– ಎಸ್‌ಐಆರ್‌ನಲ್ಲಿ ಭಗತ್ ಸಿಂಗ್ ಫೋಟೋ..!
ನವದೆಹಲಿ: ಕೇಂದ್ರ ಚುನಾವಣಾ ಆಯೋಗದ ಹೊಸ ಫಾರ್ಮ್-6 ಸಿಂಧುತ್ವದ ಬಗ್ಗೆ ತಾವು ಎಂದಿಗೂ ತೀರ್ಪು ನೀಡಿಲ್ಲ ಎಂದು ಸುಪ್ರೀಂ ಕೋರ್ಟ್ (Supreme Court) ಸ್ಪಷ್ಟನೆ ನೀಡಿದೆ.
ನಮ್ಮ ಬಾಯಿಗೆ ಮಾತುಗಳನ್ನು ತುರುಕಬೇಡಿ. ಈ ವರ್ಷದ ಆರಂಭದಲ್ಲಿ ಬಿಹಾರದಲ್ಲಿ ಮತದಾರರ ಎಸ್‌ಐಆರ್ ಪ್ರಕ್ರಿಯೆಯನ್ನು ಪರಿಶೀಲಿಸಿದಾಗ, ಈ ಪರಿಷ್ಕೃತ ನಮೂನೆಯು ಅಸ್ತಿತ್ವದಲ್ಲಿರಲಿಲ್ಲ ಅಂತ ಒತ್ತಿ ಹೇಳಿದೆ. ಅಲ್ಲದೆ, ಹೊಸ ಫಾರ್ಮ್-6 ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ಅಕ್ಟೋಬರ್ 27ರಂದು ಪರಿಶೀಲಿಸೋದಾಗಿ ಹೇಳಿದೆ. ಇದನ್ನೂ ಓದಿ: SIR ನಲ್ಲಿ ಅಕ್ರಮ ಆರೋಪ – ಚುನಾವಣಾ ಆಯೋಗದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ರಾಹುಲ್ ಗಾಂಧಿ ರಿಟ್ ಅರ್ಜಿ ಸಲ್ಲಿಕೆ
ಎಸ್‌ಐಆರ್‌ನಲ್ಲಿ ಫಾರ್ಮ್-6ಕ್ಕೆ ಲಗತ್ತಿಸಲಾದ ಘೋಷಣೆ (ಡಿಕ್ಲರೇಷನ್)ಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ ಎಂಬ ಚುನಾವಣಾ ಆಯೋಗದ ಹೇಳಿಕೆಯ ಕುರಿತು ವಿವಾದವೊಂದು ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಸ್ಪಷ್ಟೀಕರಣ ಮಹತ್ವ ಪಡೆದುಕೊಂಡಿದೆ.
ಮತ್ತೊಂದ್ಕಡೆ, ಎಸ್‌ಐಆರ್ ವಿರುದ್ಧ ವಿರೋಧ ಪಕ್ಷಗಳು ದೇಶಾದ್ಯಂತ ರಣಕಹಳೆ ಮೊಳಗಿಸಿರುವಾಗಲೇ ಪಂಜಾಬ್‌ನಲ್ಲಿ ಮಹಾ ಎಡವಟ್ಟು ನಡೆದಿದೆ. ಪಂಜಾಬ್‌ನ ಲುಧಿಯಾನಾ ವೋಟರ್ ಲಿಸ್ಟ್ನಲ್ಲಿ ಸ್ವತಂತ್ರ ಹೋರಾಟಗಾರ ಭಗತ್ ಸಿಂಗ್ ಫೋಟೋ ಮುದ್ರಣವಾಗಿದೆ. ವಿವಾದ ಬೆನ್ನಲ್ಲೇ ಚುನಾವಣಾ ಆಯೋಗ ತಪ್ಪು ಸರಿಪಡಿಸಿರೋದಾಗಿ ಹೇಳಿಕೆ ನೀಡಿದೆ. ಇದನ್ನೂ ಓದಿ: ಸುಪ್ರೀಂ ಕೋರ್ಟ್ ಬಾಗಿಲು ಎಲ್ಲರಿಗೂ ತೆರೆದಿದೆ, ಮನವಿ ಕೊಡೋ ಬದಲು ಕೋರ್ಟ್‌ಗೆ ಅರ್ಜಿ ಹಾಕಲಿ: ಸಿಜೆಐ
ಭಗತ್ ಸಿಂಗ್ ಫೋಟೋ ವಿಚಾರಕ್ಕೆ ದೆಹಲಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಕಿಡಿಕಾರಿದ್ದಾರೆ. ಆರ್‌ಎಸ್‌ಎಸ್ ಕಚೇರಿಯಲ್ಲಿ ಎಸ್‌ಐಆರ್ ನಡೆಯುತ್ತಿದೆ. ಬಿಜೆಪಿ ಏನು ಬೇಕಾದರೂ ಮಾಡಲು ಸಿದ್ಧವಾಗಿದೆ ಅಂತ ಚುನಾವಣಾ ಆಯೋಗದ ವಿರುದ್ಧ ಹರಿಪ್ರಸಾದ್ ಆಕ್ರೋಶ ಹೊರಹಾಕಿದ್ದಾರೆ.

