ಮಂಗಳೂರು: ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ (Dharmasthala Soujanya Case) ಮರುತನಿಖೆ ಚುರುಕುಗೊಂಡಿದೆ. ತನಿಖೆಯಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು ಎಸ್ಐಟಿ ತಂಡ 2012ರಲ್ಲಿ ತನಿಖಾಧಿಕಾರಿಯಾಗಿದ್ದ ಯೋಗೇಶ್ಗೆ ಬುಲಾವ್ ನೀಡಿದ್ದಾರೆ.
ವಿಚಾರಣೆಗೆ ಹಾಜರಾಗುವಂತೆ ತನಿಖಾ ತಂಡ ಪೊಲೀಸ್ ಅಧಿಕಾರಿ ಯೋಗೇಶ್ಗೆ ಸೂಚಿಸಿದೆ. 2012ರಲ್ಲಿ ಸೌಜನ್ಯ ಕೊಲೆಯಾದಾಗ ನಡೆದ ತನಿಖೆಯಲ್ಲಿ ಯೋಗೇಶ್ ಅವರೇ ತನಿಖಾಧಿಕಾರಿಯಾಗಿದ್ರು. ಇದೇ ಯೋಗೇಶ್ ಮೇಲೆ ಸೌಜನ್ಯ ಪೋಷಕರು ಗಂಭೀರ ಆರೋಪ ಮಾಡಿದ್ರು.
ತನಿಖೆಯ ಪ್ರಾಥಮಿಕ ಹಂತದಲ್ಲಿ ಪೊಲೀಸ್ ಅಧಿಕಾರಿ ಯೋಗೇಶ್ ಸಾಕ್ಷ್ಯನಾಶ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಇದೀಗ ಮರುತನಿಖೆ ಕೈಗೆತ್ತಿಕೊಂಡಿರುವ ಎಸ್ಐಟಿ ಟೀಂ, ತನಿಖೆ ಆರಂಭದಲ್ಲೇ ಯೋಗೇಶ್ಗೆ ಬುಲಾವ್ ನೀಡಿರೋದು ತೀವ್ರ ಕುತೂಹಲ ಮೂಡಿಸಿದೆ.
ಈ ವಾರದೊಳಗೆ ಎಸ್ಐಟಿ ವಿಚಾರಣೆಗೆ ಯೋಗೇಶ್ ಹಾಜರಾಗಲಿದ್ದಾರೆ.
