BellaryDistrictsKarnatakaLatestMain Post

ತವರು ಜಿಲ್ಲೆಗೆ ತೆರಳಲು ಮಾಜಿ ಸಚಿವರಿಗೆ ಸುಪ್ರೀಂ ಅನುಮತಿ

ಬಳ್ಳಾರಿ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಬಳ್ಳಾರಿಗೆ ಹೋಗೋದಕ್ಕೆ ಸುಪ್ರೀಂಕೋರ್ಟ್ ಅನುಮತಿ ನೀಡಿದೆ.

ಹೀಗಾಗಿ ಎರಡು ದಿನಗಳ ಮಟ್ಟಿಗೆ ತಮ್ಮ ತವರು ಜಿಲ್ಲೆಗೆ ರೆಡ್ಡಿ ಹೋಗಬಹುದಾಗಿದೆ. ದಸರಾ ಆಚರಣೆಯ ಹಿನ್ನೆಲೆಯಲ್ಲಿ ಸರ್ವೋಚ್ಛ ನ್ಯಾಯಾಲಯ ಈ ವಿನಾಯಿತಿ ನೀಡಿದೆ. ಸೆಪ್ಟೆಂಬರ್ 29 ಮತ್ತು 30ರಂದು ರೆಡ್ಡಿ ಗಣಿನಾಡಲ್ಲಿ ಇರಬಹುದು ಅಂತಾ ನ್ಯಾಯಮೂರ್ತಿಗಳಾದ ಎಕೆ ಸಿಕ್ರಿ ಮತ್ತು ಅಶೋಕ್ ಭೂಷಣ್ ಪೀಠ ಹೇಳಿದೆ.

ಜನಾರ್ದನ ರೆಡ್ಡಿಯವರು ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಈ ಹಿಂದೆ ಮಗಳ ಮದುವೆ ಸಂದರ್ಭದಲ್ಲಿ ಬಳ್ಳಾರಿಗೆ ಹೋಗೋದಕ್ಕೆ ಅನುಮತಿ ಸಿಕ್ಕಿತ್ತು. ಆಗ ಅವರ ಅಭಿಮಾನಿಗಳು ಅದ್ಧೂರಿ ಸ್ವಾಗತ ನೀಡಿದ್ದರು. ಇದೀಗ ಮತ್ತೆ ಬಳ್ಳಾರಿಗೆ ತೆರಳುತ್ತಿರೋ ರೆಡ್ಡಿಯನ್ನು ಸ್ವಾಗತಿಸಲು ಅಭಿಮಾನಿಗಳು ಕಾಯುತ್ತಿದ್ದಾರೆ.

vlcsnap 2017 09 23 09h39m40s9

Related Articles

Leave a Reply

Your email address will not be published. Required fields are marked *