ಚೆನ್ನೈ: 2 ದಿನಗಳ ಹಿಂದೆ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರಿಗೆ ಕೋವಿಡ್ ಸೋಕು ಕಂಡುಬಂದಿದ್ದು, ಗುರುವಾರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
69 ವರ್ಷದ ಸ್ಟಾಲಿನ್ ಅವರಿಗೆ ಜುಲೈ 12 ರಂದು ಕೋವಿಡ್ ಇರುವುದು ಕಂಡುಬಂದಿತ್ತು. ಅವರನ್ನು ಇಂದು ಕೋವಿಡ್ ಸಂಬಂಧಿತ ರೋಗ ಲಕ್ಷಣ ಹಾಗೂ ಚಿಕಿತ್ಸೆಗಳಿಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: 100ನೇ ಸ್ವಾತಂತ್ರ್ಯೋತ್ಸವದ ಹೊತ್ತಿಗೆ ಭಾರತದಲ್ಲಿ ಇಸ್ಲಾಮಿಕ್ ಸರ್ಕಾರ ಸ್ಥಾಪನೆ – ಪೊಲೀಸರಿಗೆ ಸಿಕ್ತು ಹೀಗೊಂದು ದಾಖಲೆ
Advertisement
Advertisement
ಸ್ಟಾಲಿನ್ ಅವರು ತಮಗೆ ಕೋವಿಡ್ ಸೋಂಕು ತಗುಲಿದ್ದ ಬಗ್ಗೆ ಮಂಗಳವಾರ ತಿಳಿಸಿದ್ದರು. ನನಗೆ ಆಯಾಸ ಎನಿಸುತ್ತಿದ್ದು, ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಫಲಿತಾಂಶ ಪಾಸಿಟಿವ್ ಆಗಿತ್ತು. ಈ ಹಿನ್ನೆಲೆ ನಾನು ಸೆಲ್ಫ್ ಐಸೋಲೇಷನ್ನಲ್ಲಿ ಇದ್ದೇನೆ ಎಂದು 2 ದಿನಗಳ ಹಿಂದೆ ತಿಳಿಸಿದ್ದರು. ಇದನ್ನೂ ಓದಿ: ಮಾಲ್ನಲ್ಲಿ ನಮಾಜ್ – ಮಾಲ್ ಬಹಿಷ್ಕರಿಸುವಂತೆ ಹಿಂದೂ ಸಂಘಟನೆಗಳಿಂದ ಕರೆ
Advertisement
ತಮಿಳುನಾಡು ಸಿಎಂ ಜನರಿಗೆ ಮಾಸ್ಕ್ ಧರಿಸಲು ಹಾಗೂ ಸೂಕ್ತ ಸಮಯಗಳಲ್ಲಿ ಲಸಿಕೆಗಳನ್ನು ತೆಗೆದುಕೊಳ್ಳಲು ಮನವಿ ಮಾಡಿದ್ದಾರೆ.