Recent News

ಮಹಾರಾಷ್ಟ್ರ ಡಾನ್ಸ್ ಬಾರ್ ಗಳಿಗೆ ‘ಸುಪ್ರೀಂ’ನಿಂದ ರಿಲೀಫ್ – ಕೋರ್ಟ್ ಹೇಳಿದ್ದೇನು?

ನವದೆಹಲಿ: ಮಹಾರಾಷ್ಟ್ರದಲ್ಲಿ ಡಾನ್ಸ್ ಬಾರ್ ಗಳ ಕಾರ್ಯನಿರ್ವಹಣೆಗೆ ಅನುಮತಿ ನೀಡುವುದಕ್ಕೆ ನಿರ್ಬಂಧ ಹೇರಿ 2016 ರಲ್ಲಿ ಜಾರಿಗೆ ತಂದಿದ್ದ ನಿಯಮಕ್ಕೆ ಸುಪ್ರೀಂ ಕೋರ್ಟ್ ಗುರುವಾರ ಕೆಲ ಬದಲಾವಣೆಗಳನ್ನು ಮಾಡಿ ಆದೇಶ ನೀಡಿದೆ.

ಡ್ಯಾನ್ಸ್ ಬಾರ್ ಗಳಲ್ಲಿ ನೃತ್ಯ ಮಾಡುವವರಿಗೆ ಗ್ರಾಹಕರು ಟಿಪ್ಸ್ ರೂಪದಲ್ಲಿ ಹಣ ನೀಡುವುದಕ್ಕೆ ಅವಕಾಶ ನೀಡಿದ್ದು, ಆದರೆ ಡಾನ್ಸರ್ಸ್ ಮೇಲೆ ನೋಟು ಎಸೆಯುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ. ಅಲ್ಲದೇ ಸಿಸಿಟಿವಿ ಕಡ್ಡಾಯ ಅಳವಡಿಕೆಯಿಂದ ಗ್ರಾಹಕರ ಖಾಸಗಿತನಕ್ಕೆ ಧಕ್ಕೆಯಾಗುತ್ತೆ ಎಂದು ಸಿಸಿಟಿವಿ ಅಳವಡಿಕೆ ಕಾನೂನಿಗೆ ವಿನಾಯ್ತಿ ನೀಡಿದೆ.

ಪ್ರಮುಖವಾಗಿ ಧಾರ್ಮಿಕ ಕೇಂದ್ರಗಳು ಮತ್ತು ಶಿಕ್ಷಣ ಸಂಸ್ಥೆಗಳಿಂದ 1 ಕಿ.ಮೀ. ಒಳಗೆ ಬಾರ್ ಗಳನ್ನು ತೆರೆಯುವಂತಿಲ್ಲ ಎಂಬ ಕಡ್ಡಾಯ ನಿಯಮವನ್ನು ತೆಗೆದುಹಾಕಿದೆ. ಉಳಿದಂತೆ ಡ್ಯಾನ್ಸ್ ಬಾರ್ ಗಳು ಸಾಯಂಕಾಲ 6 ಗಂಟೆಯಿಂದ ರಾತ್ರಿ 11.30 ರವರೆಗೆ ಮಾತ್ರ ಕಾರ್ಯನಿರ್ವಹಿಸಬೇಕೆಂಬ ಮಹಾರಾಷ್ಟ್ರ ಸರ್ಕಾರದ ನಿಯಮವನ್ನು ಎತ್ತಿಹಿಡಿದಿದೆ. ಅಲ್ಲದೇ ಬಾರ್ ಗರ್ಲ್ಸ್ ಗಳ ಯೋಗಕ್ಷೇಮಕ್ಕೆ ಕ್ರಮ ವಹಿಸುವುದು ಸೇರಿದಂತೆ 10 ಹಲವು ಅಂಶಗಳನ್ನ ಸುಪ್ರೀಂ ಕೋರ್ಟ್ ಮುಂದಿಟ್ಟಿದೆ. ಈ ಸಂಬಂಧ ವಿಸ್ತೃತವಾಗಿ ಮುಂದಿನ ಅಂತಿಮ ವಿಚಾರಣೆ ವೇಳೆ ನ್ಯಾಯಾಲಯ ಕೈಗೆತ್ತಿಕೊಳ್ಳಲಿದೆ.

ಅಂದಹಾಗೇ ಸರ್ಕಾರ ಜಾರಿಗೆ ತಂದಿದ್ದ ಕಾಯ್ದೆ ಅಸಂವಿಧಾನಿಕ ಎಂದು ಭಾರತೀಯ ಹೋಟೆಲ್ ಮತ್ತು ರೆಸ್ಟೋರೆಂಟ್ ಸಂಘ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *