ಕೇಪ್ ಟೌನ್: ದ್ರವ ಪೆಟ್ರೋಲಿಯಂ ಅನಿಲ ಸಾಗಿಸುತ್ತಿದ್ದ ಟ್ಯಾಂಕರ್ (Fuel Tanker) ಭೀಕರವಾಗಿ ಸ್ಫೋಟಗೊಂಡು ಘಟನೆಯಲ್ಲಿ 10 ಜನರು ಸಾವನ್ನಪ್ಪಿರುವ ಘಟನೆ ದಕ್ಷಿಣ ಆಫ್ರಿಕಾದ (South Africa) ಜೋಹಾನ್ಸ್‌ಬರ್ಗ್‌ನಲ್ಲಿ ಶನಿವಾರ ನಡೆದಿದೆ. ಘಟನೆಯಲ್ಲಿ 40 ಜನರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಜೋಹಾನ್ಸ್‌ಬರ್ಗ್‌ನ ಪೂರ್ವದಲ್ಲಿರುವ ಬೋಕ್ಸ್‌ಬರ್ಗ್‌ನ ಜೋಹಾನ್ಸ್‌ಬರ್ಗ್‌ನ ಟಾಂಬೋ ಸ್ಮಾರಕ ಆಸ್ಪತ್ರೆ ಬಳಿ ಈ ಭೀಕರ ಘಟನೆ ನಡೆದಿದೆ. ಆಸ್ಪತ್ರೆಯಿಂದ ಸುಮಾರು 100 ಮೀ. ದೂರದಲ್ಲಿರುವ ತಗ್ಗು ಸೇತುವೆಯ ಕೆಳಗೆ ಇಂಧನ ಟ್ಯಾಂಕರ್ ಸಿಲುಕಿದೆ ಎನ್ನಲಾಗಿದೆ. ಸ್ಫೋಟದ ಬಳಿಕ ಆಸ್ಪತ್ರೆಯ ಮೇಲ್ಛಾವಣಿಯ ಒಂದು ಭಾಗ ಕುಸಿದಿದೆ ಎಂದು ವರದಿಯಾಗಿದೆ.
Advertisement
Advertisement
ಸ್ಫೋಟದ ಬಳಿಕ ಆಸ್ಪತ್ರೆಯಲ್ಲಿದ್ದ ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಗ್ಯಾಸ್ ಟ್ಯಾಂಕರ್ ಸುರಂಗ ಮಾರ್ಗವನ್ನು ಪ್ರವೇಶಿಸಲು ಸೇತುವೆಯ ಕೆಳಗಡೆಯಿಂದ ಹೋಗಿದ್ದು, ಈ ವೇಳೆ ಅದು ಸಿಲುಕಿಕೊಂಡಿದೆ. ಬಳಿಕ ಘರ್ಷಣೆ ಉಂಟಾಗಿ ಸ್ಫೋಟ ಉಂಟಾಗಿದೆ. ಅಗ್ನಿಶಾಮಕದಳದವರು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾಗ 2ನೇ ಬಾರಿ ಸ್ಫೋಟ ಉಂಟಾಗಿದೆ. ಈ ವೇಳೆ ಅಗ್ನಿಶಾಮಕ ಎಂಜಿನ್, 2 ಮೋಟಾರ್ ವಾಹನಗಳು ಬೆಂಕಿಗಾಹುತಿಯಾಗಿವೆ ಎನ್ನಲಾಗಿದೆ. ಇದನ್ನೂ ಓದಿ: ರಣಭೀಕರ ಹಿಮ ಸುನಾಮಿಗೆ ತತ್ತರಿಸಿದ ಅಮೆರಿಕ – ಕುದಿಯುವ ನೀರು ಕ್ಷಣ ಮಾತ್ರದಲ್ಲಿ ಐಸ್ ಆಗ್ತಿದೆ
Advertisement
A truck carrying a gas tank couldn’t fit into a low level bridge in Boksburg, South Africa. The level of the bridge compressed the gas tank which caused gas leakage and led to an explosion. Multiple people have been injured and others have sadly passed. ????#BoksburgExplosion pic.twitter.com/qdH4ll4RQP
— Sage ???? (@mashilo_masego) December 24, 2022
Advertisement
ಘಟನೆಯಿಂದ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಗಾಯಗೊಂಡಿರುವ 40 ಜನರ ಪೈಕಿ 19 ಜನರ ಸ್ಥಿತಿ ಗಂಭೀರವಾಗಿದೆ. 15 ಜನರ ಸ್ಥಿತಿ ಸ್ಥಿರವಾಗಿದೆ ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮದುವೆಯಾಗು ಎಂದಿದ್ದಕ್ಕೆ ಗೆಳತಿಯನ್ನೆ ಥಳಿಸಿದ ಯುವಕ