗಳು ಇವುಗಳ ಉತ್ಪಾದನೆ ಮತ್ತು ಬಳಕೆಯನ್ನು ನಿಷೇಧಿಸಿವೆ. ಆದರೂ ಭಯೋತ್ಪಾದಕರು ಇವುಗಳ ತಯಾರಿಸಿ ಹಾಗೂ ಬಳಸುವ ಬೆದರಿಕೆ ಇದೆ.

BIO Wepon 2

ತಡೆಗಟ್ಟುವಿಕೆ: ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳು, ಲಸಿಕೆಗಳು, ಅಂತರರಾಷ್ಟ್ರೀಯ ಸಹಕಾರ ಮತ್ತು ಕಾನೂನು ಜಾರಿಯಿಂದ ಮಾತ್ರ ತಡೆ ಸಾಧ್ಯ. 

ಯಾವ ದೇಶಗಳು ಜೈವಿಕ ಶಸ್ತ್ರಾಸ್ತ್ರಗಳನ್ನು ಹೊಂದಿವೆ?
ಚೀನಾ, ರಷ್ಯಾ ಮತ್ತು ಅಮೆರಿಕದಂತಹ ದೇಶಗಳು ಜೈವಿಕ ಶಸ್ತ್ರಾಸ್ತ್ರ ಹೊಂದಿರಬಹುದೆಂದು ನಂಬಲಾಗಿದೆ. ಆದರೆ, 1972ರ ಜೈವಿಕ ಶಸ್ತ್ರಾಸ್ತ್ರಗಳ ಸಮಾವೇಶ ಒಪ್ಪಂದದಿಂದ ಇವುಗಳ ಉತ್ಪಾದನೆ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ. ಈ ಒಪ್ಪಂದದ ಹೊರತಾಗಿಯೂ, ಕೆಲವು ದೇಶಗಳು ರಹಸ್ಯವಾಗಿ ಇಂತಹ ಆಯುಧಗಳನ್ನು ಅಭಿವೃದ್ಧಿಪಡಿಸುತ್ತಿರಬಹುದೆಂಬ ಶಂಕೆ ಇದೆ. ಯಾವುದೇ ದೇಶವು ತನ್ನಲ್ಲಿ ಜೈವಿಕ ಅಸ್ತ್ರಗಳಿವೆ ಎಂದು ಬಹಿರಂಗವಾಗಿ ಒಪ್ಪಿಕೊಂಡಿಲ್ಲ. ಒಟ್ಟಿನಲ್ಲಿ ಜೈವಿಕ ಶಸ್ತ್ರಾಸ್ತ್ರಗಳು ಜಗತ್ತಿಗೆ ಗಂಭೀರ ಬೆದರಿಕೆಯಾಗಿವೆ. 

Bio Wepon

ಚೀನಾದ ಜೈವಿಕ ಸಂಶೋಧನಾ ಸಾಮರ್ಥ್ಯ, ವಿಶೇಷವಾಗಿ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯಂತಹ ಉನ್ನತ ಮಟ್ಟದ ಪ್ರಯೋಗಾಲಯಗಳು, ಜಾಗತಿಕ ಆತಂಕಕ್ಕೆ ಕಾರಣವಾಗಿವೆ. ಕೋವಿಡ್-19 ಸಮಯದಲ್ಲಿ ಈ ಪ್ರಯೋಗಾಲಯಕ್ಕೆ ಸಂಬಂಧಿಸಿದ ಊಹಾಪೋಹಗಳು ಚರ್ಚೆಗೆ ಗ್ರಾಸವಾಗಿತ್ತು. 

ರಷ್ಯಾ ಮೇಲೆ ಉಕ್ರೇನ್‌ ದಾಳಿ?
ಈ ಹಿಂದೆ ಬಾವಲಿ ಹಾಗೂ ಇನ್ನಿತರ ಪಕ್ಷಿಗಳನ್ನು ಜೈವಿಕ ಅಸ್ತ್ರವಾಗಿ ಬಳಸಿ ದಾಳಿ ನಡೆಸಲು ಉಕ್ರೇನ್‌ ಸಂಚು ನಡೆಸಿದೆ ಎಂದು ರಷ್ಯಾ ಗಂಭೀರ ಆರೋಪ ಮಾಡಿತ್ತು. ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ರಷ್ಯಾದ ರಾಯಭಾರಿ ವಾಸಿಲಿ ನೆಂಬೆಂಝಿಯಾ ಉಕ್ರೇನ್‌ ಬಾವಲಿ ಹಾಗೂ ದೂರ ರಾಷ್ಟ್ರಗಳಿಗೆ ವಲಸೆ ಹೋಗುವ ಪಕ್ಷಿಗಳನ್ನು ಬಳಸಿ ಮಾರಣಾಂತಿಕ ರೋಗಗಳನ್ನು ಹರಡಲು ಸಂಚು ಹೂಡಿದೆ. ಉಕ್ರೇನಿಗೆ ಜೈವಿಕ ಅಸ್ತ್ರಗಳನ್ನು ಉತ್ಪಾದಿಸಲು ಅಮೆರಿಕ ಸಹಾಯ ಮಾಡುತ್ತಿದೆ ಎಂದಿದ್ದರು.

BIO Wepon

ಎಸ್ ಜೈಶಂಕರ್  ಹೇಳಿದ್ದೇನು?
ಅಂತರರಾಷ್ಟ್ರೀಯ ಭದ್ರತೆಯ ಅನಿಶ್ಚಿತವಾಗಿರುವುದರಿಂದ ಜೈವಿಕ ಶಸ್ತ್ರಾಸ್ತ್ರಗಳ ದುರುಪಯೋಗ ತಡೆಯಲು ಜಾಗತಿಕ ಕಾರ್ಯವಿಧಾನದ ಅಗತ್ಯವಿದೆ. 

 ಜೈವಿಕ ಶಸ್ತ್ರಾಸ್ತ್ರಗಳ ದುರುಪಯೋಗ ಆಗುತ್ತಿರುವುದು ಕಳವಳಕಾರಿಯಾಗಿದೆ. ಜೈವಿಕ ಭಯೋತ್ಪಾದನೆ ವಿರುದ್ಧ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೋರಾಡಲು ಸಮರ್ಪಕವಾಗಿ ಸಿದ್ಧವಾಗಬೇಕಾಗಿದೆ. ಅಂತಹ ಸವಾಲನ್ನು ಎದುರಿಸಲು ಎಲ್ಲಾ ರಾಷ್ಟ್ರಗಳ ಸಹಕಾರದ ಅಗತ್ಯವಿದೆ.

ವಿಜ್ಞಾನದೊಂದಿಗೆ ಜಾಗತಿಕ ಸಾಮರ್ಥ್ಯವನ್ನು ಬಲಪಡಿಸಬೇಕು. ಹೀಗಾದಲ್ಲಿ ಮಾತ್ರ ಎಲ್ಲಾ ದೇಶಗಳು ಜೈವಿಕ ಅಪಾಯಗಳನ್ನು ಪತ್ತೆಹಚ್ಚಬಹುದು, ತಡೆಗಟ್ಟಬಹುದು ಮತ್ತು ಸೂಕ್ತವಾಗಿ ಹೋರಾಡಬಹುದು. ಭಾರತವು ಶಾಂತಿಯುತ ಜೈವಿಕ ಸಂಶೋಧನೆ, ವಸ್ತುಗಳು ಮತ್ತು ತಂತ್ರಜ್ಞಾನದ ವಿನಿಮಯಕ್ಕಾಗಿ ಅಂತರರಾಷ್ಟ್ರೀಯ ಸಹಕಾರವನ್ನು ಸಹ ಬೆಂಬಲಿಸುತ್ತದೆ ಎಂದಿದ್ದರು.

TAGGED:Biological TerrorismBioweaponhealthjaishankarwar
Share This Article
Facebook Whatsapp Whatsapp Telegram

Cinema news

Sanjay Dutt
ಸರ್ಸೆ ಸೆರಗ ಸರ್ಸೆ ಹಾಡಿನ ವಿವಾದ – ಕ್ಷಮೆಯಾಚಿಸಿದ ಸಂಜಯ್ ದತ್, ಬುಡಕಟ್ಟು ಜನಾಂಗದ 50 ಹುಡುಗಿಯರ ಶಿಕ್ಷಣಕ್ಕೆ ಹಣದ ಭರವಸೆ
Bollywood Cinema Latest National Sandalwood Top Stories
ChetanKumar Ahimsa
ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌
Cinema Karnataka Latest Top Stories
chetan 13 5
ರಾಜ್‌ಕುಮಾರ್‌ ಸಮಾಧಿಗೆ 2.5 ಎಕರೆ ಜಾಗ ನೀಡಿದ್ದು ಸರಿಯೇ? – ನಟ‌ ಚೇತನ್ ವಿರುದ್ಧ ಡಾಕ್ಟರ್ ರಾಜ್‌ ಅಭಿಮಾನಿಗಳಿಂದ ದೂರು
Bengaluru City Cinema Latest Sandalwood Top Stories
Akshay Kumar 1
ನಟ ಅಕ್ಷಯ್ ಕುಮಾರ್ ಅಪ್ರಾಪ್ತ ಪುತ್ರಿಯ ಬೆತ್ತಲೆ ಫೋಟೋಗೆ ಬೇಡಿಕೆಯಿಟ್ಟಿದ್ದ ವ್ಯಕ್ತಿ ಅರೆಸ್ಟ್
Bollywood Cinema Crime Latest Top Stories

You Might Also Like

R Ashok 1
Bengaluru City

ಸರ್ಕಾರ ಗುಂಡಿ ಮುಚ್ಚಿದ ಹಣವನ್ನು ಗುಂಡಿಗೆ ಹಾಕಿದೆ – ಅಶೋಕ್‌ ವಾಗ್ದಾಳಿ

Public TV
By Public TV
13 minutes ago
Suhas Sudhakar H.D Kumaraswamy
Chitradurga

ಹೆಚ್‌ಡಿಕೆ ʻಹೆಬ್ಬೆಟ್ಟು’ ಹೇಳಿಕೆಯಿಂದ ನೋವಾಗಿದೆ – ಬೇಸರ ಹೊರಹಾಕಿದ ಡಿ.ಸುಧಾಕರ್ ಪುತ್ರ

Public TV
By Public TV
13 minutes ago
DK Shivakumar Iqbal Hussain
Districts

ಮೇ 15ಕ್ಕೆ ಡಿಕೆಶಿ ಸಿಎಂ ಆಗೋದು ಫಿಕ್ಸ್, ಇದೇ ನನ್ನ ಅಂತಿಮ ದಿನಾಂಕ: ಇಕ್ಬಾಲ್ ಹುಸೇನ್

Public TV
By Public TV
34 minutes ago
PM Narendra Modi joins youngsters for friendly football game in Gangtok during Sikkim visit 1
Cricket

ಮಕ್ಕಳ ಜೊತೆ ಫುಟ್‌ಬಾಲ್ – ಗೋಲ್‌ ಹೊಡೆದು ಸಂಭ್ರಮಿಸಿದ ಮೋದಿ

Public TV
By Public TV
1 hour ago
Nirmala Sitharaman visits Kollur Mookambika Temple
Karnataka

ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದ ನಿರ್ಮಲಾ ಸೀತಾರಾಮನ್

Public TV
By Public TV
2 hours ago
Mumbai Man Stabs 2 Security Guards After Asking Them To Recite The Kalma
Crime

ಮುಂಬೈನಲ್ಲಿ ‘ಪಹಲ್ಗಾಮ್’ ಮಾದರಿಯ ದಾಳಿ – ಕಲ್ಮಾ ಪಠಿಸದ ಇಬ್ಬರು ಹಿಂದೂಗಳಿಗೆ ಚಾಕು ಇರಿದ ದುಷ್ಕರ್ಮಿ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?