Bengaluru City

ಸಾಯುವ 1 ವಾರ ಮುನ್ನ ಟೆಕ್ಕಿ ಗೀತಾಂಜಲಿ ಗೂಗಲ್ ನಲ್ಲಿ ಇದನ್ನು ಸರ್ಚ್ ಮಾಡಿದ್ರು

Published

on

Share this

ಬೆಂಗಳೂರು: ನಗರದಲ್ಲಿ ಕೆಲಸ ಮಾಡಿಕೊಂಡಿದ್ದ ಟೆಕ್ಕಿ ಗೀತಾಂಜಲಿ ಸಾಯುವ ಒಂದು ವಾರ ಮುನ್ನ ಗೂಗಲ್ ನಲ್ಲಿ `ಹೌ ಟು ಕಮಿಟ್ ಸೂಸೈಡ್’ ಎಂಬುದನ್ನು ಸರ್ಚ್ ಮಾಡಿದ್ದರು.

ಗೋವಾ ಮೂಲದ 27 ವರ್ಷದ ಗೀತಾಂಜಲಿ ಬೆಂಗಳೂರಿನ ಬೆಳ್ಳಂದೂರು ಸೆಸ್ನಾ ಟೆಕ್ ಪಾರ್ಕ್ ನಲ್ಲಿರುವ ಅಡ್ವೋ ಅಫ್ಟಿಕ್ ನೆಟ್‍ವರ್ಕ್ ನಲ್ಲಿ ಕೆಲಸ ಮಾಡಿಕೊಂಡಿದ್ದರು. ಬುಧವಾರ ಕೆಲಸಕ್ಕೆ ಬಂದಿದ್ದ ಗೀತಾಂಜಲಿ ಮಧ್ಯಾಹ್ನ ಕಂಪೆನಿಯ 10ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಗೀತಾಂಜಲಿ ತಮ್ಮನ ಜೊತೆ ಎಚ್‍ಎಚ್‍ಎಸ್‍ಆರ್ ಲೇಔಟ್ ನಲ್ಲಿ ವಾಸವಾಗಿದ್ದರು. ಮಂಗಳವಾರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ತಮ್ಮ ಮತ್ತು ಚಿಕ್ಕಮ್ಮನ ಜೊತೆ ಗೋವಾಕ್ಕೆ ತೆರಳಿದ್ದರು. ಪೋಷಕರ ಜೊತೆ ರಾತ್ರಿ ಬರ್ತ್ ಡೇ ಪಾರ್ಟಿ ಆಚರಿಸಿದ್ದ ಗೀತಾಂಜಲಿ ಬೆಳಗ್ಗೆ 8.30ರ ವಿಮಾನದಲ್ಲಿ ತಮ್ಮ, ಚಿಕ್ಕಮ್ಮನ ಜೊತೆ ಬೆಂಗಳೂರಿಗೆ ಬಂದಿದ್ದರು.

ಬುಧವಾರ ನಡೆದಿದ್ದೇನು?: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇಳಿದು ನೇರವಾಗಿ ಮಾರತ್ತಹಳ್ಳಿಯ ಕಂಪನಿಗೆ ಬಂದಿದ್ದ ಗೀತಾಂಜಲಿ ನಂತರ ತಮ್ಮ ಮತ್ತು ಚಿಕ್ಕಮ್ಮನನ್ನು ಬನ್ನೇರುಘಟ್ಟ ರಸ್ತೆಯ ಮನೆಗೆ ಕಳುಹಿಸಿ ಕೆಲಸಕ್ಕೆ ಹೋಗಿದ್ದರು. ಬಳಿಕ ಮನೆಗೆ ಫೋನ್ ಮಾಡಿ ಬೆಂಗಳೂರು ತಲುಪಿದ್ದೇನೆ ಎಂದು ಹೇಳಿ ಕಂಪೆನಿಯನ್ನು ಪ್ರವೇಶಿಸಿದ್ದಾರೆ. ಕಂಪೆನಿಯ ಒಳಗಡೆ ಪ್ರವೇಶಿಸಿದ್ದರೂ ಯಾರ ಜೊತೆ ಮಾತನಾಡದೇ ಮಧ್ಯಾಹ್ನ 12.30ಕ್ಕೆ ನೇರವಾಗಿ 10ನೇ ಮಹಡಿಗೆ ತೆರಳಿ ಗೀತಾಂಜಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಪೋಷಕರು ಹೇಳಿದ್ದೇನು?: ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಂಗಳವಾರ ಗೋವಾದಲ್ಲಿರುವ ನಮ್ಮ ಮನೆಗೆ ತಮ್ಮ ಮತ್ತು ಚಿಕ್ಕಮ್ಮನ ಜೊತೆ ಗೀತಾಂಜಲಿ ಬಂದಿದ್ದಳು. ಹುಟ್ಟುಹಬ್ಬದ ದಿನವಾದ ಮಂಗಳವಾರ ಗೀತಾಂಜಲಿಗೆ ನಾವು ನಿಶ್ಚಿತಾರ್ಥ ಮಾಡಿದ್ದೆವು. ಆದರೆ ಆಕೆಗೆ ಈ ಮದುವೆ ಇಷ್ಟವಿರಲಿಲ್ಲ. ಆದರೂ ವಿವಾಹ ನಿಶ್ಚಯಕ್ಕೆ ನಾವು ಬಲವಂತವಾಗಿ ಆಕೆಯನ್ನು ಒಪ್ಪಿಸಿದ್ದೆವು. ನಮ್ಮ ನಿರ್ಧಾರದಿಂದ ಆಕೆ ಮನನೊಂದಿದ್ದಳು. ಈ ಕಾರಣಕ್ಕೆ ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೋಷಕರು ತಿಳಿಸಿದ್ದಾರೆ.

ಪೊಲೀಸ್ ತನಿಖೆಯ ವೇಳೆ ಗೀತಾಂಜಲಿ ವ್ಯಕ್ತಿಯೊಬ್ಬರನ್ನು ಪ್ರೀತಿಸಿದ್ದ ವಿಚಾರವೂ ಬೆಳಕಿಗೆ ಬಂದಿದೆ.

Click to comment

Leave a Reply

Your email address will not be published. Required fields are marked *

Advertisement
Advertisement